ಇನ್ನೊಬ್ಬರ ಬೆಳವಣಿಗೆ ನೋಡಿ ಉರಿಯಬೇಡಿ-ಸಿದ್ಧಲಿಂಗ ದೇವರು

ಇನ್ನೊಬ್ಬರ ಬೆಳವಣಿಗೆ ನೋಡಿ ಉರಿಯಬೇಡಿ-ಸಿದ್ಧಲಿಂಗ ದೇವರು

ಮುದ್ದೇಬಿಹಾಳ : ದ್ವೇಷ ಮಾಡದೇ ಇರುವಷ್ಟು ದಿನ ಒಳ್ಳೆಯ ಕೆಲಸಗಳನ್ನು ಮಾಡಿ.ಪರಸ್ಪರ ಕಾಲೆಳೆಯಬೇಡಿ.ದ್ವೇಷ ಮಾಡಬೇಡಿ.ಇನ್ನೊಬ್ಬರ ಬೆಳವಣಿಗೆಯನ್ನು ನೋಡಿ ಹೊಟ್ಟೆ ಉರಿದುಕೊಳ್ಳಬೇಡಿ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಪೀಠಾಧಿಕಾರಿ ಸಿದ್ಧಲಿಂಗ ದೇವರು ನುಡಿದರು.

ತಾಲ್ಲೂಕಿನ ಖಿಲಾರಹಟ್ಟಿ ಗ್ರಾಮದಲ್ಲಿ ಸಮಾಜ ಸೇವಕ ಎಂ.ಎನ್.ಮದರಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಬೈದವರು,ಹೊಗಳಿದವರನ್ನು ಅಪ್ಪಿಕೊಳ್ಳುವ ಸಮಾಜ ಕುರುಬ ಸಮಾಜವಾಗಿದೆ.ಅತೀ ಹೆಚ್ಚು ಭಕ್ತಿಯಿಂದ ನಡೆದುಕೊಳ್ಳುವ ಸಮಾಜವೂ ಕುರುಬ ಸಮಾಜವಾಗಿದೆ.ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ.ಸಮಾಜದ ಹೆಸರು ತರುತ್ತವೆ. ನಿಜವಾದ ಸಿರಿವಂತ ವ್ಯಕ್ತಿ ಎಂದರೆ ಒಂದಿಷ್ಟು ಬಡಮಕ್ಕಳ ಕಲ್ಯಾಣ ಮಾಡಿ ಆ ಕಲ್ಯಾಣಕ್ಕೆ ಒಳಗಾದವರ ಮುಖದಲ್ಲಿ ನಗುವನ್ನು ಕಾಣುವವನೇ ನಿಜವಾದ ಸಿರಿವಂತ.ಕುರುಬ ಸಮಾಜ ಶ್ರಮ,ಕಾಯಕ ಸಿದ್ಧಾಂತದ ಮೇಲೆ ಜೀವನ ಮಾಡುತ್ತಿರುವ ಸಮಾಜವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸಿ.ಎಸ್.ನಾಡಗೌಡ ಮಾತನಾಡಿ,ನಿಮ್ಮ ಮನೆತನಕ್ಕೆ ಹೆಸರಿರುತ್ತದೆ.ಅದು ಒಂದು ದಿನಕ್ಕೆ ಬಂದ ಹೆಸರು ಅಲ್ಲ.ಅದರ ಹಿಂದೆ ನೂರಾರು,ಸಾವಿರಾರು ವರ್ಷಗಳ ಇತಿಹಾಸ ಇರುತ್ತದೆ.ಅದನ್ನು ಉಳಿಸಿಕೊಂಡು ಹೋಗುವ ಕೆಲಸ ಮಾಡಬೇಕು.ಸಣ್ಣ ಗುತ್ತಿಗೆದಾರರಾಗಿ ವೃತ್ತಿ ಆರಂಭಿಸಿದ ಎನ್.ಎಸ್.ಪೂಜಾರಿ ಅವರು ಇಂದು ಕೆಟಗರಿ ಗುತ್ತಿಗೆದಾರರಾಗಿ ಬೆಳೆದಿದ್ದಾರೆ.ಸಾಮೂಹಿಕ ವಿವಾಹದಂತಹ ಕೆಲಸಗಳ ಮುಖಾಂತರ ತಾಲ್ಲೂಕಿನಾದ್ಯಂತ ಮದರಿ ಅವರ ಮನೆತನದ ಹೆಸರು ಮೆರಗನ್ನು ತರುವಂತಹ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

