ಹಸಿರು,ಅರ್ಧ ಚಂದ್ರ ಮುಸ್ಲಿಂರ ನಿಶಾನೆಯಲ್ಲ-ಲಾಲ್‌ಹುಸೇನ್ ಕಂದಗಲ್

ಹಸಿರು,ಅರ್ಧ ಚಂದ್ರ ಮುಸ್ಲಿಂರ ನಿಶಾನೆಯಲ್ಲ-ಲಾಲ್‌ಹುಸೇನ್ ಕಂದಗಲ್

ಮುದ್ದೇಬಿಹಾಳ : ಹಸಿರು ಬಣ್ಣ,ಅರ್ಧ ಚಂದ್ರಾಕೃತಿ,ನಕ್ಷತ್ರ ಇವು ಮುಸ್ಲಿಂರ ಗುರುತುಗಳಲ್ಲ.ಅದೇ ರೀತಿ ಕೇಸರಿ ಬಣ್ಣವೂ ಹಿಂದೂಗಳದ್ದಲ್ಲ.ಎಲ್ಲ ಬಣ್ಣಗಳು ಯಾವುದೇ ಒಂದು ಸಮುದಾಯಕ್ಕೆ ಸೇರಿಲ್ಲ.ಲಾಂಛನಗಳನ್ನು ನಾವು ಮಾಡಿಕೊಂಡು ನಮ್ಮ ನಮ್ಮಲ್ಲಿ ಬೇಧಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ ಎಂದು ಇಳಕಲ್‌ನ ಖ್ಯಾತ ಪ್ರವಚನಕಾರ ಲಾಲ್‌ಹುಸೇನ್ ಕಂದಗಲ್ ಹೇಳಿದರು.

ಪಟ್ಟಣದ ಸಾರಿಗೆ ಘಟಕದಲ್ಲಿ ಬುಧವಾರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾನವನ ಘನತೆ ಎತ್ತಿ ಹಿಡಿಯುವ ಕೆಲಸವನ್ನು ಪ್ರವಾದಿ ಮಹ್ಮದ ಪೈಗಂಬರ್ ಮಾಡಿದರು.ಯಾವ ಜನರು ಮುಸ್ಲಿಂರನ್ನು ಜಾತಿವಾದಕ್ಕೆ ಪ್ರೇರಿಪಿಸುವುದು,ಜಾತಿವಾದಕ್ಕೆ ಹೋರಾಡುವುದು,ಜಾತಿವಾದಕ್ಕೆ ಕುಮ್ಮಕ್ಕು ನೀಡುವವರು ನಿಜವಾದ ಮುಸ್ಲಿಂರಲ್ಲ ಎಂದು ವಿಶ್ವಕ್ಕೆ ಸಂದೇಶ ಕೊಟ್ಟಿದ್ದಾರೆ.ಮಾನವತಾವಾದದ ಅಗತ್ಯತೆಯನ್ನು ಎತ್ತಿ ಹಿಡಿಯುವ ಕೆಲಸ ಪ್ರವಾದಿಗಳು ಮಾಡಿದ್ದಾರೆ.ನಾವೆಲ್ಲ ಸಹೋದರತ್ವ ಭಾವನೆಯಿಂದ ಸಾಗೋಣ.ಭಾಷೆಯ ಮಧ್ಯೆ ತಾರತಮ್ಯ,ಬಣ್ಣದ ಮೇಲೆ ತಾರತಮ್ಯ ಮಾಡಬೇಡಿ.ಜಾತಿಯ ಮೇಲೆ ಅಳೆಯದೇ ನೀತಿಯ ಮೇಲೆ ಬದುಕು ನಡೆಸಬೇಕು ಎಂದರು.

ನಮಾಜು ಮಾಡುವ ಕೈಗಳಿಗಿಂತ ದುಡಿದು ತಿನ್ನುವ ಕೈಗಳು ಶ್ರೇಷ್ಠ ಎಂದು ಪ್ರವಾದಿ ಮಹ್ಮದ ಅವರು ತಿಳಿಸಿದ್ದಾರೆ.ಮನುಷ್ಯನ ಮನಸ್ಸಿನ ಸಂಕುಚಿತತೆಯನ್ನು ಹೊಡೆದು ಹಾಕಬೇಕು. ವೇದ,ಬೌದ್ಧ, ಜೈನ,ಬೈಬಲ್,ದಾಸ,ವಚನ ಸಾಹಿತ್ಯ,ಸಿದ್ಧಾಂತ ಶಿಖಾಮಣಿಂiÀi ಗ್ರಂಥಗಳು ಮನುಷ್ಯತ್ವವನ್ನು ಸಾರುತ್ತವೆ.ಯಾವುದೇ ಪ್ರಚೋದನೆಗೆ ಒಳಗಾಗುವುದು ಬೇಡ.ಯಾರು ನನ್ನಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಾನೆಯೋ ಅವನೇ ನನ್ನ ಗುರು.ಯಾರು ನನ್ನನ್ನು,ನನಗೆ ಜಾತಿಯ ಮೇಲೆ ಗುರುತಿಸುತ್ತಾನೆಯೋ ಅವನೇ ನನ್ನ ವೈರಿ ಎಂದು ಭಾವಿಸಬೇಕು ಎಂದು ಪ್ರವಾದಿಯವರು ತಿಳಿಸಿದ್ದಾರೆ ಎಂದು ಕಂದಗಲ್ ಹೇಳಿದರು.


