ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್ ಉದ್ಘಾಟನೆ: ಕಾಲು ಹಿಡಿದು ಜಗ್ಗುವವರೇ ಬಹಳಷ್ಟು ಜನ-ಸಿ.ಎಸ್.ನಾಡಗೌಡ

ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್ ಉದ್ಘಾಟನೆ: ಕಾಲು ಹಿಡಿದು ಜಗ್ಗುವವರೇ ಬಹಳಷ್ಟು ಜನ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಸಮಾಜದಲ್ಲಿ ಒಂದು ಸಂಸ್ಥೆ, ಕಾರ್ಖಾನೆ , ಒಬ್ಬ ವ್ಯಕ್ತಿ ಬೆಳೆಯುತ್ತಿದ್ದಾನೆ ಎಂದರೆ ಕಾಲು ಹಿಡಿದು ಜಗ್ಗುವವರು ಬಹಳ ಜನ ಇದ್ದಾರೆ.ಆದರೆ ಶಿಕ್ಷಣಕ್ಕಾಗಿ ಪ್ರಭುಗೌಡ ದೇಸಾಯಿ ಅವರಂತಹವರು ಜಮೀನು ಕೊಟ್ಟು ಮತ್ತೊಬ್ಬರನ್ನು ಬೆಳೆಸುವಂತವರು ವಿರಳ ಜನ ಇದ್ದಾರೆ.ಅವರು ನಿಜವಾದ ದೈವಿಯ ಗುಣ ಹೊಂದಿದವರು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ ಶನಿವಾರ ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ನೂತನ ಕಟ್ಟಡವನ್ನು ಶಾಸಕ ಸಿ.ಎಸ್.ನಾಡಗೌಡ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಭಾಗದಲ್ಲಿ ಶೇ.88ರಷ್ಟು ಪ್ರೌಢಶಿಕ್ಷಣದ ಫಲಿತಾಂಶ ಹೆಚ್ಚಿದೆ.ಆದರೆ ಪಿಯುಸಿ ನಂತರದ ಶಿಕ್ಷಣಕ್ಕೆ ನಮ್ಮ ಭಾಗದಲ್ಲಿ ಆದ್ಯತೆ ನೀಡಲಾಗುತ್ತಿದೆ.ಉನ್ನತ ಶಿಕ್ಷಣಕ್ಕೆ ಹೋಗುವವರ ಸಂಖ್ಯೆ ಹೆಚ್ಚಬೇಕು.ಬಿಎಎಸ್ ಸಂಸ್ಥೆಯ ಸ್ಥಾಪನೆಯಲ್ಲಿ ಹಗಲಿರುಳು ಶ್ರಮಿಸಿರುವ ಮಹಾಂತಗೌಡ ಬಿರಾದಾರ,ಶಿವನಗೌಡ ಬಿರಾದಾರ ಸಹೋದರರು,ಅವರ ಕುಟುಂಬದವರಿಗೆ ಇವರಿಗೆ ಜಮೀನು ಕೊಟ್ಟು ಸಹಕಾರ ನೀಡಿರುವ ಪ್ರಭುಗೌಡ ದೇಸಾಯಿ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ವಿದ್ಯೆ ಎಂದರೆ ಕೇವಲ ಅಕ್ಷರ ಕಲಿಸುವುದಲ್ಲ.ಅಲ್ಲಿ ಜೀವನದ ಮೌಲ್ಯಗಳನ್ನು ಕಲಿಸುವಂತದ್ದು ಮುಖ್ಯವಾಗಿದೆ.ಮೌಲ್ಯದ ಜೊತೆಗೆ ಸದೃಢವಾದ ದೇಹವನ್ನು ಕೊಡುವಂತಹದ್ದು, ನೀತಿವಂತನಾಗಿ ತಂದೆ ತಾಯಿ ದೇವರೆಂದು ಕಾಣುವಂತಹದ್ದು,ಭೂಮಿಗೆ ಬಂದಿದ್ದೇನೆ ಏನಾದರೂ ಕೊಡಬೇಕು ಎಂಬ ಭಾವನೆಯನ್ನು ಹೊಂದುವAತೆ ಮಗುವನ್ನು ಬೆಳೆಸುವ ಸಂಸ್ಥೆ ಅತ್ಯುತ್ತಮ ಸಂಸ್ಥೆ ಆಗುತ್ತದೆ.ಅದು ಬಿಎಎಸ್ ಸಂಸ್ಥೆ ಮುಂಬರುವ ದಿನಗಳಲ್ಲಿ ಆಗಲಿದೆ ಎಂಬ ಆಶಾಭಾವನೆಯನ್ನು ಹೊಂದಿರುವುದಾಗಿ ಹೇಳಿದರು.