ಸಮಾಜ ಸೇವಕ ಎಂಎನ್.ಮದರಿ ಮಾತನಾಡಿ, ನನ್ನ ತಂದೆಯ ಆಸೆಯಂತೆ ಖಿಲಾರಹಟ್ಟಿಯಲ್ಲಿಯೇ ಬೀರಲಿಂಗೇಶ್ವರ ದೇವಸ್ಥಾನ ಕಟ್ಟಿ 2005ರಲ್ಲಿ ಸಾಮೂಹಿಕ ವಿವಾಹ ಆರಂಭಗೊಳಿಸಿದೆವು.ಅದು 2026ರವರೆಗೆ ಮುಂದುವರೆದುಕೊOಡು ಬಂದಿದೆ.ನಮ್ಮಲ್ಲಿರು ಕಾರ್ಮಿಕರು,ಬಡವರ ಕುಟುಂಬದವರಿಗೆ ಅನುಕೂಲ ಒದಗಿಸಲು ಸಾಮೂಹಿಕ ವಿವಾಹಗಳನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು..

ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ತಮ್ಮ ಮಗನ ಮದುವೆಯಲ್ಲಿ ಬಡವರ ಮಕ್ಕಳಿಗೂ ಮದುವೆ ಮಾಡಿಕೊಟ್ಟಿರುವ ಮದರಿ ಅವರದ್ದು ಒಳ್ಳೆಯ ವ್ಯಕ್ತಿಯಾಗಿದ್ದಾರೆ.ಸಮಾಜದವರು ಇಂತವರನ್ನು ಬೆಳೆಸಬೇಕು.ಮಲ್ಲಿಕಾರ್ಜುನ ಮದರಿ, ಯರಝರಿ ಭಾಗದಲ್ಲಿ ಮಲ್ಲು ಅಪರಾಧಿ ಒಳ್ಳೆಯ ವ್ಯಕ್ತಿಗಳು.ನಿಮ್ಮನ್ನು ಯಾವ ರಾಜಕಾರಣಿಯೂ ಬೆಳೆಸುವುದಿಲ್ಲ.ಎಲ್ಲರೂ ಅವರವರ ಮಕ್ಕಳು,ಹೆಂಡoದಿರನ್ನೇ ಬೆಳೆಸುತ್ತಾರೆ.ಆದರೆ ನಿಮ್ಮ ಸಮಾಜದಲ್ಲಿ ನೀವೇ ಬೆಳೆಯಬೇಕು.ಈ ಕ್ಷೇತ್ರದಲ್ಲಿ ಕುರುಬ ಸಮಾಜದವರು ಶಾಸಕರಾಗಬೇಕು.ಈ ಭಾಗದಲ್ಲಿ ನೀರಾವರಿಗಾಗಿ ಹೋರಾಟ ನಡೆಯಬೇಕು.ಜನಪ್ರತಿನಿಧಿಗಳು ಇದಕ್ಕೆ ಇಚ್ಛಾಶಕ್ತಿ ತೋರಬೇಕು ಎಂದು ಹೇಳಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಸರೂರು ಹಾಲುಮತ ಗುರುಪೀಠದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ, ಕುರುಬ ಜನಾಂಗದವರು ಮೂಢನಂಬಿಕೆಗಳನ್ನು ಬಿಡಬೇಕು.ಪ್ರಾಣಿಬಲಿ ಕೊಡಬಾರದು.ಬೇಟೆ ಮಾಡುವುದನ್ನು ಬಿಟ್ಟರೆ ನೀವು ಅಧಿಕಾರದಲ್ಲಿ ಆಳ್ವಿಕೆ ನಡೆಸಬಹುದಾಗಿದೆ ಎಂದು ಕಿವಿಮಾತು ಹೇಳಿದರು.