ವಿಶ್ವಭಾರತಿ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ: ಶಿಕ್ಷಣ ಕ್ಷೇತ್ರವೂ ವ್ಯಾಪಾರೀಕರಣ-ಹಾಲಗಂಗಾಧರಮಠ

ವಿಶ್ವಭಾರತಿ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ: ಶಿಕ್ಷಣ ಕ್ಷೇತ್ರವೂ ವ್ಯಾಪಾರೀಕರಣ-ಹಾಲಗಂಗಾಧರಮಠ

ಮುದ್ದೇಬಿಹಾಳ : ಮಕ್ಕಳಿಗೆ ಬಾಲ್ಯದಲ್ಲಿ ಗುರುಕುಲ ಮಾದರಿ ಶಿಕ್ಷಣದಿಂದ ಸಂಸ್ಕಾರ,ಸAಸ್ಕೃತಿಯ ಅರಿವು ದೊರೆಯುತ್ತದೆ ಎಂದು ನೆರಬೆಂಚಿ ಗ್ರಾಮದ ವೇ.ಸಂಗಯ್ಯ ಹಾಲಗಂಗಾಧರಮಠ ಹೇಳಿದರು.

ಪಟ್ಟಣದ ಮಹಾಂತೇಶ ನಗರದಲ್ಲಿರುವ ವಿಶ್ವಭಾರತಿ ಪಬ್ಲಿಕ್ ಸ್ಕೂಲ್‌ನಲ್ಲಿ ಎಂಟನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿಕ್ಷಣ ಕ್ಷೇತ್ರ ಇಂದು ವ್ಯಾಪಾರೀಕರಣಗೊಂಡಿದೆ.ಎಲ್.ಕೆ.ಜಿ.ಯುಕೆಜಿ ಮಕ್ಕಳಿಗೆ 50-60 ಸಾವಿರ ರೂ.ಶುಲ್ಕ ವಸೂಲಿ ಮಾಡುವ ಮೂಲಕ ಶಿಕ್ಷಣ ದುಬಾರಿಯೆನ್ನುವ ಭಾವನೆಯನ್ನು ಉಳ್ಳವರು ಪ್ರದರ್ಶನ ಮಾಡುತ್ತಿದ್ದಾರೆ.ಬಡ.ಮಧ್ಯಮ ವರ್ಗದ ಮಕ್ಕಳಿಗೆ ಶಿಕ್ಷಣ ಕೈಗೆಟುಕಬೇಕಾದರೆ ಸಾಮಾಜಿಕ ಮನೋಭಾವ ಹೊಂದಿರುವ ಶಿಕ್ಷಣ ಸಂಸ್ಥೆಗಳಿoದ ಸಾಧ್ಯವಿದೆ ಎಂದರು.

ಪತ್ರಕರ್ತ ಶಂಕರ ಈ.ಹೆಬ್ಬಾಳ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದವರ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪರಿಣಾಮಕಾರಿಯಾಗಿ ದೊರಕಿಸಲು ಪರಿಶ್ರಮ ಪಡುತ್ತಿರುವ ಶಿಕ್ಷಣ ಪ್ರೇಮಿ ವೀರೇಶ ಗುರುಮಠ ಅವರ ನೇತೃತ್ವದಲ್ಲಿ ನಡೆದಿರುವ ಶಾಲೆಯಲ್ಲಿ ಮಕ್ಕಳು ಬಾಲ್ಯವನ್ನು ಅನುಭವಿಸುವ ಜೊತೆಗೆ ಆಟವಾಡುತ್ತ ಇಲ್ಲಿ ಕಲಿಕೆ ಆಗುತ್ತಿದೆ.ಎಲ್ಲ ಶಿಕ್ಷಣ ಸಂಸ್ಥೆಗಳ ಉದ್ದೇಶ ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂಬುದಾಗಿದ್ದು ಪರಸ್ಪರ ಸ್ನೇಹಪರವಾದ ಸಂಬoಧ ಇರಬೇಕು.ಕಾಲು ಹಿಡಿದು ಎಳೆಯುವ ಪ್ರವೃತ್ತಿ ಶಿಕ್ಷಣ ಸಂಸ್ಥೆಗಳ ಮಧ್ಯೆ ಇರಬಾರದು ಎಂದರು.