ಆದಾಯ ತೆರಿಗೆ ಇಲಾಖೆಯ ಆಯುಕ್ತ ಶಿವಾನಂದ ಕಲಕೇರಿ ಮಾತನಾಡಿ, ಉತ್ತರ ಕರ್ನಾಟಕದ ಜನ ಈಗಲೂ ಉದ್ಯೋಗಕ್ಕಾಗಿ ಬೇರೆ ಜಿಲ್ಲೆ, ರಾಜ್ಯಗಳಿಗೆ ಗುಳೇ ಹೋಗುತ್ತಾರೆ.ಅದೇ ರೀತಿ ಶಿಕ್ಷಣಕ್ಕೂ ಬೇರೆ ಬೇರೆ ಉಡುಪಿ,ಮಂಗಳೂರು ಭಾಗಕ್ಕೆ ಗುಳೇ ಹೋಗುವ ಸ್ಥಿತಿ ಇದೆ.ಇಂತಹ ಸಮಯದಲ್ಲಿ ಈ ಭಾಗದಲ್ಲಿ ಅಂತರಾಷ್ಟಿçÃಯ ಮಟ್ಟದ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿರುವ ಮಹಾಂತಗೌಡರು ಹಾಗೂ ಶಿವನಗೌಡರು ನಿಜವಾದ ಶಿಕ್ಷಣದ ಪ್ರೇಮಿಗಳು ಎಂದು ಹೇಳಿದರು.

ಮಕ್ಕಳು ಕಂಪ್ಯೂಟರ್,ಲ್ಯಾಪಟಾಪ್‌ನoತಹ ಸಾಫ್ಟ್ ಡಿಜಿಟಲ್ ಡಿವೈಸಿಸ್,ಗೇಮುಗಳ ದಾಸರಾಗಿದ್ದಾರೆ.ಆದರೆ ಮೈದಾನದಲ್ಲಿ ದೈಹಿಕ ಚಟುವಟಿಕೆಗೆ ಆದ್ಯತೆ ನೀಡಿದರೆ ಅಭ್ಯಾಸ ಮಾಡಿ ಒಳ್ಳೆಯದಾಗಿ ನಿದ್ದೆ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ.ಅದನ್ನು ಈ ಸಂಸ್ಥೆ ಮಾಡಬೇಕು. ಇಂದಿನ ಕೆಲವು ನಗರಗಳಲ್ಲಿ ಶಾಲಾ ಮೈದಾನವೇ ಇರುವುದಿಲ್ಲ.ಅಲ್ಲಿ ಬರೀ ಓದುವುದನ್ನು ಬಿಟ್ಟು ಬೇರೆ ಏನನ್ನೂ ಹೇಳಿಕೊಡುವುದಿಲ್ಲ.ಆದರೆ ಬಿಎಎಸ್ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ ಎಂದು ಹೇಳಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಕುಂಟೋಜಿ ಭಾವೈಕ್ಯತೆ ಹಿರೇಮಠದ ಚನ್ನವೀರ ಶಿವಾಚಾರ್ಯರು ಮಾತನಾಡಿ, ಇಂದಿನ ಸಮಾಜ ಪಾಶ್ಚಾತ್ಯ ಶಿಕ್ಷಣದ ಸಂಸ್ಕೃತಿಗೆ ವಾಲುತ್ತಿರುವುದರಿಂದ ದೇಶದ ಸಂಸ್ಕೃತಿಗೆ ಬಹುದೊಡ್ಡ ಹೊಡೆತ ಬೀಳುತ್ತಿದೆ.ನಮ್ಮ ಈಗಿನ ಮಕ್ಕಳ ಐಕ್ಯೂ ಲೆವಲ್ ಚೆನ್ನಾಗಿದೆ.ಅವರಿಗೆ ಇಕ್ಯೂ ಲೆವಲ್ ಡೌನ್ ಮಾಡಿಕೊಂಡು ಕೂತಿದ್ದಾರೆ.ಎಮೋಷನ್ ಕೋಷಂಟ್ ಖಿನ್ನತೆಯನ್ನು,ಮಾನಸಿಕ ತೊಳಲಾಟದಿಂದ ಹೇಗೆ ಹೊರಬರಬೇಕು ಎಂಬುದು ಅರಿತುಕೊಳ್ಳುತ್ತಿಲ್ಲ.ಇದನ್ನು ಶಾಲೆಗಳಲ್ಲಿ ಕಲಿಸಬೇಕು.ಅಪ್ಪ ಅಮ್ಮ ಶಾಲೆಗೆ ಹಚ್ಚಿದರೆ ಅದರಂತೆ ಓದುವುದೇ ಆಗದೇ ಮಕ್ಕಳಲ್ಲಿ ಅಡಗಿರುವ ನಿಜವಾದ ಕಲೆಯೂ ಹೊರಗೆ ಬರಬೇಕು ಎಂದರು.