ಸಿದ್ಧನಕೊಳ್ಳದ ಕಲಾಪೋಷಕ ಮಠದ ಶಿವಕುಮಾರ ಸ್ವಾಮೀಜಿ,ಕಾಂಗ್ರೆಸ್ ಮುಖಂಡ ವಾಯ್.ಎಚ್.ವಿಜಯಕರ್ ಮಾತನಾಡಿದರು.ಅಂಕಲಿಮಠದ ನಿರುಪಾದೀಶ್ವರ ಸ್ವಾಮೀಜಿ,ಯರಝರಿ ಯಲ್ಲಾಲಿಂಗೇಶ್ವರ ಮಠದ ಮಲ್ಲಾರಲಿಂಗ ಸ್ವಾಮೀಜಿ,ಸರೂರಿನ ಶಿವಯ್ಯ ಗುರುವಿನ,ಕಾಡಸಿದ್ದೇಶ್ವರ ಮಠದ ರಮಾನಂದ ಸ್ವಾಮೀಜಿ,ಅರವಿಂದ ಒಡೆಯರ್, ಲಿಂಗಬೀರದೇವರು, ಕೆಂಚರಾಯ ಮುತ್ಯಾ,ವಕೀಲರಾದ ಬಿ.ಜೆ.ಜಗ್ಗಲ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ ,ಅಧ್ಯಕ್ಷತೆ ವಹಿಸಿದ್ದ ಪ್ರಥಮ ದರ್ಜೆ ಗುತ್ತಿಗೆದಾರ ನೀಲಕಂಠಪ್ಪ ಪೂಜಾರಿ, ಮುಖಂಡರಾದ ಮಲಕೇಂದ್ರಾಯಗೌಡ ಪಾಟೀಲ,ಗಂಗಾಧರರಾವ ನಾಡಗೌಡ ,ಬಿ.ಎಸ್.ಶಿರೋಳ,ಕೆಂಚಪ್ಪ ಬಿರಾದಾರ ಪುರಸಭೆ ಮಾಜಿ ಸದಸ್ಯೆ ಸಂಗಮ್ಮ ದೇವರಳ್ಳಿ,ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಮಾಜಿ ನಿರ್ದೇಶಕಿ ಶ್ರೀದೇವಿ ಮದರಿ,ಯಲ್ಲಪ್ಪ ನಾಯಕಮಕ್ಕಳ, ಗುತ್ತಿಗೆದಾರರಾದ ಎಚ್.ಎಮ್.ನಾಯಕ,ಎಂ.ಎಚ್.ಬೊಮ್ಮನಹಳ್ಳಿ ಇದ್ದರು.V.S. ಮಳಗಾವಿ ಹಾಗೂ ನೀಲಮ್ಮ MAGI ಪ್ರಾರ್ಥಿಸಿದರು.ವೀರೇಶ ಗೂಡಲಮನಿ ಸ್ವಾಗತಿಸಿದರು.ಬಾಲು ಕರೇಕಲ್ಲ ನಿರೂಪಿಸಿದರು. ಪುಸ್ತಕ ಬಿಡುಗಡೆ: ಬ.ಬಾಗೇವಾಡಿ ಸಮಾಜ ಕಲ್ಯಾಣ ಇಲಾಖೆಯ ನೌಕರ,ಸಾಹಿತಿ ವೀರೇಶ ಗೂಡಲಮನಿ ಅವರು ಬರೆದ ಮನ್ನಿರೇಶ್ವರ ಮಹಾತ್ಮೆ ಪುಸ್ತಕವನ್ನು ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿ,ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು,ಶಾಸಕ ಸಿ.ಎಸ್.ನಾಡಗೌಡ,ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ಬಿಡುಗಡೆ ಮಾಡಿದರು.

