ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ಮಾಡಿಲ್ಲ-ನಾಡಗೌಡ

ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ಮಾಡಿಲ್ಲ-ನಾಡಗೌಡ

ಮುದ್ದೇಬಿಹಾಳ : ಹಿಂದಿನ ಸರಕಾರದ ಅವಧಿಯಲ್ಲಿ ಈ ರಸ್ತೆ ಕಾಮಗಾರಿಗೆ ಮಂಜೂರಾತಿ ಸಿಕ್ಕಿತ್ತು.ಆದರೆ ಆಗ ಚುನಾವಣಾ ಆರಂಭವಾಗಿತ್ತು.ಚುನಾವಣಾ ಸಮಯದಲ್ಲಿ ಸರಕಾರ ಅನುಮತಿ ಕೊಟ್ಟಿದ್ದನ್ನು ಹಣಕಾಸಿನ ಲಭ್ಯತೆ ಇಲ್ಲದೇ ಕೆಲಸ ತಗೆದುಕೊಂಡಿದ್ದಾರೆ ಎಂದು ಸ್ಥಗಿತಗೊಳಿಸಲು ಸಿದ್ಧರಾಮಯ್ಯನವರ ಸರಕಾರ ಬಂದಾಗ ಸೂಚಿಸಿತ್ತು.ಆದರೆ ನಾನು ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಬಳಿ ಅನುಮತಿ ನೀಡಲು ಒತ್ತಾಯಪಡಿಸಿ ಕೆಲಸ ಮಾಡಿಸಿಕೊಂಡು ಬಂದಿದ್ದೇನೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಮತಕ್ಷೇತ್ರದ ವನಹಳ್ಳಿ ಗ್ರಾಮದಲ್ಲಿ ಸನ್ 2022-23ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ ವನಹಳ್ಳಿ-ಬಳಗಾನೂರ ಕಾಲುವೆ ರಸ್ತೆಯ ಸುಧಾರಣೆ ಕಾಮಗಾರಿಗೆ ಚಾಲನೆ ನಿಡಿ ಅವರು ಮಾತನಾಡಿದರು.

ಇದರಲ್ಲಿ ರಾಜಕೀಯ ದುರುದ್ದೇಶ ಮಾಡಿಲ್ಲ.ಹಿಂದಿನ ಶಾಸಕರು ಮಾಡಿರುವ ಯೋಜನೆಗಳನ್ನು ತಡೆಯುವ ಕೆಲಸ ಮಾಡುವುದಿಲ್ಲ.ಆಡಳಿತಾತ್ಮಕ ಮಂಜೂರಾತಿ 2024 ರಲ್ಲಿ ಕೊಡಿಸಿದ್ದೇವೆ.ಕೆಲಸ ಆರಂಭಿಸಬೇಕಿತ್ತು . ಆದರೆ ಗುತ್ತಿಗೆದಾರರು ಏಕೆ ಮಾಡಲಿಲ್ಲ ಎಂಬುದು ಗೊತ್ತಿಲ್ಲ.ಇಲಾಖೆ ಹಾಗೂ ಗುತ್ತಿಗೆದಾರರ ಮಧ್ಯೆ ಪ್ರವೇಶ ಮಾಡುವುದಿಲ್ಲ.ಇದರಲ್ಲಿ ರಾಜಕಾರಣ ಮಾಡಬೇಕಾಗಿಲ್ಲ.3.41 ಕೋಟಿ ರೂ. ವೆಚ್ಚದಲ್ಲಿ ಕೆಲಸ ಮಾಡಬೇಕಾಗುತ್ತದೆ.ಅಂದಾಜು 4 ಕಿಮೀ ರಸ್ತೆ ಮಾಡಬೇಕಾಗಿದೆ.ರಸ್ತೆ ಆದರೆ ರೈತರಿಗೆ ಅನುಕೂಲವಾಗಲಿದ್ದು ರೈತರು ಅಡಚಣೆ ಮಾಡಬಾರದು.ಎಲ್ಲೆಲ್ಲಿ ರಸ್ತೆಗಳಾಗಿದೆಯೋ ಅಲ್ಲಲ್ಲಿ ಜಮೀನುಗಳ ಬೆಲೆ ಹೆಚ್ಚಳವಾಗುತ್ತದೆ ಎಂದರು.

