ಜನ್ಮದಿನದ ಆಚರಣೆಗಳ ನೆಪದಲ್ಲಿ ದುಂದುವೆಚ್ಚ ಬೇಡ-ಕಾಶೀಬಾಯಿ ರಾಂಪೂರ

ಜನ್ಮದಿನದ ಆಚರಣೆಗಳ ನೆಪದಲ್ಲಿ ದುಂದುವೆಚ್ಚ ಬೇಡ-ಕಾಶೀಬಾಯಿ ರಾಂಪೂರ

ಮುದ್ದೇಬಿಹಾಳ : ಜನ್ಮದಿನ,ಮದುವೆ ವಾರ್ಷಿಕೋತ್ಸವ ಹಾಗೂ ಇನ್ನೀತರ ವಯಕ್ತಿಕ ಶುಭ ಸಂದರ್ಭಗಳಲ್ಲಿ ದುಂದುವೆಚ್ಚ ಮಾಡದೇ ನಾಲ್ಕು ಜನ ಹಸಿದವರಿಗೆ ಅನ್ನದಾನ ಮಾಡಿದರೆ ಅವರಿಗೆ ಹೊಟ್ಟೆ ತುಂಬಿಸಿದ ಪುಣ್ಯ ನಮಗೆ ದೊರಕುತ್ತದೆ ಎಂದು ಬಿಜೆಪಿ ಜಿಲ್ಲಾ ನಿಕಟಪೂರ್ವ ಕಾರ್ಯದರ್ಶಿ ಕಾಶೀಬಾಯಿ ಎಸ್.ರಾಂಪೂರ ಹೇಳಿದರು.

ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಗುರುವಾರ ಲಯನ್ಸ್ ಕ್ಲಬ್ ಸಹಯೋಗದಲ್ಲಿ ತಮ್ಮ ಜನ್ಮದಿನದ ನಿಮಿತ್ಯ ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿಗಳು, ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕೈಗೊಂಡು ಅವರು ಮಾತನಾಡಿರು.ಹಬ್ಬ ಹಾಗೂ ವಿಶೇಷ ದಿನಗಳಂದು ಕೇಕ್ ಕತ್ತರಿಸುವುದು,ಪಟಾಕಿ ಸಿಡಿಸುವುದು,ವ್ಯರ್ಥವಾಗಿ ಹಣವನ್ನು ದುಂದುವೆಚ್ಚ ಮಾಡದೇ ಇಂತಹ ನಾಲ್ಕಾರು ಕಡೆಗಳಲ್ಲಿ ಅಗತ್ಯವಿದ್ದವರಿಗೆ ದಾಸೋಹ,ಅನ್ನದಾನ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ನನ್ನದಾಗಿದೆ ಎಂದು ಹೇಳಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕನಗೌಡ ಪಾಟೀಲ ಮಾತನಾಡಿ, ಪ್ರತಿ ಗುರುವಾರದ ದಿನ ಲಯನ್ಸ್ ಕ್ಲಬ್ ದಾನಿಗಳನ್ನು ಸಂಪರ್ಕಿಸಿ ಸಾರ್ವಜನಿಕರಿಗೆ,ರೋಗಿಗಳಿಗೆ,ಬಡವರಿಗೆ ಅನ್ನಸಂತರ್ಪನೆ ಸೇವೆ ಕೈಗೊಳ್ಳುತ್ತಿದೆ.ಸಾಮಾಜಿಕ ಸೇವೆಯಲ್ಲಿ ಸಕ್ರಿಯರಾಗಿರುವ ಕಾಶೀಬಾಯಿ ರಾಂಪೂರ ಅವರನ್ನು ಸಂಪರ್ಕ ಮಾಡಿದಾಗ ತಮ್ಮ ಜನ್ಮದಿನವನ್ನು ಆಸ್ಪತ್ರೆಯಲ್ಲಿಯೇ ಆಚರಿಸಿಕೊಳ್ಳುವುದಾಗಿ ತಿಳಿಸಿ ಅನ್ನದಾಸೋಹಕ್ಕೆ ಸಹಕಾರ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಎಂ.ಜಿ.ಎಫ್ ಲಯನ್ಸ್ ಸದಸ್ಯ ರಾವಸಾಹೇಬ ದೇಸಾಯಿ,ಶರಣಯ್ಯ ಹಿರೇಮಠ,ಸಂಜಯಕುಮಾರ ಓಸ್ವಾಲ್, ಮಹೇಂದ್ರ ಓಸ್ವಾಲ,ರಾಜು ಹುನಗುಂದ,ಸುವರ್ಣಾ ಕತ್ತಿ,ಶಿವಯೋಗೆಪ್ಪ ರಾಂಪೂರ,ರಾಜಶೇಖರ ಮ್ಯಾಗೇರಿ, ಅಶೋಕ ಚಿನಿವಾರ , ಶೇಖರಗೌಡ ಬಿರಾದಾರ ಮೊದಲಾದವರು ಇದ್ದರು.