ಸಂಸ್ಥೆಯ ಕಾರ್ಯಾಧ್ಯಕ್ಷ ವೀರೇಶ ಗುರುಮಠ ಮಾತನಾಡಿ, ಹಲವಾರು ಸಂಕಷ್ಟಗಳ ಮಧ್ಯೆ ಶಾಲೆಯನ್ನು ಮುನ್ನಡೆಸಿದ್ದು ಅದಕ್ಕೆ ಸಹಕಾರಿಯಾಗಿರುವವರನ್ನು ಸ್ಮರಿಸಿದರು
.
ಫಕೀರೇಶ್ವರ ಡಯಗ್ನೂಸ್ಟಿಕ್ ಸೆಂಟರ್‌ನ ಡಾ.ಚಂದ್ರಶೇಖರ ಶಿವಯೋಗಿಮಠ, ಹುಲ್ಲೂರಿನ ನ್ಯಾಶನಲ್ ಎಸ್.ಎನ್.ಡಿ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ.ಎಸ್.ಕೊಪ್ಪ,ಎA.ಜಿ.ಎA.ಕೆ ಕಾಲೇಜಿನ ಉಪನ್ಯಾಸಕಿ Vijayalaxmi ಪಾಟೀಲ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಶಿವಕುಮಾರ ಬಿಜಾಪೂರ, ಡಾ.ಹಣಮಂತ ತಿಡಗುಂದಿ,ನಿವೃತ್ತ ಶಿಕ್ಷಕ ಹಣಮಂತ ವಡಗೇರಿ,ಮಲ್ಲಿಕಾರ್ಜುನ ಪೋಲೇಶಿ,ಜ್ಯೋತಿ ಮಠಪತಿ,ಮಾರ್ಗದರ್ಶಕ ಶಿವಯ್ಯ ಗುರುಮಠ, ಮುಖ್ಯಗುರುಮಾತೆ ಪುಷ್ಪಾ ಗುರುಮಠ ಇದ್ದರು.ಸಂಗಮೇಶ ಶಿವಣಗಿ ಪ್ರಾರ್ಥಿಸಿದರು.ಬಸವರಾಜ ನಾಯಕ ನಿರೂಪಿಸಿದರು. ಬಸವರಜ ಕತ್ತಿ ವಂದಿಸಿದರು.

Latest News

ಬಾವಿ ನೀರು ಖಾಲಿಯಾದರೂ ಪತ್ತೆಯಾಗದ ತಂದೆ :               ತೋಟದ ಬಾವಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ

ಬಾವಿ ನೀರು ಖಾಲಿಯಾದರೂ ಪತ್ತೆಯಾಗದ ತಂದೆ :   ತೋಟದ ಬಾವಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ

ಮುದ್ದೇಬಿಹಾಳ : ಅಕ್ಕ ತಂಗಿಯರ ಶವ ಬಾವಿಯಲ್ಲಿ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ತಾಲ್ಲೂಕಿನ

ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞೆ : ಬಿ.ಕೆ. ಶೃತಿ

ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞೆ : ಬಿ.ಕೆ. ಶೃತಿ

ವಿಜಯಪುರ: ನಾವು ನಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳಲು ದುಶ್ಚಟಗಳಿಂದ ದೂರ ಇರಬೇಕೆಂದು ನಗರದ ಪ್ರಜಾಪಿತ ಬ್ರಹ್ಮಕುಮಾರಿ

ಆ.22 ರಂದು ಪುಟ್ಟರಾಜ ಗವಾಯಿ ಜನಪದ ಸಂಘದ ಪದಗ್ರಹಣ

ಆ.22 ರಂದು ಪುಟ್ಟರಾಜ ಗವಾಯಿ ಜನಪದ ಸಂಘದ ಪದಗ್ರಹಣ

ಮುದ್ದೇಬಿಹಾಳ : ಗಾನ ಗಾರುಡಿಗ ಪಂಡಿತ ಪುಟ್ಟರಾಜ ಗವಾಯಿಗಳ ಜನಪದ ಮತ್ತು ಸಾಂಸ್ಕೃತಿಕ ಸಂಘ

ಆ.23 ರಂದು ರಾಯಣ್ಣನವರ ಜಾತ್ರೆ:        ಮುದ್ದೇಬಿಹಾಳದಿಂದ ಐದು ಸಾವಿರ ಜನ ಭಾಗಿ-ಎಂ.ಎನ್.ಮದರಿ

ಆ.23 ರಂದು ರಾಯಣ್ಣನವರ ಜಾತ್ರೆ: ಮುದ್ದೇಬಿಹಾಳದಿಂದ ಐದು ಸಾವಿರ ಜನ ಭಾಗಿ-ಎಂ.ಎನ್.ಮದರಿ

ಮುದ್ದೇಬಿಹಾಳ : ವಿಜಯಪುರದಲ್ಲಿ ಆ.23 ರಂದು ನಡೆಯಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಾತ್ರೆಯನ್ನು ಯಶಸ್ವಿಗೊಳಿಸುವಂತೆ

