ಕಲಾವಿದರ ಸಂಘ ಉದ್ಘಾಟನೆ: ಸಮಾಜ ಬಯಸುವುದನ್ನು ಕಲಾವಿದ ನೀಡುತ್ತಾನೆ-ಹೂಗಾರ

ಕಲಾವಿದರ ಸಂಘ ಉದ್ಘಾಟನೆ: ಸಮಾಜ ಬಯಸುವುದನ್ನು ಕಲಾವಿದ ನೀಡುತ್ತಾನೆ-ಹೂಗಾರ

ಮುದ್ದೇಬಿಹಾಳ : ಗ್ರಾಮೀಣ ಭಾಗದಲ್ಲಿ ಜನಪದ ಹಾಡುಗಳಲ್ಲಿ ಅಶ್ಲೀಲತೆ ಹೆಚ್ಚುತ್ತಿದ್ದು ಅದಕ್ಕೆ ಕಡಿವಾಣ ಹಾಕಬೇಕು ಎಂದು ಎಲ್ಲರೂ ಹೇಳುತ್ತಾರೆ.ಆದರೆ ಜನರು,ಸಮಾಜ ಬಯಸುವುದನ್ನೇ ಬಡ ಕಲಾವಿದರು ನೀಡುತ್ತಾರೆ.ಮೊದಲು ಸಮಾಜ ಯಾವುದನ್ನು ಕಲಾವಿದರಿಂದ ಬಯಸಬೇಕು ಎಂಬುದನ್ನು ಆತ್ಮಾವಲೋಕನಕ್ಕೆ ಇದು ಸಕಾಲ ಎಂದು ಹಾಸ್ಯ ಕಲಾವಿದ ಗೋಪಾಲ ಹೂಗಾರ ಹೇಳಿದರು.

ಪಟ್ಟಣದ ಓಸ್ವಾಲ್ ಫಂಕ್ಷನ್ ಹಾಲ್ನಲ್ಲಿ ಹಮ್ಮಿಕೊಂಡಿದ್ದ ಪಂ.ಪುಟ್ಟರಾಜ ಗವಾಯಿಗಳ ಜನಪದ ಹಾಗೂ ಸಾಂಸ್ಕೃತಿಕ ಕಲಾವಿದರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಬಹುತೇಕ ಕಡೆಗಳಲ್ಲಿ ಅಶ್ಲೀಲ ಅರ್ಥ ಬರುವ ಹಾಡುಗಳನ್ನೇ ಜನರು ಕೇಳುವಾಗ ಕಲಾವಿದ ಅನಿವಾರ್ಯವಾಗಿ ಹಾಡಲೇಬೇಕಾಗುತ್ತದೆ.ಉತ್ತರ ಕರ್ನಾಟಕ ಭಾಗದ ಕಲಾವಿದರು ಈಚೇಗೆ ಜಾಗೃತಿ ಮೂಡಿಸುತ್ತಿದ್ದು ಭಾಗಶಃ ಅಶ್ಲೀಲತೆ ಹಾಡುಗಳಿಗೆ ಕಡಿವಾಣ ಬೀಳುತ್ತಿರುವುದು ಸಮಾಧಾನ ತರಿಸುತ್ತಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಎಸ್.ಎಸ್.ಹೂಗಾರ ಮಾತನಾಡಿ, ಕೆಟ್ಟ ಅರ್ಥ ಬರುವ ,ಟ್ರ್ಯಾಕ್ಟರ್ಗಳಲ್ಲಿ ಹಾಡುಗಳನ್ನು ಕೇಳಿದಾಗ ನೈಜ ಜಾನಪದ ಸಂಸ್ಕೃತಿ ಮರೆಯಾಗಿರುವುದು ನೋವು ತರಿಸುತ್ತದೆ.ನಿಜವಾದ ಜಾನಪದ ಹಾಡುಗಳನ್ನು ಸಮಾಜಕ್ಕೆ ಹೆಚ್ಚು ಪರಿಚಯಿಸಬೇಕಾಗಿದೆ ಎಂದರು.

ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಆರ್.ಮುಲ್ಲಾ ಮಾತನಾಡಿ, ಕಲಾವಿದರಕು ಒಳ್ಳೆಯ ಹಾಡುಗಳನ್ನೇ ಹಾಡಬೇಕು ಎಂದರು.ಇನ್ನೋರ್ವ ಹಾಸ್ಯ  ಕಲಾವಿದ ಶ್ರೀಶೈಲ ಹೂಗಾರ ಮಾತನಾಡಿದರು.ಕೋಳೂರಿನ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆರ್ಚಕ ಸಂತೋಸ್ವಾಮಿ ಹಿರೇಮಠ,ಕಲಾವಿದ ವೀರೇಶ ಹಿರೇಗೌಡ್ರ,ಕಲಾವಿದರ ಸಂಘದ ಅಧ್ಯಕ್ಷ ಮುನೀರ ಅವಟಗೇರಿ, ಉಪಾಧ್ಯಕ್ಷ ಎಸ್.ಕೆ.ಘಾಟಿ,ಪ್ರಧಾನ ಕಾರ್ಯದರ್ಶಿ ಡಿ.ಎಲ್.ಮಮದಾಪೂರ,ಜಂಟಿ ಕಾರ್ಯದರ್ಶಿಭರತ್ ಉಪ್ಪಲದಿನ್ನಿ,ಖಜಾಂಚಿ ಹಣಮಂತ ಮಹಾಲಿಂಗಪೂರ,ಪತ್ರಿಕಾ ಪ್ರತಿನಿಧಿ ಸಿದ್ದು ಚಲವಾದಿ,ಸದಸ್ಯರಾದ ವಿನಾಯಕ ಭಟ್,ಶರಣು ಅಮರಣ್ಣವರ,ಪ್ರದೀಪ ದಾಸರ,ಶಾರದಾ ಬಿದರಕುಂದಿ ಇದ್ದರು.

ಸಿದ್ದು ಹೆಬ್ಬಾಳ ಕಾರ್ಯಕ್ರಮ ನಿರೂಪಿಸಿದರು.ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.ಪಂಡಿತ ಪುಟ್ಟರಾಜ ಗವಾಯಿಗಳ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

Latest News

ಬಾವಿ ನೀರು ಖಾಲಿಯಾದರೂ ಪತ್ತೆಯಾಗದ ತಂದೆ :               ತೋಟದ ಬಾವಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ

ಬಾವಿ ನೀರು ಖಾಲಿಯಾದರೂ ಪತ್ತೆಯಾಗದ ತಂದೆ :   ತೋಟದ ಬಾವಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ

ಮುದ್ದೇಬಿಹಾಳ : ಅಕ್ಕ ತಂಗಿಯರ ಶವ ಬಾವಿಯಲ್ಲಿ ಪತ್ತೆಯಾಗಿರುವ ಹೃದಯ ವಿದ್ರಾವಕ ಘಟನೆ ತಾಲ್ಲೂಕಿನ

ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞೆ : ಬಿ.ಕೆ. ಶೃತಿ

ನಶಾಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞೆ : ಬಿ.ಕೆ. ಶೃತಿ

ವಿಜಯಪುರ: ನಾವು ನಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳಲು ದುಶ್ಚಟಗಳಿಂದ ದೂರ ಇರಬೇಕೆಂದು ನಗರದ ಪ್ರಜಾಪಿತ ಬ್ರಹ್ಮಕುಮಾರಿ

ಆ.22 ರಂದು ಪುಟ್ಟರಾಜ ಗವಾಯಿ ಜನಪದ ಸಂಘದ ಪದಗ್ರಹಣ

ಆ.22 ರಂದು ಪುಟ್ಟರಾಜ ಗವಾಯಿ ಜನಪದ ಸಂಘದ ಪದಗ್ರಹಣ

ಮುದ್ದೇಬಿಹಾಳ : ಗಾನ ಗಾರುಡಿಗ ಪಂಡಿತ ಪುಟ್ಟರಾಜ ಗವಾಯಿಗಳ ಜನಪದ ಮತ್ತು ಸಾಂಸ್ಕೃತಿಕ ಸಂಘ

ಆ.23 ರಂದು ರಾಯಣ್ಣನವರ ಜಾತ್ರೆ:        ಮುದ್ದೇಬಿಹಾಳದಿಂದ ಐದು ಸಾವಿರ ಜನ ಭಾಗಿ-ಎಂ.ಎನ್.ಮದರಿ

ಆ.23 ರಂದು ರಾಯಣ್ಣನವರ ಜಾತ್ರೆ: ಮುದ್ದೇಬಿಹಾಳದಿಂದ ಐದು ಸಾವಿರ ಜನ ಭಾಗಿ-ಎಂ.ಎನ್.ಮದರಿ

ಮುದ್ದೇಬಿಹಾಳ : ವಿಜಯಪುರದಲ್ಲಿ ಆ.23 ರಂದು ನಡೆಯಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಾತ್ರೆಯನ್ನು ಯಶಸ್ವಿಗೊಳಿಸುವಂತೆ