Latest News

ತಾಳಿಕೋಟಿ : ಸಿಲಿಂಡರ್ ಸ್ಫೋಟದಿಂದ ಮೃತ ಕುಟುಂಬಗಳಿಗೆ ಅಸ್ಕಿ ಫೌಂಡೇಶನ್ ನೆರವು

ತಾಳಿಕೋಟಿ : ಸಿಲಿಂಡರ್ ಸ್ಫೋಟದಿಂದ ಮೃತ ಕುಟುಂಬಗಳಿಗೆ ಅಸ್ಕಿ ಫೌಂಡೇಶನ್ ನೆರವು

ತಾಳಿಕೋಟಿ : ಪಟ್ಟಣದಲ್ಲಿ ಇತ್ತೀಚಿಗೆ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಮೃತಪ್ಪಟ ಕಟ್ಟಡ ಕಾರ್ಮಿಕರಾದ ಶಕೀಲಅಹ್ಮದ್

17.17 ಲಕ್ಷ ರೂ.ಅನುದಾನ ದುರುಪಯೋಗ;                   ಯರಝರಿ ಹಿಂದಿನ ಪಿಡಿಒ ಮುದಗಲ್ ಅಮಾನತು

17.17 ಲಕ್ಷ ರೂ.ಅನುದಾನ ದುರುಪಯೋಗ; ಯರಝರಿ ಹಿಂದಿನ ಪಿಡಿಒ ಮುದಗಲ್ ಅಮಾನತು

ಮುದ್ದೇಬಿಹಾಳ : ಪ್ರಸ್ತುತ ಬಾಗಲಕೋಟ ತಾಪಂ ಅಧೀಕ್ಷಕಿಯಾಗಿ ಸೇವೆಯಲ್ಲಿರುವ ಹಿಂದಿನ ಮುದ್ದೇಬಿಹಾಳ ತಾಲ್ಲೂಕು ಯರಝರಿ

ಅನುಭವಿ ನಾಯಕ ರುದ್ರಪ್ಪ ಲಮಾಣಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ

ಅನುಭವಿ ನಾಯಕ ರುದ್ರಪ್ಪ ಲಮಾಣಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ

ಮುದ್ದೇಬಿಹಾಳ : ಕಾಂಗ್ರೆಸ್ ಪಕ್ಷದ ಹಿರಿಯ ಹಾಗೂ ಅನುಭವಿ ಶಾಸಕ ರುದ್ರಪ್ಪ ಮಾ. ಲಮಾಣಿ

ಮುದ್ದೇಬಿಹಾಳ ; ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ತಹಶೀಲ್ದಾರ್ ಭೇಟಿ

ಮುದ್ದೇಬಿಹಾಳ ; ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ತಹಶೀಲ್ದಾರ್ ಭೇಟಿ

ಮುದ್ದೇಬಿಹಾಳ : ರಾಜ್ಯಾದ್ಯಂತ ಸೋಮವಾರದಿಂದ ಶಾಲೆಗಳು ಆರಂಭಗೊOಡಿದ್ದು ತಾಲ್ಲೂಕಿನ ಹುಲ್ಲೂರು ಗ್ರಾಮದ ಎಸ್.ಎನ್.ಡಿ ಪಬ್ಲಿಕ್

ಡಿಸೇಲ್,ಪೆಟ್ರೋಲ್‌ಗಾಗಿ ಪರದಾಟ:                                       ಖಾಲಿ ಕ್ಯಾನ್‌ಗಳೊಂದಿಗೆ ಬಂಕ್‌ಗಳ ಮುಂದೆ ಸಾಲುದ್ದ ಕ್ಯೂ

ಡಿಸೇಲ್,ಪೆಟ್ರೋಲ್‌ಗಾಗಿ ಪರದಾಟ: ಖಾಲಿ ಕ್ಯಾನ್‌ಗಳೊಂದಿಗೆ ಬಂಕ್‌ಗಳ ಮುಂದೆ ಸಾಲುದ್ದ ಕ್ಯೂ

ಮುದ್ದೇಬಿಹಾಳ : ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮ ಈ ಭಾಗದಲ್ಲೂ ಎಫೆಕ್ಟ್ ಆಗಿದ್ದು ಡಿಸೇಲ್,ಪೆಟ್ರೋಲ್‌ಗಾಗಿ ಗ್ರಾಹಕರು ಬಂಕ್‌ಗಳ ಮುಂದೆ ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಹಲವು ಪೆಟ್ರೋಲ್ ಬಂಕ್‌ಗಳ ಮುಂದೆ ಅಡ್ಡಲಾಗಿ ಹಗ್ಗ ಕಟ್ಟಿ ನೋ ಸ್ಟಾಕ್ ಬೋರ್ಡ್ ಹಾಕಿದ್ದರೆ ಡಿಸೇಲ್ ಲಭ್ಯವಿರುವ ಪೆಟ್ರೋಲ್ ಬಂಕ್‌ಗಳ ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ವಾಹನ ಸವಾರರು,ಖಾಲಿ ಕ್ಯಾನ್‌ಗಳೊಂದಿಗೆ ಸರದಿಯಲ್ಲಿ ನಿಂತಿದ್ದು ಕಂಡು ಬಂದಿತು. ಪಟ್ಟಣದ ತಾಳಿಕೋಟಿ ರಸ್ತೆಯಲ್ಲಿರುವ ನಾಗಠಾಣ ಪೆಟ್ರೋಲ್ ಬಂಕ್‌ನಲ್ಲಿ ಡಿಸೇಲ್

Muddebihal Cricket : ಆರ್.ಕೆ.ರಾಕೇಟ್ ಬೂದಿಹಾಳ ತಂಡಕ್ಕೆ ಎಂ.ಬಿ.ಎಲ್ ಗ್ರೂಪ್ ಪ್ರಶಸ್ತಿ

Muddebihal Cricket : ಆರ್.ಕೆ.ರಾಕೇಟ್ ಬೂದಿಹಾಳ ತಂಡಕ್ಕೆ ಎಂ.ಬಿ.ಎಲ್ ಗ್ರೂಪ್ ಪ್ರಶಸ್ತಿ

ಮುದ್ದೇಬಿಹಾಳ : ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಎಂ.ಬಿ.ಎಲ್.ಗ್ರೂಪ್ ನಿಂದ ಆಯೋಜಿಸಿದ್ದ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್‌ನ ಫೈನಲ್ ಪಂದ್ಯಾವಳಿ ಸೋಮವಾರ ಜರುಗಿತು. ಫೈನಲ್‌ನಲ್ಲಿ ಆಲಮಟ್ಟಿ ಸುಶಾಂತ-11 ತಂಡ ಹಾಗೂ ಬೂದಿಹಾಳ ಆರ್.ಕೆ ರಾಕೆಟ್ ತಂಡಗಳು ಮುಖಾಮುಖಿಯಾದವು.ಅದರಲ್ಲಿ ಮೊದಲು ಬ್ಯಾಟ್ ಮಾಡಿದ ಆಲಮಟ್ಟಿ ಸುಶಾಂತ ತಂಡ ನಿಗದಿತ ಹತ್ತು ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 102 ರನ್ ಗಳಿಸಿತು.ಬಳಿಕ ಬ್ಯಾಟ್ ಮಾಡಿದ ಬೂದಿಹಾಳ ಆರ್.ಕೆ.ರಾಕೆಟ್ ತಂಡ ಆರು ವಿಕೆಟ್