ಘಟಕ ವ್ಯವಸ್ಥಾಪಕ ಅಶೋಕಕುಮಾರ ಭೋವಿ ಮಾತನಾಡಿ, ಹಿಂದೂ ಮುಸ್ಲಿಂರು ಭಾವೈಕ್ಯತೆಯಿಂದ ಸಾಗುವ ಹಬ್ಬಗಳು ಸಹೋದರತೆ,ಭ್ರಾತೃತ್ವವನ್ನು ಬೆಳೆಸುತ್ತವೆ.ಜಾತಿ ಜಾತಿಗಳೆಂದು ಹೊಡೆದಾಡದೇ ಎಲ್ಲರೂ ಒಂದೇ ಭಾವನೆಯಿಂದ ಜೀವನ ನಡೆಸಿದಾಗ ಸಮಾಜದಲ್ಲಿ ನೆಮ್ಮದಿ ಹರಡುತ್ತದೆ ಎಂದರು.ಸಾರಿಗೆ ಘಟಕದ ಲೆಕ್ಕಾಧಿಕಾರಿ ಸಮಿ, ಪಾರುಪತ್ತೆದಾರ ವೆಂಕಟೇಶ,ಎಟಿಎಸ್ ವಿಠ್ಠಲ ಚವ್ಹಾಣ,ಕಾರ್ಮಿಕ ಮುಖಂಡ ಸಾಹೇಬಲಾಲ್ ಪಟೇಲ್,ಜಮಿಯತೆ ಇಸ್ಲಾಮಿ ಹಿಂದ್ ಸಂಚಾಲಕ ನೂರೇನಬಿ ನದಾಫ, ಎಸ್.ಆರ್.ಮುಲ್ಲಾ ಇದ್ದರು.

Latest News

ಕಲಾವಿದರ ಸಂಘ ಉದ್ಘಾಟನೆ:                                                           ಸಮಾಜ ಬಯಸುವುದನ್ನು ಕಲಾವಿದ ನೀಡುತ್ತಾನೆ-ಹೂಗಾರ

ಕಲಾವಿದರ ಸಂಘ ಉದ್ಘಾಟನೆ: ಸಮಾಜ ಬಯಸುವುದನ್ನು ಕಲಾವಿದ ನೀಡುತ್ತಾನೆ-ಹೂಗಾರ

ಮುದ್ದೇಬಿಹಾಳ : ಗ್ರಾಮೀಣ ಭಾಗದಲ್ಲಿ ಜನಪದ ಹಾಡುಗಳಲ್ಲಿ ಅಶ್ಲೀಲತೆ ಹೆಚ್ಚುತ್ತಿದ್ದು ಅದಕ್ಕೆ ಕಡಿವಾಣ ಹಾಕಬೇಕು

ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ ಸೇವೆಗೆ ನಾಗಲಕ್ಷ್ಮೀ ಚೌಧರಿ  ಮೆಚ್ಚುಗೆ

ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ ಸೇವೆಗೆ ನಾಗಲಕ್ಷ್ಮೀ ಚೌಧರಿ ಮೆಚ್ಚುಗೆ

ಮುದ್ದೇಬಿಹಾಳ : ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಕೊಡುವ ಪ್ರಮಾಣ ಪತ್ರವೇ ನಿಮ್ಮ ಸೇವೆಯ ನಿಜವಾದ

ಮಾನವ ಬಂಧುತ್ವ ವೇದಿಕೆ ಖಂಡನೆ :                                ಏಐಸಿಸಿ ಅಧ್ಯಕ್ಷ ಖರ್ಗೆ ಭಾಷಣ ಮಾಡಿದ ಜಾಗೆ ಶುದ್ಧೀಕರಣ