ಬಿದರಕುoದಿ-ಕಪ್ಪತಗುಡ್ಡ ಶಿವಯೋಗಾಶ್ರಮದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಒಂದು ಶಾಲೆ ಆರಂಭಗೊoಡರೆ ಹತ್ತು ಜೈಲುಗಳು ಕಡಿಮೆ ಆಗುತ್ತವೆ.ವಿದ್ಯೆ ಎಂದರೆ ಬೆಳಕು.ಆಧ್ಯಾತ್ಮದ ಬೆಳಕನ್ನು ನೀಡುವಂತಹದ್ದು ವಿದ್ಯೆ.ಅಕ್ಷರಗಳನ್ನು ಕಲಿಯುವುದಕ್ಕೆ ಶಾಲೆಗೆ ಬರಬೇಕು.ಉತ್ತಮವಾದ ಶಿಕ್ಷಕರ ಮೇಲೆ ಶಾಲೆ ನಿಂತಿದೆ.ಸಿoಪಿ ಲಿಂಗಣ್ಣ,ಶoಗು ಬಿರಾದರ,ಈಶ್ವರಚಂದ್ರ ಚಿಂತಾಮಣೆ, ಕಂಚ್ಯಾಣಿ ಶರಣಪ್ಪ, ಎ.ಎಸ್.ಹಿಪ್ಪರಗಿ,ಎಚ್.ಆರ್.ಕಲಕೇರಿ ಶಿಕ್ಷಕರ ಪರಂಪರೆ ಇದೆ.ಊರಿನ ಸಾಂಸ್ಕೃತಿಕ ಪರಂಪರೆಯನ್ನು ತೆಗೆದುಕೊಂಡು ಹೋಗಿದ್ದಾರೆ.ಗಂಗಮ್ಮ ಚಿನಿವಾರ,ಬಂಥನಾಳ ಶಿವಯೋಗಿಗಳು, ಮಲ್ಲಿಕಾರ್ಜುನ ಸ್ವಾಮೀಜಿಯವರು ಶಿಕ್ಷಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟವರು.ಪರಿಸರದ ವಾತಾವರಣದಲ್ಲಿ ಶಿಕ್ಷಣ ನೀಡಿ ಎಂದರು.

