NATIONAL LEVEL ಮಟ್ಸೋಗಿ-ಡೊ ಟೂರ್ನಿಗೆ ಆಯ್ಕೆ; BAS ಇಂಟರ್‌ನ್ಯಾಶನಲ್ ಸ್ಕೂಲ್ ವಿದ್ಯಾರ್ಥಿಗಳ ಸಾಧನೆ

NATIONAL LEVEL ಮಟ್ಸೋಗಿ-ಡೊ ಟೂರ್ನಿಗೆ ಆಯ್ಕೆ; BAS ಇಂಟರ್‌ನ್ಯಾಶನಲ್ ಸ್ಕೂಲ್ ವಿದ್ಯಾರ್ಥಿಗಳ ಸಾಧನೆ

ಮುದ್ದೇಬಿಹಾಳ : ಜಮ್ಮು ಕಾಶ್ಮೀರದಲ್ಲಿ ಜರುಗಲಿರುವ 20 ನೇ ರಾಷ್ಟ್ರೀಯ ಮಟ್ಸೋಗಿ-ಡೊ(ಮಾರ್ಷಲ್ ಆರ್ಟ್ಸ್) ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಪಟ್ಟಣದ ಬಿಎಎಸ್ ಇಂಟರ್ ನ್ಯಾಶನಲ್ ಶಾಲೆಯ ವಿದ್ಯಾರ್ಥಿಗಳಾದ ಶಕುಂತಲಾ ಶಾರದಳ್ಳಿ, ವಿಕ್ರಾಂತ ಶಾರದಳ್ಳಿ ಅವರನ್ನು ಶಾಲಾ ಆಡಳಿತ ಮಂಡಳಿಯವರು ಮಂಗಳವಾರ ಸನ್ಮಾನಿಸಿದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾಂತಗೌಡ ಬಿರಾದಾರ ಮಾತನಾಡಿ, ಮಾರ್ಷಲ್ ಆರ್ಟ್ಸ್ ತರಬೇತಿದಾರ ಶಿವಕುಮಾರ ಶಾರದಳ್ಳಿ ಅವರ ನೇತೃತ್ವದಲ್ಲಿ ಉತ್ತಮ ತರಬೇತಿ ಪಡೆದಿರುವ ನಮ್ಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಆಯ್ಕೆಯಾಗಿರುವುದು ಶಾಲೆಗೆ ಹಿರಿಮೆ ತಂದಿದೆ ಎಂದರು.

ಬಿಎಎಸ್ ಶಾಲಾ ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಗೆದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿ ಶಾಲೆಗೆ ಕೀರ್ತಿ ತರಬೇಕು ಎಂದು ಶಾಲಾ ಆಡಳಿತ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಪರವಾಗಿ ಶುಭಹಾರೈಸುತ್ತೇನೆ ಎಂದು ಹೇಳಿದರು.

ತರಬೇತಿದಾರ ಶಿವಕುಮಾರ ಶಾರದಳ್ಳಿ ಮಾತನಾಡಿ,ಜಮ್ಮು ಕಾಶ್ಮೀರದಲ್ಲಿ ಇದೇ ಡಿಸೆಂಬರ್ 28 ರಿಂದ 31 ವರೆಗೆ ನಡೆಲಿರವ 20 ನೇ ರಾಷ್ಟ್ರೀಯ ಮಟ್ಸೋಗಿ-ಡೊ(ಮಾರ್ಷಲ್ ಆರ್ಟ್ಸ್) ಕ್ರೀಡಾಕೂಟದಲ್ಲಿ ದೇಶದ ಅಂದಾಜು 15ಕ್ಕೂ ಹೆಚ್ಚು ರಾಜ್ಯಗಳ 1 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಶಾಲೆಯ ಮಾರ್ಗದರ್ಶಕರಾದ ಶಿವನಗೌಡ ಬಿರಾದಾರ, ಕಾರ್ಯದರ್ಶಿ ಸುಮಂಗಳಾ ಬಿರಾದಾರ, ಮುಖ್ಯ ಗುರುಮಾತೆ ರಿಷೀಕಾ ನಾಯ್ಕ, ಗೀತಾ ಬಿರಾದಾರ ಇದ್ದರು.

Latest News

ಕೆಬಿಜೆಎನ್‌ಎಲ್ ಅಧಿಕಾರಿ ವಿರುದ್ಧ ಆರೋಪ:                     ‘ಸರ್ಕಾರ ಹಣ ಕೊಡುತ್ತಿಲ್ಲ,ನೀವೆ ಪಟ್ಟಿ ಹಾಕಿಕೊಂಡು ಕಾಲುವೆ ದುರಸ್ತಿ ಮಾಡಿಕೊಳ್ಳಿ’

ಕೆಬಿಜೆಎನ್‌ಎಲ್ ಅಧಿಕಾರಿ ವಿರುದ್ಧ ಆರೋಪ: ‘ಸರ್ಕಾರ ಹಣ ಕೊಡುತ್ತಿಲ್ಲ,ನೀವೆ ಪಟ್ಟಿ ಹಾಕಿಕೊಂಡು ಕಾಲುವೆ ದುರಸ್ತಿ ಮಾಡಿಕೊಳ್ಳಿ’

ಮುದ್ದೇಬಿಹಾಳ : ಸರ್ಕಾರ ಕಾಲುವೆಗಳ ದುರಸ್ತಿಗೆ ಹಣ ಕೊಡುತ್ತಿಲ್ಲ.ನೀವೇ ಪಟ್ಟಿ ಹಾಕಿಕೊಂಡು ಕಾಲುವೆ ರಿಪೇರಿ

ಬಿಎಚ್‌ಇಓ ಹುದ್ದೆ ಪದೋನ್ನತಿ ವಿಳಂಬ: ಆರೋಗ್ಯ ಸಚಿವ ಯು.ಟಿ.ಖಾದರ್‌ಗೆ ಮನವಿ

ಬಿಎಚ್‌ಇಓ ಹುದ್ದೆ ಪದೋನ್ನತಿ ವಿಳಂಬ: ಆರೋಗ್ಯ ಸಚಿವ ಯು.ಟಿ.ಖಾದರ್‌ಗೆ ಮನವಿ

ಮುದ್ದೇಬಿಹಾಳ : ಆರೋಗ್ಯ ಇಲಾಖೆಯಲ್ಲಿ ಪದವೀಧರ ಆರೋಗ್ಯ ನಿರೀಕ್ಷಣಾಧಿಕಾರಿಗಳು (ಬಿಎಚ್‌ಇಓ) ಹಾಗೂ ಪದವೀಧರ ಪ್ರಾಥಮಿಕ

ಸೆ.15 ರಂದು ಜಗದ್ಗುರು ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಆಚರಿಸಲು ಕಾಶೀಬಾಯಿ ರಾಂಪೂರ ಕರೆ

ಸೆ.15 ರಂದು ಜಗದ್ಗುರು ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ಆಚರಿಸಲು ಕಾಶೀಬಾಯಿ ರಾಂಪೂರ ಕರೆ

ಮುದ್ದೇಬಿಹಾಳ : ದೇಶ-ವಿದೇಶಗಳಲ್ಲಿ ಕೋಟ್ಯಂತರ ಭಕ್ತರನ್ನು ಹೊಂದಿರುವ ಶಕ್ತಿವಂತ ದೇವರೆಂದೇ ಪ್ರಸಿದ್ಧಿಯಾದ ಶ್ರೀ ವೀರಭದ್ರೇಶ್ವರ

ನಾಡಗೌಡರ ವಿರುದ್ಧ ನಡಹಳ್ಳಿ ವಾಗ್ದಾಳಿ:                                 ಶಾಸಕ ನಾಡಗೌಡರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ-ನಡಹಳ್ಳಿ

ನಾಡಗೌಡರ ವಿರುದ್ಧ ನಡಹಳ್ಳಿ ವಾಗ್ದಾಳಿ: ಶಾಸಕ ನಾಡಗೌಡರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ-ನಡಹಳ್ಳಿ