22 ಜೋಡಿ ನವಜೀವನಕ್ಕೆ ಪದಾರ್ಪಣೆ:
ಸಮಾಜ ಸೇವಕ ಎಂ.ಎನ್.ಮದರಿ ಅವರ ನೇತೃತ್ವದಲ್ಲಿ ಜರುಗಿದ ಸಾಮೂಹಿಕ ವಿವಾಹದಲ್ಲಿ ಒಟ್ಟು 22 ಜೋಡಿಗಳು ನವಜೀವನಕ್ಕೆ ಕಾಲಿರಿಸಿದರು.ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಬಾಲ್ಯವಿವಾಹ ನಡೆಯದಂತೆ ನೋಡಿಕೊಂಡರು.ಪೊಲೀಸ್ ಇಲಾಖೆಯಿಂದ ಭದ್ರತೆ ಒದಗಿಸಲಾಗಿತ್ತು.

Latest News

ಡಿಸಿ ಆದೇಶದ ನಂತರವೇ ಕಾರ್ಖಾನೆ ಆರಂಭ-ಹಣಮoತಗೌಡ ಪಾಟೀಲ್

ಡಿಸಿ ಆದೇಶದ ನಂತರವೇ ಕಾರ್ಖಾನೆ ಆರಂಭ-ಹಣಮoತಗೌಡ ಪಾಟೀಲ್

ಮುದ್ದೇಬಿಹಾಳ : ರಾಜ್ಯದ ಸಕ್ಕರೆ ಕಾರ್ಖಾನೆಗಳ ಅಸೋಶಿಯೇಷನ್‌ದಲ್ಲಿ ಯಾವ ತೀರ್ಮಾನ ಕೈಗೊಂಡಿದೆಯೋ ಅದರಂತೆ ನಮ್ಮ

ಮಾಜಿ ಶಾಸಕ ಎ.ಎಸ್;ಪಾಟೀಲ ನಡಹಳ್ಳಿ ಆಕ್ರೋಶ:         ಆಲಮಟ್ಟಿ ಆಣೆಕಟ್ಟು ಎತ್ತರ ವಿರೋಧಿಸಿದ ತೆಲಂಗಾಣಕ್ಕೆ ಕೃಷ್ಣೆ ನೀರು..!

ಮಾಜಿ ಶಾಸಕ ಎ.ಎಸ್;ಪಾಟೀಲ ನಡಹಳ್ಳಿ ಆಕ್ರೋಶ: ಆಲಮಟ್ಟಿ ಆಣೆಕಟ್ಟು ಎತ್ತರ ವಿರೋಧಿಸಿದ ತೆಲಂಗಾಣಕ್ಕೆ ಕೃಷ್ಣೆ ನೀರು..!

ಮುದ್ದೇಬಿಹಾಳ : ತೆಲಂಗಾಣಕ್ಕೆ ಅಧಿಕೃತ ಆದೇಶವಿಲ್ಲದೆ ಸಿಎಂ ಮೌಖಿಕ ಸೂಚನೆ ಮೇರೆಗೆ ಕೃಷ್ಣಾ ನದಿ

ಅ.13 ರಿಂದ ಕಬ್ಬು ಬೆಳೆಗಾರರಿಂದ ಹೋರಾಟ:                           ದೆಹಲಿಯ ಉನ್ನತ ಮಟ್ಟದ ಸಭೆ ವಿಫಲವಾದರೆ ರಾಷ್ಟ್ರೀಯ ಹೆದ್ದಾರಿ ತಡೆ

ಅ.13 ರಿಂದ ಕಬ್ಬು ಬೆಳೆಗಾರರಿಂದ ಹೋರಾಟ: ದೆಹಲಿಯ ಉನ್ನತ ಮಟ್ಟದ ಸಭೆ ವಿಫಲವಾದರೆ ರಾಷ್ಟ್ರೀಯ ಹೆದ್ದಾರಿ ತಡೆ