ದಿವ್ಯ ಸಾನಿಧ್ಯವನ್ನು ಆಳಂದ,ಜಾಲವಾದ,ನoದವಾಡಗಿ ಹಿರೇಮಠದ ಮಹಾಂತಲಿAಗ ಶಿವಾಚಾರ್ಯರು, ನಂದವಾಡಗಿ ಹಿರೇಮಠದ ಚನ್ನಬಸಯ ಶಿವಾಚಾರ್ಯರು ವಹಿಸುವರು, ಬಳವಾಟ ಪರ್ವತಾಶ್ರಮದ ಸೋಮಶೇಖರ ದೇವರು,ಕೊಡಗಾನೂರ ಕೆಳಗಿನಮಠದ ಕುಮಾರದೇವರು,ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಾಂತಗೌಡ ಬಿರಾದಾರ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಬಾಲಾಜಿ ಶುಗರ್ಸ್ನ ಅಧ್ಯಕ್ಷ ಹಣಮಂತಗೌಡ ಪಾಟೀಲ, ಗಣ್ಯ ವ್ಯಾಪಾರಸ್ಥರಾದ ಬಿ.ಸಿ.ಮೋಟಗಿ, ಬ.ಬಾಗೇವಾಡಿ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ನಿವೃತ್ತ ಡಿವೈಎಸ್‌ಪಿ ಎಸ್.ಎಸ್.ಹುಲ್ಲೂರ,ನಿವೃತ್ತ ಕರ್ನಲ್ ಶಿವಾನಂದ ಬಿರಾದಾರ,ಬಿಇಒ ಬಿ.ಎಸ್.ಸಾವಳಗಿ,ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ,ಗಣ್ಯ ವ್ಯಾಪಾರಸ್ಥರಾದ ಬಾಬುಲಾಲ ಓಸ್ವಾಲ್, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಅರವಿಂದ ಹೂಗಾರ, ವಸಂತ ಇಲ್ಲೂರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಶಂಕರಗೌಡ ಹಿರೇಗೌಡರ,ಲೋಕಾಯುಕ್ತ ಪೊಲೀಸ್ ಅಧಿಕಾರಿ ಗೋವಿಂದಗೌಡ ಪಾಟೀಲ,ಉದ್ಯಮಿ ಶರಣು ಸಜ್ಜನ, ಪ್ರಥಮ ದರ್ಜೆ ಗುತ್ತಿಗೆದಾರ ರಾಯನಗೌಡ ತಾತರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಅಸ್ಕಿ ಫೌಂಡೇಶನ ಅಧ್ಯಕ್ಷ ಸಿ.ಬಿ.ಅಸ್ಕಿ, ಉದ್ಯಮಿ ಶಾಂತಗೌಡ ಪಾಟೀಲ ನಡಹಳ್ಳಿ, ಪಿಎಸೈ ಸಂಜಯ ತಿಪರೆಡ್ಡಿ, ಸಂಸ್ಥೆಯ ಮಾರ್ಗದರ್ಶಕ ಶಿವನಗೌಡ ಬಿರಾದಾರ , ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ,ಹಿರಿಯ ನ್ಯಾಯವಾದಿ ವಿ.ಎಂ.ನಾಗಠಾಣ,ಬಿ.ಎಸ್.ಪಾಟೀಲ ಯಾಳಗಿ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಇದ್ದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಬೆಂಗಳೂರಿನಿoದ ಆಗಮಿಸಿದ್ದ ನೃತ್ಯದ ಮಾರ್ಗದರ್ಶಕರು ಮಕ್ಕಳಿಗೆ ತರಬೇತಿ ನೀಡಿ ಪಾಲಕರ ಮನ ರಂಜಿಸಿದರು.

Latest News

ಅಸ್ವಸ್ಥಗೊಂಡ ಬಿದ್ದಿದ್ದ ನರಿ ಮರಿಗೆ ಚಿಕಿತ್ಸೆ:                ಮಾನವೀಯತೆ ಮೆರೆದ ಯುವಕರು, ಅಧಿಕಾರಿಗಳ ತಂಡ

ಅಸ್ವಸ್ಥಗೊಂಡ ಬಿದ್ದಿದ್ದ ನರಿ ಮರಿಗೆ ಚಿಕಿತ್ಸೆ: ಮಾನವೀಯತೆ ಮೆರೆದ ಯುವಕರು, ಅಧಿಕಾರಿಗಳ ತಂಡ

ಮುದ್ದೇಬಿಹಾಳ : ವಾಯುವಿಹಾರಕ್ಕೆಂದು ಹೋಗಿದ್ದ ಮೂವರು ಯುವಕರ ತಂಡವೊoದರ ಕಣ್ಣಿಗೆ ಬಿದ್ದ ಅಸ್ವಸ್ಥಗೊಂಡ ನರಿ

ಅಧಿಸೂಚನೆ ಪ್ರಕಟ; ನಾಮಪತ್ರ ಸಲ್ಲಿಕೆ ಶುರು;           ಮುದ್ದೇಬಿಹಾಳ ಅಂಜುಮನ್ ಕಮೀಟಿಗೆ ಚುನಾವಣೆ ಘೋಷಣೆ