ಮುದ್ದೇಬಿಹಾಳ ;ಅಂಜುಮನ್‌ಗೆ 92.95% ರಷ್ಟು ಮತದಾನ

ಮುದ್ದೇಬಿಹಾಳ ;ಅಂಜುಮನ್‌ಗೆ 92.95% ರಷ್ಟು ಮತದಾನ

ಮುದ್ದೇಬಿಹಾಳ : ತೀವ್ರ ತುರುಸಿನಿಂದ ಕೂಡಿದ ಇಲ್ಲಿನ ಅಂಜುಮನ್ ಇಸ್ಲಾಂ ಕಮೀಟಿ ಚುನಾವಣೆಯಲ್ಲಿ ಸೋಮವಾರ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು ಒಟ್ಟು ಶೇ.92.95ರಷ್ಟು ಮತದಾನ ಆಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 2625 ಮತದಾರರಲ್ಲಿ 2440 ಮತದಾರರು ತಮ್ಮ ಹಕ್ಕು ಚಲಾಯಿಸಿದರು.ಆರಂಭದಲ್ಲಿ ಚುರುಕುಗೊಂಡಿದ್ದ ಮತದಾನ ಪ್ರಕ್ರಿಯೆ ಮದ್ಯಾಹ್ನದ ಹೊತ್ತಿಗೆ ಮಂದಗತಿಯಲ್ಲಿ ಸಾಗಿತ್ತು.ಅಂತಿಮ ಸಮಯ ಮೀರುವ ಮುನ್ನವೇ ಬಹುತೇಕ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಒಂದು ಮತಗಟ್ಟೆಯಲ್ಲಿ ಇಬ್ಬರು ಮತದಾರರು ನಕಲಿ ಮತದಾನಕ್ಕೆ

ಕಾಂಗ್ರೆಸ್‌ ವಿರುದ್ಧ ಪ್ರತಿಭಟನೆ: BJP ಕಾರ್ಯಕರ್ತನ ಪ್ಯಾಂಟ್‌ಗೆ ತಾಗಿದ ಬೆಂಕಿ

ಕಾಂಗ್ರೆಸ್‌ ವಿರುದ್ಧ ಪ್ರತಿಭಟನೆ: BJP ಕಾರ್ಯಕರ್ತನ ಪ್ಯಾಂಟ್‌ಗೆ ತಾಗಿದ ಬೆಂಕಿ

ಗದಗ: ನಗರದ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್‌ ನಾಯಕರ ವಿರುದ್ಧ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಲು ಮುಂದಾದಾಗ ಕಾರ್ಯಕರ್ತರೊಬ್ಬರ ಪ್ಯಾಂಟ್‌ಗೆ ಬೆಂಕಿ ತಾಗಿದೆ. ಕಾಂಗ್ರೆಸ್‌ ನಾಯಕರ ವಿರುದ್ಧ ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತರು ರಸ್ತೆ ಮಧ್ಯೆ ಬೆಂಕಿ ಹಚ್ಚಿ, ಟೈರ್‌ ಸುಡಲು ಯತ್ನಿಸಿದರು. ಪೊಲೀಸರು ಟೈರ್‌ ಅನ್ನು ಕುಸಿದುಕೊಂಡಾಗ ನೂಕಾಟ ಉಂಟಾಯಿತು. ಕಾರ್ಯಕರ್ತರು ಒಮ್ಮೆಲೆ ನುಗ್ಗಿದ್ದರಿಂದ ಕಾರ್ಯಕರ್ತರೊಬ್ಬರ ಪ್ಯಾಂಟ್‌ಗೆ ಬೆಂಕಿ ತಾಗಿದೆ. ಅಲ್ಪ ಪ್ರಮಾಣದಲ್ಲಿ