ಸಿದ್ಧರಾಮಯ್ಯನವರ ಸರ್ಕಾರದಿಂದ ಬರುವ ತಿಂಗಳಲ್ಲಿ ಐದು ಕೆಜಿ ಅಕ್ಕಿ ನೀಡುತ್ತಿದ್ದು ಉಳಿದಿದ್ದು ಕಿಟ್ ರೂಪದಲ್ಲಿ ಹಂಚಿಕೆ ಮಾಡಲಾಗುತ್ತದೆ.ನನ್ನ ಶಾಸಕತ್ವದ ಅವಧಿಯಲ್ಲಿ 18 ಸಾವಿರ ಮನೆಗಳನ್ನು ಕೊಟ್ಟಿದ್ದೇವೆ.ಇನ್ನೂ ಮನೆಗಳು ಬೇಕು ಎಂಬ ಬೇಡಿಕೆ ಇದೆ.ಮತಕ್ಷೇತ್ರದಲ್ಲಿ ಪಿಎಂಜಿಎಸ್‌ವೈ ಅಡಿ 31 ಕಿ.ಮೀ ರಸ್ತೆ ಮಾಡುತ್ತಿದೆ. 15 ಕೋಟಿ ಗ್ರಾಮೀಣ ರಸ್ತೆ, 20 ಕೋಟಿ ರೂ.ಪಿಡಿಬ್ಲ್ಯುಡಿ, ಒಂದು ಕೋಟಿ ರೂ.ಶಾಲಾ ದುರಸ್ತಿಗೆ ನೀಡಲಾಗಿದೆ.ಸಮುದಾಯ ಭವನಗಳಿಗೆ 4.50 ಕೋಟಿ ನೀಡಿದ್ದೇನೆ.ಶಾಸಕರ ವಿವೇಚನಾ ಕೋಟಾದಲ್ಲಿ 50 ಕೋಟಿ ರೂ.ನೀಡಿದ್ದು ಕೆಲಸಗಳು ಆರಂಭವಾಗುತ್ತವೆ ಎಂದರು.

ನಾವು ಧ್ಚಜ ಕಟ್ಟಿ,ಬಣ್ಣ ಹಚ್ಚಿಕೊಂಡು ಅಡ್ಡಾಡಿ ಎನ್ನುವುದಿಲ್ಲ.ನಾವು ಬದುಕು ಕಟ್ಟಿಕೊಳ್ಳಿ ಎಂದು ಯೋಜನೆಗಳನ್ನು ರೂಪಿಸಿದ್ದೇವೆ.ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ ಪಾಟೀಲ ನೇತೃತ್ವದಲ್ಲಿ ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದರು.

ಶಕ್ತಿ,ಗೃಹಲಕ್ಷ್ಮೀ ಯೋಜನೆಯಿಂದ ಹೆಣ್ಣು ಮಕ್ಕಳಿಗೆ ಸ್ವಾಭಿಮಾನ,ಧೈರ್ಯ ಬಂದಿದೆ ಎಂದರು.ಗ್ರಾಮದ ಮುಖಂಡರಾದ ಮಲ್ಲನಗೌಡ ಕಾಮರೆಡ್ಡಿ, ಬಸನಗೌಡ ಮೇಟಿ,ಬಸನಗೌಡ ಬಸರಕೋಡ
ಸಂಗನಗೌಡ ಬಿರಾದಾರ,ಬಸಯ್ಯ ಹಿರೇಮಠ,ಶಾಂತಕುಮಾರ ಚಟ್ಟೇರ, ಅಯ್ಯನಗೌಡ ನಾಡಗೌಡ,ಬಾವೂರ ಗ್ರಾಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಪಿಎಂಜಿಎಸ್‌ವೈ ಎಇಇ ಜ್ಞಾನೇಶ ಮುರಾಳ,ಶೇಖರಯ್ಯ ಹಿರೇಮಠ,ಪಿ.ಎಂ.ಜಿ.ಎಸ್.ವೈ ಎಇ ಪ್ರವೀಣ ರಾಠೋಡ ಇದ್ದರು.ಮುದ್ದೇಬಿಹಾಳ : ಹಿಂದಿನ ಸರಕಾರದ ಅವಧಿಯಲ್ಲಿ ಈ ರಸ್ತೆ ಕಾಮಗಾರಿಗೆ ಮಂಜೂರಾತಿ ಸಿಕ್ಕಿತ್ತು.ಆದರೆ ಆಗ ಚುನಾವಣಾ ಆರಂಭವಾಗಿತ್ತು.ಚುನಾವಣಾ ಸಮಯದಲ್ಲಿ ಸರಕಾರ ಅನುಮತಿ ಕೊಟ್ಟಿದ್ದನ್ನು ಹಣಕಾಸಿನ ಲಭ್ಯತೆ ಇಲ್ಲದೇ ಕೆಲಸ ತಗೆದುಕೊಂಡಿದ್ದಾರೆ ಎಂದು ಸ್ಥಗಿತಗೊಳಿಸಲು ಸಿದ್ಧರಾಮಯ್ಯನವರ ಸರಕಾರ ಬಂದಾಗ ಸೂಚಿಸಿತ್ತು.ಆದರೆ ನಾನು ಪಕ್ಷದ ವರಿಷ್ಠರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಬಳಿ ಅನುಮತಿ ನೀಡಲು ಒತ್ತಾಯಪಡಿಸಿ ಕೆಲಸ ಮಾಡಿಸಿಕೊಂಡು ಬಂದಿದ್ದೇನೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಮತಕ್ಷೇತ್ರದ ವನಹಳ್ಳಿ ಗ್ರಾಮದಲ್ಲಿ ಸನ್ 2022-23ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆಯಡಿ ವನಹಳ್ಳಿ-ಬಳಗಾನೂರ ಕಾಲುವೆ ರಸ್ತೆಯ ಸುಧಾರಣೆ ಕಾಮಗಾರಿಗೆ ಚಾಲನೆ ನಿಡಿ ಅವರು ಮಾತನಾಡಿದರು.