ಅಧಿಸೂಚನೆ ಪ್ರಕಟ; ನಾಮಪತ್ರ ಸಲ್ಲಿಕೆ ಶುರು; ಮುದ್ದೇಬಿಹಾಳ ಅಂಜುಮನ್ ಕಮೀಟಿಗೆ ಚುನಾವಣೆ ಘೋಷಣೆ

ಮುದ್ದೇಬಿಹಾಳ : ಇಲ್ಲಿಯ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಕಮೀಟಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ:      ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು

650 ಅಂಕ ಪಡೆದ ಮಾನಸಾ ಎಚ್. ಪ್ರಥಮ:                 ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ: ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಹಾಗೂ ನೀಟ್

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಮುದ್ದೇಬಿಹಾಳ : ಮುಖ್ಯಮಂತ್ರಿಗಳು ಹೇಳಿದಂತೆ ನೀವು ಮತದಾರರಾಗಿ ನೋಂದಾಯಿಸಿಕೊಳ್ಳದಿದ್ದರೆ ಸರಕಾರದ ಯಾವುದೇ ಯೋಜನೆ ಕೊಡುವುದಕ್ಕೆ ಬರುವುದಿಲ್ಲ.ಪಂಚ ಗ್ಯಾರಂಟಿ ಹಿಡಿದು ಗಂಗಾಕಲ್ಯಾಣ,ಮಕ್ಕಳ ಸ್ಕಾಲರಶಿಪ್ ಸೇರಿದಂತೆ ಸರ್ಕಾರಿ ಯೋಜನೆಗಳು ನಿಮಗೆ ದೊರೆಯುವುದಿಲ್ಲ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಎಲ್‌ಎ-2 ಗಳಿಗಾಗಿ ಏರ್ಪಡಿಸಿದ್ದ ಎಸ್‌ಆಯ್‌ಆರ್ ಪ್ರಕ್ರಿಯೆ ಕುರಿತು ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.ಮತದಾನ ನಿಮ್ಮ ಜೀವನದ ಹಕ್ಕು.ಸರ್ಕಾರದ ಎಲ್ಲ ಯೋಜನೆಗಳನ್ನು ಪಡೆದುಕೊಳ್ಳಬೇಕಾದರೆ ಎನ್ರೋಲಮೆಂಟ್ ಆಗುವುದು ಕಡ್ಡಾಯವಾಗಿದೆ.ಈ

32 ಕೆಜಿ ಬೆಳ್ಳಿ ವಿಗ್ರಹ ಹೊತ್ತೊಯ್ದ ಕಳ್ಳರು:                         ಬಸರಕೋಡದ ಪವಾಡ ಬಸವೇಶ್ವರರ ವಿಗ್ರಹ ಕಳ್ಳತನ

32 ಕೆಜಿ ಬೆಳ್ಳಿ ವಿಗ್ರಹ ಹೊತ್ತೊಯ್ದ ಕಳ್ಳರು: ಬಸರಕೋಡದ ಪವಾಡ ಬಸವೇಶ್ವರರ ವಿಗ್ರಹ ಕಳ್ಳತನ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ಐತಿಹಾಸಿಕ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ವಿಗ್ರಹವನ್ನೇ ಕಳ್ಳರು ಕದ್ದೊಯ್ದಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದ್ದು ಭಕ್ತರು ಹಾಗೂ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಘಟನೆ ಹಿನ್ನೆಲೆ : ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಬೆಳಗಿನ ಜಾವ ಆರ್ಚಕರು ಕರೆ ಮಾಡಿ ದೇವಸ್ಥಾನದ ವಿಗ್ರಹ ಕಾಣಿಸುತ್ತಿಲ್ಲ, ಕಳ್ಳತನವಾಗಿದೆ ಎಂದು ಕರೆ ಮಾಡಿ ತಿಳಿಸಿದ ಕೂಡಲೇ ಆಡಳಿತ ಮಂಡಳಿಯ ಸದಸ್ಯರೆಲ್ಲ ಸೇರಿ ಪೊಲೀಸರಿಗೆ ಮಾಹಿತಿ ನೀಡಿದೆವು.ದೇವಸ್ಥಾನದ ಸಿಸಿ