ಮಾನವ ಬಂಧುತ್ವ ವೇದಿಕೆ ಖಂಡನೆ : ಏಐಸಿಸಿ ಅಧ್ಯಕ್ಷ ಖರ್ಗೆ ಭಾಷಣ ಮಾಡಿದ ಜಾಗೆ ಶುದ್ಧೀಕರಣ

ಮುದ್ದೇಬಿಹಾಳ : ಉತ್ತರಖಂಡದ ರಾಮಲೀಲಾ ಮೈದಾನದಲ್ಲಿನ ಸಾರ್ವಜನಿಕ ಸ್ಥಳದಲ್ಲಿ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ

ಜಾನಪದ ಕ್ಷೇತ್ರದ ಪುನಃಶ್ಚೇತನಕ್ಕೆ ಶ್ರಮಿಸಿ-ಅಶೋಕ ತಡಸದ

ಜಾನಪದ ಕ್ಷೇತ್ರದ ಪುನಃಶ್ಚೇತನಕ್ಕೆ ಶ್ರಮಿಸಿ-ಅಶೋಕ ತಡಸದ

ಮುದ್ದೇಬಿಹಾಳ : ಗ್ರಾಮೀಣ ಭಾಗದಲ್ಲಿರುವ ಜನಪದ ಕಲೆಗಳನ್ನು,ಕಲಾವಿದರನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು

ಮುದ್ದೇಬಿಹಾಳ : ಆ.22 ರಂದು ಜಾನಪದ ಪರಿಷತ್ ಘಟಕ ಉದ್ಘಾಟನೆ

ಮುದ್ದೇಬಿಹಾಳ : ಆ.22 ರಂದು ಜಾನಪದ ಪರಿಷತ್ ಘಟಕ ಉದ್ಘಾಟನೆ

ಮುದ್ದೇಬಿಹಾಳ : ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ,ಜನಪದ ಕರಗ ಕೃತಿ ಲೋಕಾರ್ಪಣೆ ಹಾಗೂ ಸಾಧಕ ಕಲಾವಿದರಿಗೆ ಗೌರವ ಸನ್ಮಾನ ಕಾರ್ಯಕ್ರಮ ಆ.22 ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ಬೆಂಗಳೂರು ಬೇಕರಿ ಫಂಕ್ಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಕುಂಟೋಜಿ ಭಾವೈಕ್ಯತೆ ಮಠದ ಚೆನ್ನವೀರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸುವರು.ಬಸರಕೋಡ ಪವಾಡ ಬಸವೇಶ್ವರ ಕಮೀಟಿ ಅಧ್ಯಕ್ಷ ಕೆ.ವಾಯ್.ಬಿರಾದಾರ ಉದ್ಘಾಟಿಸುವರು.ಎಸ್.ಜಿ.ವಿ.ಸಿ ಕಾಲೇಜಿನ ಕಾರ್ಯದರ್ಶಿ ಅಶೋಕ ತಡಸದ ಕೃತಿ ಲೋಕಾರ್ಪಣೆ ಮಾಡುವರು.ಕರ್ನಾಟಕ

‘ಕಾಲುವೆಗೆ ನೀರು ಬಿಡಿ,ಇಲ್ಲವೇ ಸಾಯಲು ವಿಷ ಕೊಡಿ’

‘ಕಾಲುವೆಗೆ ನೀರು ಬಿಡಿ,ಇಲ್ಲವೇ ಸಾಯಲು ವಿಷ ಕೊಡಿ’

ಮುದ್ದೇಬಿಹಾಳ : ಬರಗಾಲ ಬಿದ್ದಿದೆ.ಹೊಲದಲ್ಲಿ ಬಿತ್ತಿರುವ ಬೆಳೆಗಳು ಒಣಗಿ ಹೋಗುತ್ತಿವೆ.ದನ-ಕರುಗಳಿಗೆ ಕುಡಿಯಲು ನೀರಿಲ್ಲ. ಹೊಲಕ್ಕೆ ಹೋದಾಗ ಒಣಗಿದ ಬೆಳೆಗಳನ್ನು ನೋಡಿದರೆ ಕಣ್ಣೀರು ಬರುತ್ತದೆ. ಅಧಿಕಾರಿಗಳು ಕಾಲುವೆಗೆ ನೀರು ಬಿಡಿ ಎಂದರೆ ತಯಾರಿಲ್ಲ.ಹೀಗೆ ಬದುಕುವ ಬದಲು ಸಾಯಲು ಅಧಿಕಾರಿಗಳೇ ವಿಷ ಕೊಡಿ ಎಂದು ರೈತ ಸಿದ್ದಪ್ಪ ಮಾದರ ಕೆಬಿಜೆಎನ್‌ಎಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಕೃಷ್ಣಾ ಭಾಗ್ಯ ಜಲ ನಿಗಮದ ಎ.ಎಲ್.ಬಿ.ಸಿ. ಉಪ ವಿಭಾಗ-2ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಗೆ