ಜನಸ್ನೇಹಿ ಸೇವೆ ನೌಕರರ ಮೂಲ ಮಂತ್ರವಾಗಲಿ-ಜಹಾಗೀರದಾರ

ಜನಸ್ನೇಹಿ ಸೇವೆ ನೌಕರರ ಮೂಲ ಮಂತ್ರವಾಗಲಿ-ಜಹಾಗೀರದಾರ

ಮುದ್ದೇಬಿಹಾಳ : ಕೆಪಿಟಿಸಿಎಲ್ ಹಾಗೂ ಹೆಸ್ಕಾಂನಲ್ಲಿ ಕಾರ್ಯನಿರ್ವಹಿಸುವ ನಮ್ಮ ಸಮಾಜದ ಬಾಂಧವರು ಇನ್ನಿತರ ಸಮುದಾಯದವರೊಂದಿಗೆ ಒಳ್ಳೆಯ ಸ್ನೇಹ ಬಾಂಧವ್ಯದೊoದಿಗೆ ಸಾರ್ವಜನಿಕರಿಗೆ ಜನಸ್ನೇಹಿ ಸೇವೆ ನೀಡಬೇಕು ಎಂದು ಕವಿಪ್ರನಿನಿ ಮುಸ್ಲಿಂ ನೌಕರರ ಕಲ್ಯಾಣ ಮಂಡಳಿ ಸಂಘದ ವಿಜಯಪುರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೈನೂದ್ದೀನ ಜಹಾಗೀರದಾರ ಹೇಳಿದರು.

ಪಟ್ಟಣದ ದಿ ಬಾಗವಾನ ಅಲ್ಪಸಂಖ್ಯಾತರ ಕೋ ಆಪರೇಟಿವ್ ಸೊಸೈಟಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿದರು. ನಾವು ಸೇವೆ ಸಲ್ಲಿಸುವುದು ಸಾರ್ವಜನಿಕರು,ರೈತರಿಗಾಗಿ ಎಂಬುದನ್ನು ಮರೆಯಬಾರದು.ನಮ್ಮ ನಡುವಳಿಕೆ ಬಗ್ಗೆ ಇತರರು ಬೆರಳು ಮಾಡಿ ತೋರಿಸದಂತೆ ಇರಬೇಕು.ಮುಸ್ಲಿಂ ನೌಕರರ ಕಲ್ಯಾಣ ಸಂಘಟನೆ ಸಲುವಾಗಿ ಈ ಸಂಘ ಅಸ್ತಿತ್ವದಲ್ಲಿದ್ದು ಜಿಲ್ಲೆಯಲ್ಲಿ ನಮ್ಮ ಸಮಾಜದವರನ್ನು ಒಗ್ಗೂಡಿಸುವ ಜೊತೆಗೆ ಸಾರ್ವಜನಿಕರೊಂದಿಗೆ ಬೆರೆಯುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕೇoದ್ರ ಸಮೀತಿ ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ನಾಯ್ಕೋಡಿ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ವಿದ್ಯುತ್ ಸಂಬoಧಿ ಇಲಾಖೆಯಲ್ಲಿ ನಮ್ಮ ಸಮಾಜದ ನೌಕರರ ಸಂಖ್ಯೆ ಹೆಚ್ಚಿದ್ದರೂ ಸಂಘಟನೆಯಾಗಿಲ್ಲ ಎಂಬ ಕೊರಗು ಇತ್ತು.ಅದನ್ನು ಕವಿಪ್ರನಿನಿ ಮೆವಾ ಸಂಘಟನೆ ನೀಗಿಸುವತ್ತ ಹೆಜ್ಜೆ ಇರಿಸಿದೆ.ಪ್ರತಿ ಶಾಖೆಗಳಲ್ಲೂ ನಮ್ಮ ನೌಕರರನ್ನು ಸಂಘಟಿಸುವ ಜೊತೆಗೆ ಇನ್ನಿತರರ ಜತೆಗೆ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ತಿಳಿವಳಿಕೆ ಸಂಘದಿAದ ನೀಡಲಾಗುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸದಸ್ಯ ಮೈನೂದ್ದೀನ ನಾಯ್ಕೋಡಿ, ನಮ್ಮ ಸಮಾಜದ ನೌಕರ ವರ್ಗದವರ ಸಂಘಟನೆಗಾಗಿ ನಿಡಗುಂದಿ,ತಾಳಿಕೋಟಿ,ಮುದ್ದೇಬಿಹಾಳ ಹಾಗೂ ಬ.ಬಾಗೇವಾಡಿ ಶಾಖೆಗಳಲ್ಲಿ ಆರಂಭಿಕವಾಗಿ ಪದಾಧಿಕಾರಿಗಳ ಆಯ್ಕೆ ನಡೆಸಲಾಗುತ್ತಿದ್ದು ನೌಕರರ ಬೇಕು ಬೇಡಗಳಿಗೆ ನಮ್ಮ ಸಂಘ ಸ್ಪಂದಿಸಲಿದೆ ಎಂದರು.

ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಇಲಿಯಾಸ್ ಮೋಮಿನ,ಸಂಘದ ಹಿರಿಯ ನಾಯಕ ಬಬ್ಲು ಇನಾಮದಾರ, ಎ.ಬಿ.ಮುಜಾವರ, ಝಡ್.ಎಂ.ರಿಸಾಲ್ದಾರ್,ಆರ್.ಆರ್.ಮಕಾನದಾರ, ಅಯ್ಯೂಬ ಮನಗೂಳಿ, ಅಸ್ಲಂ ವತನದಾರ,ಅಲ್ತಾಪ ಕಿತ್ತೂರ ಇದ್ದರು.

ಸಭೆಯಲ್ಲಿ ಈಚೇಗೆ ಬಿಎಸ್‌ಎಫ್‌ಗೆ ಆಯ್ಕೆಯಾದ ಸಿದ್ದಾಪೂರ ಪಿ.ಟಿ ಗ್ರಾಮದ ಆಯೇಷಾ ವಾಲೀಕಾರ ಹಾಗೂ ಕೆಪಿಟಿಸಿಎಲ್ ಅಂತರರಾಜ್ಯ ಕಬಡ್ಡಿ ಕ್ರೀಡಾಪಟು ಯಾಸೀನ ಸುರಪೂರ ಅವರನ್ನು ಸನ್ಮಾನಿಸಲಾಯಿತು.
ನಯೀಮ ಮಕಾನದಾರ ಹಾಗೂ ನಿಶಾತ್ ನಾಯ್ಕೋಡಿ ಖುರಾನ್ ಪಠಿಸಿದರು.ಡಿ.ಎಲ್.ಮಮದಾಪೂರ ನಿರೂಪಿಸಿದರು.ಮುತ್ತು ಅವಟಗೇರ ಸ್ವಾಗತಿಸಿದರು.ಅಬ್ದುಲಗಣಿ ಖಾನ್ಯಾಳ ವಂದಿಸಿದರು.ನಿಡಗುoದಿ,ತಾಳಿಕೋಟಿ,ಬಸವನಬಾಗೇವಾಡಿ,ಮುದ್ದೇಬಿಹಾಳ ತಾಲ್ಲೂಕಿನ ಕವಿಪ್ರನಿನಿ ಹಾಗೂ ಹೆಸ್ಕಾಂ ನೌಕರರು ಇದ್ದರು.

Latest News

ಸರ್ವ ಸಮಾಜದ ಬಾಂಧವರೊoದಿಗೆ ಬಸವ ಜಯಂತಿ ಆಚರಣೆ

ಸರ್ವ ಸಮಾಜದ ಬಾಂಧವರೊoದಿಗೆ ಬಸವ ಜಯಂತಿ ಆಚರಣೆ

ಮುದ್ದೇಬಿಹಾಳ : ಪಟ್ಟಣದಲ್ಲಿ ಮಾ.20 ರಂದು ನಡೆಯಲಿರುವ ವಿಶ್ವ ಗುರು ಬಸವಣ್ಣನವರ ಜಯಂತಿಯನ್ನು ಸರ್ವ

ನಾಗರಬೆಟ್ಟ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ

ನಾಗರಬೆಟ್ಟ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ

ಮುದ್ದೇಬಿಹಾಳ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ ಶೇ.100ರಷ್ಟು ಫಲಿತಾಂಶ

ಮುದ್ದೇಬಿಹಾಳ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ ಶೇ.100ರಷ್ಟು ಫಲಿತಾಂಶ

ಮುದ್ದೇಬಿಹಾಳ : ಪಟ್ಟಣದ ಬಿದರಕುಂದಿ ರಸ್ತೆಯಲ್ಲಿರುವ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ಫಲಿತಾಂಶ

ಅಭ್ಯುದಯ ಪಿಯು ಸೈನ್ಸ್ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ;                                                                                 ದ್ವಿತೀಯ ಪಿಯುಸಿ ಫಲಿತಾಂಶ : ಮುದ್ದೇಬಿಹಾಳಕ್ಕೆ ಆಸೀಫಾ ಪ್ರಥಮ

ಅಭ್ಯುದಯ ಪಿಯು ಸೈನ್ಸ್ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ; ದ್ವಿತೀಯ ಪಿಯುಸಿ ಫಲಿತಾಂಶ : ಮುದ್ದೇಬಿಹಾಳಕ್ಕೆ ಆಸೀಫಾ ಪ್ರಥಮ

ಮುದ್ದೇಬಿಹಾಳ : ಪಟ್ಟಣದ ಅಭ್ಯುದಯ ಪಿಯು ಸೈನ್ಸ್ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ.100ರಷ್ಟಾಗಿದೆ.ಪರೀಕ್ಷೆಗೆ

ಹೋಳ್ಕರ್ ಅವಾರ್ಡ್ ಪರೀಕ್ಷೆಗೆ 900 ವಿದ್ಯಾರ್ಥಿಗಳು ಭಾಗಿ : ಪ್ರತಿಭಾನ್ವಿತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ-ಎಂ.ಎನ್.ಮದರಿ

ಹೋಳ್ಕರ್ ಅವಾರ್ಡ್ ಪರೀಕ್ಷೆಗೆ 900 ವಿದ್ಯಾರ್ಥಿಗಳು ಭಾಗಿ : ಪ್ರತಿಭಾನ್ವಿತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ-ಎಂ.ಎನ್.ಮದರಿ

ಮುದ್ದೇಬಿಹಾಳ : ಬಡ,ಕೂಲಿ ಕಾರ್ಮಿಕರ ಪ್ರತಿಭಾವಂತ ಮಕ್ಕಳು ಉನ್ನತ ಶಿಕ್ಷಣ ಪಡೆದುಕೊಳ್ಳಲು ನಮ್ಮ ವಿದ್ಯಾಸಂಸ್ಥೆಯಿoದ ಅಗತ್ಯ ಸಹಕಾರ ಒದಗಿಸಲಾಗುವುದು ಎಂದು ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು,ಸಮಾಜ ಸೇವಕರಾದ ಎಂ.ಎನ್.ಮದರಿ ಹೇಳಿದರು. ಪಟ್ಟಣದ ಅಭ್ಯುದಯ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಹಿಲ್ಯಾದೇವಿ ಹೋಳ್ಕರ್ ಅವಾರ್ಡ್ ಪರೀಕ್ಷೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಅವರು ಮಾತನಾಡಿದರು.2017ರಿಂದ ಇಲ್ಲಿವರೆಗೆ ವಿವಿಧ ಸಾಧನೆಗಳನ್ನು ಶಾಲೆ ಮಾಡುತ್ತ ಬಂದಿದೆ.ಇಬ್ಬರು

ಜೀನಿಯಸ್ ಅವಾರ್ಡ್ ಪರೀಕ್ಷೆ: 187 MBBS  ವಿದ್ಯಾರ್ಥಿಗಳ ಸನ್ಮಾನ                                                                         ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಜ್ಞಾನದ ಜ್ಯೋತಿಯಾಗಿ ಬೆಳೆದಿದೆ-ನಡಹಳ್ಳಿ

ಜೀನಿಯಸ್ ಅವಾರ್ಡ್ ಪರೀಕ್ಷೆ: 187 MBBS ವಿದ್ಯಾರ್ಥಿಗಳ ಸನ್ಮಾನ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಜ್ಞಾನದ ಜ್ಯೋತಿಯಾಗಿ ಬೆಳೆದಿದೆ-ನಡಹಳ್ಳಿ

ಮುದ್ದೇಬಿಹಾಳ : ಮುದ್ದೇಬಿಹಾಳ ತಾಲ್ಲೂಕು ಗುರುತಿಸಿಕೊಳ್ಳುವುದೇ ನಾಗರಬೆಟ್ಟದ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಸಾಧನೆಯ ಕಾರಣಕ್ಕಾಗಿ.ಈ ಭಾಗದಲ್ಲಿ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆ ಜ್ಞಾನದ ಜ್ಯೋತಿಯಾಗಿ ಬೆಳೆದಿದೆ ಎಂದು ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು. ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಸೈನ್ಸ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಕ್ಸಫರ್ಡ್ ಪಾಟೀಲ್ಸ್ ಜೀನಿಯಸ್ ಅವಾರ್ಡ್ ಸ್ಪರ್ಧೆಯಲ್ಲಿ ಅವರು ಮಾತನಾಡಿದರು. ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಸಂಸ್ಕಾರ,ಸoಸ್ಕೃತಿ,ಪರoಪರೆ ನೀಡುವಲ್ಲಿ ನಾವು ಮರೆತಿದ್ದೇವೆ.ಅದನ್ನು ನೀಡುವ ಕಾರ್ಯ