ಮುದ್ದೇಬಿಹಾಳ : ಸಂಪೂರ್ಣ ಬಂದ್ ಮಾಡಿ ಜನರು ಸಹಕರಿಸಿದ್ದಾರೆ.ಶಾಸಕ ನಾಡಗೌಡರ ಮಾತಿಗೆ ಜನರು ಬೆಲೆ

ಬಿಎಎಸ್ ಶಾಲೆಯಲ್ಲಿ ಶಿಕ್ಷಕರ ದಿನದ ಸಂಭ್ರಮ:                   ಗುರು ಕಾರುಣ್ಯದಿಂದಲೇ ಶಿಷ್ಯನ ಏಳ್ಗೆ-ಶಿವನಗೌಡ ಬಿರಾದಾರ

ಬಿಎಎಸ್ ಶಾಲೆಯಲ್ಲಿ ಶಿಕ್ಷಕರ ದಿನದ ಸಂಭ್ರಮ: ಗುರು ಕಾರುಣ್ಯದಿಂದಲೇ ಶಿಷ್ಯನ ಏಳ್ಗೆ-ಶಿವನಗೌಡ ಬಿರಾದಾರ

ಮುದ್ದೇಬಿಹಾಳ : ಮನುಷ್ಯನಿಗೆ ದೈವ ಬಲದೊಂದಿಗೆ ಗುರುವಿನ ಅವಶ್ಯಕತೆ ಬಹಳವಿದೆ. ಇದರಿಂದಲೇ ಇಂದಿನ ಆಧುನಿಕ ದಿನಗಳಲ್ಲಿಯೂ ಗುರುವಿಗೆ ಮಹತ್ವವಿದೆ. ಇದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ ಎಂದು ಬಿ.ಎ.ಎಸ್ ಇಂಟರನ್ಯಾಶನ್ ಶಾಲೆಯ ಕಾರ್ಯದರ್ಶಿ ಎಸ್.ಎಸ್.ಬಿರಾದಾರ ಹೇಳಿದರು. ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿ.ಎ.ಎಸ್. ಇಂಟನ್ಯಾಷನಲ್ ಸ್ಕೂಲ್‌ನಲ್ಲಿ ಬುಧವಾರ ಶಿಕ್ಷಕರ ದಿನಾಚರಣೆ ಹಾಗೂ ಇತ್ತಿಚಿಗೆ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪಠ್ಯಯೊಂದೆ ಅಗತ್ಯವಲ್ಲ. ಪಠ್ಯತರ

ಮಾಜಿ ಶಾಸಕ ನಡಹಳ್ಳಿ ಆಗ್ರಹ:                                                           ರೈತರ ಐದು ಲಕ್ಷ ರೂ.ಗಳವರೆಗೆ ಸಾಲ ಮನ್ನಾ ಮಾಡಿ

ಮಾಜಿ ಶಾಸಕ ನಡಹಳ್ಳಿ ಆಗ್ರಹ: ರೈತರ ಐದು ಲಕ್ಷ ರೂ.ಗಳವರೆಗೆ ಸಾಲ ಮನ್ನಾ ಮಾಡಿ

ಮುದ್ದೇಬಿಹಾಳ : ರಾಜ್ಯದಲ್ಲಿ 199 ತಾಲ್ಲೂಕುಗಳು ಬರಪೀಡಿತ ಪ್ರದೇಶಗಳಾಗಿದ್ದು ಕಾಂಗ್ರೆಸ್ ಸರ್ಕಾರ ರೈತರ ಐದು ಲಕ್ಷಗಳವರೆಗಿನ ಸಾಲ ಮನ್ನಾ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ,ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಆಗ್ರಹಿಸಿದರು. ಪಟ್ಟಣದಲ್ಲಿ ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ ನಡೆದಿರುವ ಧರಣಿ ಸತ್ಯಾಗ್ರಹದ ನಾಲ್ಕನೇ ದಿನದ ಹೋರಾಟದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಮುದ್ದೇಬಿಹಾಳ ತಾಲ್ಲೂಕು ಮಾತ್ರ ಬರಪಟ್ಟಿಗೆ ಸೇರ್ಪಡೆಯಾದರೆ ಸುಮ್ಮನಾಗುವುದಿಲ್ಲ.ಕ್ಷೇತ್ರದ ತಾಳಿಕೋಟಿ ತಾಲ್ಲೂಕು, ಜಿಲ್ಲೆಯ