ಮುದ್ದೇಬಿಹಾಳ : ಮುಸ್ಲಿಂರ ಹಬ್ಬಕ್ಕೆ ಹಿಂದೂಗಳು ಕೈಜೋಡಿಸುವುದು,ಹಿಂದೂಗಳ ಹಬ್ಬಕ್ಕೆ ಮುಸ್ಲಿಂ ಬಾಂಧವರು ಸಹಕಾರ ನೀಡುವ ಕಾರ್ಯಗಳಿಂದ ಸಮಾಜದಲ್ಲಿ ಭಾವೈಕ್ಯತೆ ಸೌಹಾರ್ದತೆ ನೆಲೆಸುತ್ತದೆ ಎಂದು ಗಣಿತ ಲೋಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಬಸವರಾಜ ಗುರವ ಹೇಳಿದರು.
ಪಟ್ಟಣದ ಪುರಸಭೆ ಮುಂದೆ ಇರುವ ಗಜಾನನ ಟ್ಯಾಕ್ಸಿ ,ಜೀಪ್ ಚಾಲಕರು,ಮಾಲೀಕರ ಸಂಘದಿoದ ಏರ್ಪಡಿಸಿದ್ದ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಾತಿ,ಧರ್ಮಗಳ ಮಧ್ಯೆ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡು ದೇಶದ ಹಲವೆಡೆ ವಿಷಮ ಪರಿಸ್ಥಿತಿ ಸೃಷ್ಟಿಸುವ ಕಾರ್ಯ ಮಾಡುತ್ತಿರುವುದನ್ನು ಕಾಣುತ್ತೇವೆ.ಆದರೆ ನಮ್ಮ ಭಾಗದಲ್ಲಿ ಹಿಂದೂ-ಮುಸ್ಲಿo ಬಾಂಧವರು ಪರಸ್ಪರ ಸೌಹಾರ್ದಯುತ ನಡೆಯನ್ನು ನಾವೆಲ್ಲ ಅನುಸರಿಸುತ್ತಿದ್ದೇವೆ.ಶಾಂತಿಯುತವಾದ ಹಬ್ಬದ ಆಚರಣೆಗೆ ಎಲ್ಲರೂ ಕೈ ಜೋಡಿಸಿದ್ದಾರೆ ಎಂದರು.
ವೀರಶೈವ ಲಿಂಗಾಯತ ಸಮಾಜದ ಮುಖಂಡ ಗುರುಸ್ವಾಮಿ ಬೂದಿಹಾಳಮಠ ಮಾತನಾಡಿ,ಈದ್ ಮಿಲಾದ್ ನಿಮಿತ್ಯ ಎಲ್ಲರಿಗೂ ಅನ್ನಸಂತರ್ಪಣೆ ಏರ್ಪಡಿಸುವ ಆಲೋಚನೆ ಮಾದರಿಯಾದದ್ದು.ದಾನಿಗಳ ನೆರವಿನಿಂದ ಗಣೇಶೋತ್ಸವ,ಈದ್ ಮಿಲಾದ್‌ಹಬ್ಬದಲ್ಲಿ ಹಸಿದವರಿಗೆ ಹೊತ್ತಿನ ಊಟ ಕೊಡುವುದು ಪುಣ್ಯದ ಕೆಲಸ ಎಂದರು.
ಈ ಸಂದರ್ಭದಲ್ಲಿ ಗಜಾನನ ಜೀಪ,ಟ್ಯಾಕ್ಸಿ ಚಾಲಕರ,ಮಾಲೀಕರ ಸಂಘದ ಅಧ್ಯಕ್ಷ ಹಣಮಂತ ಗುಳೇದಗುಡ್ಡ, ಪ್ರಮುಖರಾದ ಶಂಭು ಅಕ್ಕಿ,ರ‍್ರಿಸ್ವಾಮಿ,ಸಂದೀಪ ಬಿದರಕೋಟಿ,ಶಬ್ಬೀರ್ ಪಡ್ನೂರ,ಸಂಘದ ಉಪಾಧ್ಯಕ್ಷ ಜಗದೇವ ಚಲವಾದಿ,ಮಸ್ತಾನ್ ಬಾಗವಾನ,ಬಾಂಬೆಗೌಡ ಬಿರಾದಾರ,ಅಪ್ಪು ಮುರಾಳ,ಅಯ್ಯಪ್ಪ ಯಾಳವಾರ, ಮುಸ್ತಾಫ ಮುಲ್ಲಾ,ಷರೀಫ ನಾಯ್ಕೋಡಿ,ಮಲ್ಲು ಚೌಧರಿ ಸೇರಿದಂತೆ ಹಲವರು ಇದ್ದರು.