ಇದರಲ್ಲಿ ರಾಜಕೀಯ ದುರುದ್ದೇಶ ಮಾಡಿಲ್ಲ.ಹಿಂದಿನ ಶಾಸಕರು ಮಾಡಿರುವ ಯೋಜನೆಗಳನ್ನು ತಡೆಯುವ ಕೆಲಸ ಮಾಡುವುದಿಲ್ಲ.ಆಡಳಿತಾತ್ಮಕ ಮಂಜೂರಾತಿ 2024 ರಲ್ಲಿ ಕೊಡಿಸಿದ್ದೇವೆ.ಕೆಲಸ ಆರಂಭಿಸಬೇಕಿತ್ತು . ಆದರೆ ಗುತ್ತಿಗೆದಾರರು ಏಕೆ ಮಾಡಲಿಲ್ಲ ಎಂಬುದು ಗೊತ್ತಿಲ್ಲ.ಇಲಾಖೆ ಹಾಗೂ ಗುತ್ತಿಗೆದಾರರ ಮಧ್ಯೆ ಪ್ರವೇಶ ಮಾಡುವುದಿಲ್ಲ.ಇದರಲ್ಲಿ ರಾಜಕಾರಣ ಮಾಡಬೇಕಾಗಿಲ್ಲ.3.41 ಕೋಟಿ ರೂ. ವೆಚ್ಚದಲ್ಲಿ ಕೆಲಸ ಮಾಡಬೇಕಾಗುತ್ತದೆ.ಅಂದಾಜು 4 ಕಿಮೀ ರಸ್ತೆ ಮಾಡಬೇಕಾಗಿದೆ.ರಸ್ತೆ ಆದರೆ ರೈತರಿಗೆ ಅನುಕೂಲವಾಗಲಿದ್ದು ರೈತರು ಅಡಚಣೆ ಮಾಡಬಾರದು.ಎಲ್ಲೆಲ್ಲಿ ರಸ್ತೆಗಳಾಗಿದೆಯೋ ಅಲ್ಲಲ್ಲಿ ಜಮೀನುಗಳ ಬೆಲೆ ಹೆಚ್ಚಳವಾಗುತ್ತದೆ ಎಂದರು.

ಸಿದ್ಧರಾಮಯ್ಯನವರ ಸರ್ಕಾರದಿಂದ ಬರುವ ತಿಂಗಳಲ್ಲಿ ಐದು ಕೆಜಿ ಅಕ್ಕಿ ನೀಡುತ್ತಿದ್ದು ಉಳಿದಿದ್ದು ಕಿಟ್ ರೂಪದಲ್ಲಿ ಹಂಚಿಕೆ ಮಾಡಲಾಗುತ್ತದೆ.ನನ್ನ ಶಾಸಕತ್ವದ ಅವಧಿಯಲ್ಲಿ 18 ಸಾವಿರ ಮನೆಗಳನ್ನು ಕೊಟ್ಟಿದ್ದೇವೆ.ಇನ್ನೂ ಮನೆಗಳು ಬೇಕು ಎಂಬ ಬೇಡಿಕೆ ಇದೆ.ಮತಕ್ಷೇತ್ರದಲ್ಲಿ ಪಿಎಂಜಿಎಸ್‌ವೈ ಅಡಿ 31 ಕಿ.ಮೀ ರಸ್ತೆ ಮಾಡುತ್ತಿದೆ. 15 ಕೋಟಿ ಗ್ರಾಮೀಣ ರಸ್ತೆ, 20 ಕೋಟಿ ರೂ.ಪಿಡಿಬ್ಲ್ಯುಡಿ, ಒಂದು ಕೋಟಿ ರೂ.ಶಾಲಾ ದುರಸ್ತಿಗೆ ನೀಡಲಾಗಿದೆ.ಸಮುದಾಯ ಭವನಗಳಿಗೆ 4.50 ಕೋಟಿ ನೀಡಿದ್ದೇನೆ.ಶಾಸಕರ ವಿವೇಚನಾ ಕೋಟಾದಲ್ಲಿ 50 ಕೋಟಿ ರೂ.ನೀಡಿದ್ದು ಕೆಲಸಗಳು ಆರಂಭವಾಗುತ್ತವೆ ಎಂದರು.