ಮುದ್ದೇಬಿಹಾಳ : ದೆಹಲಿಯಲ್ಲಿ ಕೇಂದ್ರ ಸರ್ಕಾರ ರೈತ ಸಂಘಟನೆಗಳೊAದಿಗೆ ಅ.12 ರಂದು ನಡೆಯಲಿರುವ ಉನ್ನತಮಟ್ಟದ

ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜನೆ :                    ಪ್ರಜಾಪ್ರಭುತ್ವದ ಮೌಲ್ಯಗಳ ಅರಿವಿಗೆ ಯುವ ಸಂಸತ್ ಮಾದರಿ

ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜನೆ : ಪ್ರಜಾಪ್ರಭುತ್ವದ ಮೌಲ್ಯಗಳ ಅರಿವಿಗೆ ಯುವ ಸಂಸತ್ ಮಾದರಿ

ಮುದ್ದೇಬಿಹಾಳ : ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಅರಿವು ಮೂಡಿಸಲು ಯುವ ಸಂಸತ್ ಮೂಲಕ

ರೈತರನ್ನು ಅಡ್ಡದಾರಿಗೆಳೆಯುವ ಕುತಂತ್ರಕ್ಕೆ ಬಲಿಯಾಗಬೇಡಿ-ಶಾಸಕ ನಾಡಗೌಡ

ರೈತರನ್ನು ಅಡ್ಡದಾರಿಗೆಳೆಯುವ ಕುತಂತ್ರಕ್ಕೆ ಬಲಿಯಾಗಬೇಡಿ-ಶಾಸಕ ನಾಡಗೌಡ

ಮುದ್ದೇಬಿಹಾಳ : ನಮ್ಮ ತಾಲ್ಲೂಕಿನ ರೈತರನ್ನು ಅಡ್ಡ ಹಾದಿಗೆಳೆಯುವ ಕುತಂತ್ರ ನಡೆದಿವೆ. ಕುತಂತ್ರಿಗಳ ಪ್ರಚೋದನೆಗೆ ಒಳಗಾಗಬೇಡಿ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಾನೂ ಸಹ ರೈತನೇ, ವೇದಿಕೆಯಲ್ಲಿರುವ ಇವರೆಲ್ಲ ಅಧಿಕಾರಿಗಳು ರೈತರಾಗಿದ್ದಾರೆ. ಉದ್ದೇಶಪೂರ್ವಕವಾಗಿ ಇಲ್ಲ ಸಲ್ಲದ ಅಪಪ್ರಚಾರ ನಡೆದಿದೆ. ಸರಕಾರ ನಿಮ್ಮ ಪರವಾಗಿಯೇ ಇರುತ್ತದೆ ಎನ್ನುವುದನ್ನು ಮರೆಯಬೇಡಿ. ಶಾಸಕ ನಾಡಗೌಡರಿಗೆ

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ವಿತರಣೆ:                                          ನೈಜ ಭಾರತದ ಧ್ವನಿ ಗ್ರಾಮೀಣ ಪತ್ರಕರ್ತರು-ಸಚಿವ ಎಂ.ಬಿ. ಪಾಟೀಲ

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ವಿತರಣೆ: ನೈಜ ಭಾರತದ ಧ್ವನಿ ಗ್ರಾಮೀಣ ಪತ್ರಕರ್ತರು-ಸಚಿವ ಎಂ.ಬಿ. ಪಾಟೀಲ

ವಿಜಯಪುರ : ಗ್ರಾಮೀಣ ಭಾಗದ ಜನರು, ರೈತರು ಹಾಗೂ ಸಾಮಾನ್ಯ ಜನರ ನೈಜ ಸಮಸ್ಯೆಗಳನ್ನು ಬೆಳಕಿಗೆ ತರುವಲ್ಲಿ ಗ್ರಾಮೀಣ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು ನೈಜ ಭಾರತದ ಧ್ವನಿಯಾಗಿ ಗ್ರಾಮೀಣ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು. ನಗರದ ಗಾಂಧಿ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಪತ್ರಕರ್ತರ ಉಚಿತ