ಮುದ್ದೇಬಿಹಾಳ ;ಅಂಜುಮನ್‌ಗೆ 92.95% ರಷ್ಟು ಮತದಾನ

ಮುದ್ದೇಬಿಹಾಳ ;ಅಂಜುಮನ್‌ಗೆ 92.95% ರಷ್ಟು ಮತದಾನ

ಮುದ್ದೇಬಿಹಾಳ : ತೀವ್ರ ತುರುಸಿನಿಂದ ಕೂಡಿದ ಇಲ್ಲಿನ ಅಂಜುಮನ್ ಇಸ್ಲಾಂ ಕಮೀಟಿ ಚುನಾವಣೆಯಲ್ಲಿ ಸೋಮವಾರ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು ಒಟ್ಟು ಶೇ.92.95ರಷ್ಟು ಮತದಾನ ಆಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 2625 ಮತದಾರರಲ್ಲಿ 2440 ಮತದಾರರು ತಮ್ಮ ಹಕ್ಕು ಚಲಾಯಿಸಿದರು.ಆರಂಭದಲ್ಲಿ ಚುರುಕುಗೊಂಡಿದ್ದ ಮತದಾನ ಪ್ರಕ್ರಿಯೆ ಮದ್ಯಾಹ್ನದ ಹೊತ್ತಿಗೆ ಮಂದಗತಿಯಲ್ಲಿ ಸಾಗಿತ್ತು.ಅಂತಿಮ ಸಮಯ ಮೀರುವ ಮುನ್ನವೇ ಬಹುತೇಕ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಒಂದು ಮತಗಟ್ಟೆಯಲ್ಲಿ ಇಬ್ಬರು ಮತದಾರರು ನಕಲಿ ಮತದಾನಕ್ಕೆ

ಕಾಂಗ್ರೆಸ್‌ ವಿರುದ್ಧ ಪ್ರತಿಭಟನೆ: BJP ಕಾರ್ಯಕರ್ತನ ಪ್ಯಾಂಟ್‌ಗೆ ತಾಗಿದ ಬೆಂಕಿ

ಕಾಂಗ್ರೆಸ್‌ ವಿರುದ್ಧ ಪ್ರತಿಭಟನೆ: BJP ಕಾರ್ಯಕರ್ತನ ಪ್ಯಾಂಟ್‌ಗೆ ತಾಗಿದ ಬೆಂಕಿ

ಗದಗ: ನಗರದ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್‌ ನಾಯಕರ ವಿರುದ್ಧ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಲು ಮುಂದಾದಾಗ ಕಾರ್ಯಕರ್ತರೊಬ್ಬರ ಪ್ಯಾಂಟ್‌ಗೆ ಬೆಂಕಿ ತಾಗಿದೆ. ಕಾಂಗ್ರೆಸ್‌ ನಾಯಕರ ವಿರುದ್ಧ ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತರು ರಸ್ತೆ ಮಧ್ಯೆ ಬೆಂಕಿ ಹಚ್ಚಿ, ಟೈರ್‌ ಸುಡಲು ಯತ್ನಿಸಿದರು. ಪೊಲೀಸರು ಟೈರ್‌ ಅನ್ನು ಕುಸಿದುಕೊಂಡಾಗ ನೂಕಾಟ ಉಂಟಾಯಿತು. ಕಾರ್ಯಕರ್ತರು ಒಮ್ಮೆಲೆ ನುಗ್ಗಿದ್ದರಿಂದ ಕಾರ್ಯಕರ್ತರೊಬ್ಬರ ಪ್ಯಾಂಟ್‌ಗೆ ಬೆಂಕಿ ತಾಗಿದೆ. ಅಲ್ಪ ಪ್ರಮಾಣದಲ್ಲಿ