ನಾವು ಧ್ಚಜ ಕಟ್ಟಿ,ಬಣ್ಣ ಹಚ್ಚಿಕೊಂಡು ಅಡ್ಡಾಡಿ ಎನ್ನುವುದಿಲ್ಲ.ನಾವು ಬದುಕು ಕಟ್ಟಿಕೊಳ್ಳಿ ಎಂದು ಯೋಜನೆಗಳನ್ನು ರೂಪಿಸಿದ್ದೇವೆ.ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ ಪಾಟೀಲ ನೇತೃತ್ವದಲ್ಲಿ ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದರು.

ಶಕ್ತಿ,ಗೃಹಲಕ್ಷ್ಮೀ ಯೋಜನೆಯಿಂದ ಹೆಣ್ಣು ಮಕ್ಕಳಿಗೆ ಸ್ವಾಭಿಮಾನ,ಧೈರ್ಯ ಬಂದಿದೆ ಎಂದರು.ಗ್ರಾಮದ ಮುಖಂಡರಾದ ಮಲ್ಲನಗೌಡ ಕಾಮರೆಡ್ಡಿ, ಬಸನಗೌಡ ಮೇಟಿ,ಬಸನಗೌಡ ಬಸರಕೋಡ
ಸಂಗನಗೌಡ ಬಿರಾದಾರ,ಬಸಯ್ಯ ಹಿರೇಮಠ,ಶಾಂತಕುಮಾರ ಚಟ್ಟೇರ, ಅಯ್ಯನಗೌಡ ನಾಡಗೌಡ,ಬಾವೂರ ಗ್ರಾಪಂ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಪಿಎಂಜಿಎಸ್‌ವೈ ಎಇಇ ಜ್ಞಾನೇಶ ಮುರಾಳ,ಶೇಖರಯ್ಯ ಹಿರೇಮಠ,ಪಿ.ಎಂ.ಜಿ.ಎಸ್.ವೈ ಎಇ ಪ್ರವೀಣ ರಾಠೋಡ ಇದ್ದರು.

Latest News

ಬಾವಿ ನೀರು ಖಾಲಿಯಾದರೂ ಪತ್ತೆಯಾಗದ ತಂದೆ :               ತೋಟದ ಬಾವಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ

ಬಾವಿ ನೀರು ಖಾಲಿಯಾದರೂ ಪತ್ತೆಯಾಗದ ತಂದೆ :   ತೋಟದ ಬಾವಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ

ಮುದ್ದೇಬಿಹಾಳ : ಅಕ್ಕ ತಂಗಿಯರ ಶವ ಬಾವಿಯಲ್ಲಿ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ತಾಲ್ಲೂಕಿನ

ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞೆ : ಬಿ.ಕೆ. ಶೃತಿ

ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞೆ : ಬಿ.ಕೆ. ಶೃತಿ

ವಿಜಯಪುರ: ನಾವು ನಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳಲು ದುಶ್ಚಟಗಳಿಂದ ದೂರ ಇರಬೇಕೆಂದು ನಗರದ ಪ್ರಜಾಪಿತ ಬ್ರಹ್ಮಕುಮಾರಿ

ಆ.22 ರಂದು ಪುಟ್ಟರಾಜ ಗವಾಯಿ ಜನಪದ ಸಂಘದ ಪದಗ್ರಹಣ

ಆ.22 ರಂದು ಪುಟ್ಟರಾಜ ಗವಾಯಿ ಜನಪದ ಸಂಘದ ಪದಗ್ರಹಣ

ಮುದ್ದೇಬಿಹಾಳ : ಗಾನ ಗಾರುಡಿಗ ಪಂಡಿತ ಪುಟ್ಟರಾಜ ಗವಾಯಿಗಳ ಜನಪದ ಮತ್ತು ಸಾಂಸ್ಕೃತಿಕ ಸಂಘ

ಆ.23 ರಂದು ರಾಯಣ್ಣನವರ ಜಾತ್ರೆ:        ಮುದ್ದೇಬಿಹಾಳದಿಂದ ಐದು ಸಾವಿರ ಜನ ಭಾಗಿ-ಎಂ.ಎನ್.ಮದರಿ

ಆ.23 ರಂದು ರಾಯಣ್ಣನವರ ಜಾತ್ರೆ: ಮುದ್ದೇಬಿಹಾಳದಿಂದ ಐದು ಸಾವಿರ ಜನ ಭಾಗಿ-ಎಂ.ಎನ್.ಮದರಿ

ಮುದ್ದೇಬಿಹಾಳ : ವಿಜಯಪುರದಲ್ಲಿ ಆ.23 ರಂದು ನಡೆಯಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಾತ್ರೆಯನ್ನು ಯಶಸ್ವಿಗೊಳಿಸುವಂತೆ

ಮುದ್ದೇಬಿಹಾಳ ;ಅಂಜುಮನ್‌ಗೆ 92.95% ರಷ್ಟು ಮತದಾನ

ಮುದ್ದೇಬಿಹಾಳ ;ಅಂಜುಮನ್‌ಗೆ 92.95% ರಷ್ಟು ಮತದಾನ

ಮುದ್ದೇಬಿಹಾಳ : ತೀವ್ರ ತುರುಸಿನಿಂದ ಕೂಡಿದ ಇಲ್ಲಿನ ಅಂಜುಮನ್ ಇಸ್ಲಾಂ ಕಮೀಟಿ ಚುನಾವಣೆಯಲ್ಲಿ ಸೋಮವಾರ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು ಒಟ್ಟು ಶೇ.92.95ರಷ್ಟು ಮತದಾನ ಆಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 2625 ಮತದಾರರಲ್ಲಿ 2440 ಮತದಾರರು ತಮ್ಮ ಹಕ್ಕು ಚಲಾಯಿಸಿದರು.ಆರಂಭದಲ್ಲಿ ಚುರುಕುಗೊಂಡಿದ್ದ ಮತದಾನ ಪ್ರಕ್ರಿಯೆ ಮದ್ಯಾಹ್ನದ ಹೊತ್ತಿಗೆ ಮಂದಗತಿಯಲ್ಲಿ ಸಾಗಿತ್ತು.ಅಂತಿಮ ಸಮಯ ಮೀರುವ ಮುನ್ನವೇ ಬಹುತೇಕ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಒಂದು ಮತಗಟ್ಟೆಯಲ್ಲಿ ಇಬ್ಬರು ಮತದಾರರು ನಕಲಿ ಮತದಾನಕ್ಕೆ

ಕಾಂಗ್ರೆಸ್‌ ವಿರುದ್ಧ ಪ್ರತಿಭಟನೆ: BJP ಕಾರ್ಯಕರ್ತನ ಪ್ಯಾಂಟ್‌ಗೆ ತಾಗಿದ ಬೆಂಕಿ

ಕಾಂಗ್ರೆಸ್‌ ವಿರುದ್ಧ ಪ್ರತಿಭಟನೆ: BJP ಕಾರ್ಯಕರ್ತನ ಪ್ಯಾಂಟ್‌ಗೆ ತಾಗಿದ ಬೆಂಕಿ

ಗದಗ: ನಗರದ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್‌ ನಾಯಕರ ವಿರುದ್ಧ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಲು ಮುಂದಾದಾಗ ಕಾರ್ಯಕರ್ತರೊಬ್ಬರ ಪ್ಯಾಂಟ್‌ಗೆ ಬೆಂಕಿ ತಾಗಿದೆ. ಕಾಂಗ್ರೆಸ್‌ ನಾಯಕರ ವಿರುದ್ಧ ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತರು ರಸ್ತೆ ಮಧ್ಯೆ ಬೆಂಕಿ ಹಚ್ಚಿ, ಟೈರ್‌ ಸುಡಲು ಯತ್ನಿಸಿದರು. ಪೊಲೀಸರು ಟೈರ್‌ ಅನ್ನು ಕುಸಿದುಕೊಂಡಾಗ ನೂಕಾಟ ಉಂಟಾಯಿತು. ಕಾರ್ಯಕರ್ತರು ಒಮ್ಮೆಲೆ ನುಗ್ಗಿದ್ದರಿಂದ ಕಾರ್ಯಕರ್ತರೊಬ್ಬರ ಪ್ಯಾಂಟ್‌ಗೆ ಬೆಂಕಿ ತಾಗಿದೆ. ಅಲ್ಪ ಪ್ರಮಾಣದಲ್ಲಿ