Hunagund Bagalkot lokayukta sp satish chitagubbi

Hunagund: ಹಾಸ್ಟೆಲ್ ಗೆ ಲೋಕಾಯುಕ್ತ ಎಸ್ಪಿ ಭೇಟಿ.. ಅಧಿಕಾರಿಗಳಿಗೆ ತರಾಟೆ

Hunagund: ಹಾಸ್ಟೆಲ್ ಗೆ ಲೋಕಾಯುಕ್ತ ಎಸ್ಪಿ ಭೇಟಿ.. ಅಧಿಕಾರಿಗಳಿಗೆ ತರಾಟೆ

ಹುನಗುಂದ: ಸಮಾಜ ಕಲ್ಯಾಣ ಇಲಾಖೆಯ ಬಾಲಕರ ಮೆಟ್ರೀಕ್ ಪೂರ್ವ ವಸತಿ ನಿಲಯ ಮತ್ತು ಮೆಟ್ರೀಕ್ ನಂತರದ ವಸತಿ ನಿಲಯಕ್ಕೆ (hunagund) ಬಾಗಲಕೋಟೆ ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಬ್ಬಿ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Join Our Telegram: https://t.me/dcgkannada

ಪಟ್ಟಣದ (Hunagund) ಹೊರವಲಯದ ಗುಡ್ಡದಲ್ಲಿರುವ ವಸತಿ ನಿಲಯಕ್ಕೆ ಭೇಟಿ ನೀಡಿ ವಸತಿ ನಿಲಯದ ಮುಂದೆ ನಿಂತಿರುವ ಚರಂಡಿ ನೀರಿನ ಗುಂಡಿಯು ಅನೇಕ ವರ್ಷಗಳಿಂದ ನೀರು ನಿಂತು ಮಲಿನಗೊಂಡು ಸೋಳ್ಳೆಯ ಉತ್ಪತ್ತಿಯಾಗುತ್ತಿಯ ತಾಣವಾಗಿದ್ದು, ಇಷ್ಟು ದಿನವಾದರೂ ಯಾವುದೇ ಕ್ರಮ ಏಕೆ ಕೈಗೊಂಡಿಲ್ಲ ಎಂದು, ಅವ್ಯವಸ್ಥೆಯನ್ನು ಕಂಡ ಲೋಕಾಯುಕ್ತ ಅಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಂ.ಎಚ್.ಕಟ್ಟಿಮನಿ ಮತ್ತು ಪುರಸಭೆ ಇಲಾಖೆಯ ಸಿಬ್ಬಂದಿಗೆ ತರಾಟೆಯನ್ನು ತೆಗೆದುಕೊಂಡ ಘಟನೆ ನಡೆಯಿತು.

ಇದನ್ನೂ ಓದಿ: BJP Rebels: ಅತೃಪ್ತರ ಮುಂದೆ ಮಂಡಿಯೂರಿದ್ರಾ ಬಿಜೆಪಿ ರಾಜ್ಯಾಧ್ಯಕ್ಷ..? ಬಿ.ವೈ. ವಿಜಯೇಂದ್ರ ಶಾಕಿಂಗ್ ರಿಯಾಕ್ಷನ್..!

ವಿದ್ಯಾರ್ಥಿಗಳ ವಸತಿ ನಿಲಯಗಳ ಕೊಠಡಿಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಊಟದ ಮತ್ತು ವಸತಿ ನಿಲಯದಲ್ಲಿ ಯಾವುದೇ ಸಮಸ್ಯೆಗಳಿದ್ದರೆ ನಮಗೆ ತಿಳಿಸಿ‌ ಎಂದು ಸೂಚಿಸಿದರು.

ವಸತಿ ನಿಲಯದಲ್ಲಿನ ಆಹಾರ ಗುಣಮಟ್ಟ, ಗ್ರಂಥಾಲಯ, ಶುದ್ದನೀರಿನ ಘಟಕ, ವಿದ್ಯಾರ್ಥಿಗಳಿಗೆ ನೀಡುವ ಕಿಟ್, ಶೌಚಾಲಯದ, ಅಡುಗೆ ಕೋಣೆ, ಸ್ವಚ್ಚತೆ, ಹಾಜರಾತಿ ಕುರಿತು ವಸತಿ ನಿಲಯಗಳ ಕಡತಗಳಗಳನ್ನು ಪರೀಶೀಲನೆ ನಡೆಸಿದರು.

ಲೋಕಾಯುಕ್ತ ಡಿವೈಎಸ್ಪಿ ಸಿದ್ದೇಶ್ವರ, ಸಿಪಿಐಗಳಾದ ಬಸವರಾಜ ಮುಕರ್ತಿಹಾಳ, ಎಂ.ಎಚ್.ಬಿದರಿ, ತಹಸೀಲ್ದಾರ ನಿಂಗಪ್ಪ ಬಿರಾದರ, ತಾಪಂ ಇಒ ಮುರಳೀಧರ ದೇಶಪಾಂಡೆ, ಪುರಸಭೆ ಮ್ಯಾನೇಜರ ಎಮ.ಎಚ್.ಕಳ್ಳಿಗುಡ್ಡ ಇದ್ದರು.

ಕಾಸಿಗಾಗಿ ಪೋಸ್ಟಿಂಗ್ ನಿಂದಲೇ ತುಂಗಭದ್ರಾ ಸರಪಳಿ ಕಟ್: ಹೆಚ್.ಡಿ. ಕುಮಾಸ್ವಾಮಿ‌ ಗಂಭೀರ ಆರೋಪ

ಬೆಂಗಳೂರು: ರಾಜ್ಯ ಸರಕಾರ ಹಣ ಪಡೆದು ಪೋಸ್ಟಿಂಗ್ ನೀಡುವುದು ನಿಲ್ಲಿಸಿದರೆ ತುಂಗಭದ್ರಾ ಜಲಾಶಯದಲ್ಲಿ ಕ್ರಸ್ಟ್ ಗೇಟ್ ಕೊಚ್ಚಿ ಹೋದಂತಹ ಗಂಭೀರ ಪ್ರಕರಣಗಳು ನಿಲ್ಲುತ್ತವೆ ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಟೀಕಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ ಘಟನೆ ಅತ್ಯಂತ ಗಂಭೀರವಾದದ್ದು. ನಾನು ಸರಕಾರಕ್ಕೆ ಒಂದು ಸಲಹೆ ಕೊಡಲು ಬಯಸುತ್ತೇನೆ. ಅಧಿಕಾರಿಗಳ ವರ್ಗಾವಣೆ ಮಾಡುವಾಗ ಹಣ ತೆಗೆದುಕೊಂಡು ವರ್ಗ ಮಾಡುವ ಕೆಲಸ ಬಿಡಿ ಎಂದು ತರಾಟೆಗೆ ತೆಗೆದುಕೊಂಡರು.

ನಾನು ಕೂಡ ಸಿಎಂ ಆಗಿ ಎರಡು ಬಾರಿ ಕೆಲಸ ಮಾಡಿದ್ದೇನೆ. ವರ್ಗಾವಣೆ ದಂಧೆಯಲ್ಲಿ ಕಾಂಗ್ರೆಸ್ ನವರು ಎಷ್ಟರಮಟ್ಟಿಗೆ ತೊಡಗುತ್ತಿದ್ದರು ಎಂದರೆ, ನನಗೆ ಬಹಳ ಹಿಂದೆ ಕೊಡುತ್ತಿದ್ದರು. ನನಗೆ ವರ್ಗಾವಣೆ ಮಾಡುವ ಅಧಿಕಾರ ಇರಲಿಲ್ಲ ಎಂದರು.

ದುಡ್ಡು ಕೊಟ್ಡು ವರ್ಗಾವಣೆ ಮಾಡಿಸಿಕೊಳ್ಳುವ ಅಧಿಕಾರಿಗೆ ಕೆಲಸದ ಕಡೆ ಗಮನ ಎಲ್ಲಿರುತ್ತದೆ. ಕೊಟ್ಟ ದುಡ್ಡನ್ನು ಮರಳಿ ವಸೂಲಿ ಮಾಡಿಕೊಳ್ಳುವ ಕಡೆ ಅವನ ಗಮನ ಇರುತ್ತದೆ. ಅಲ್ಲಿರುವಷ್ಟರಲ್ಲಿ ಅಷ್ಟೂ ಹಣವನ್ನು ಸಂಗ್ರಹ ಮಾಡುವ ಗುರಿ ಹೊಂದಿರುತ್ತಾನೆ. ಹೀಗಾಗಿ ಅವನ ಗಮನವೆಲ್ಲಾ ಹಣದ ಕಡೆಯೇ ಇರುತ್ತದೆ. ಮುಖ್ಯ ಎಂಜಿನಿಯರ್, ಕಾರ್ಯನಿರ್ವಾಹಕ ಎಂಜಿನಿಯರ್ ಸೇರಿ ಎಲ್ಲಾ ಉನ್ನತ ಅಧಿಕಾರಿಗಳಿಗೆ ದುಡ್ಡು ತೆಗೆದುಕೊಂಡು ಪೋಸ್ಟಿಂಗ್ ಕೊಡಲಾಗುತ್ತಿದೆ ಎಂದು ಸಚಿವರು ಆರೋಪಿಸಿದರು.

ತುಂಗಭದ್ರಾ ಅಣೆಕಟ್ಟು ಪ್ರಕರಣದ ಬಗ್ಗೆ ವಿಸ್ತೃತ ತನಿಖೆ ಮಾಡಬೇಕು. ತರಾತುರಿಯಲ್ಲಿ ಮಾಡಲು ಹೋಗಿ ಮತ್ತೇನೋ ಅವಾಂತರ ಮಾಡಿಕೊಳ್ಳಬೇಡಿ. ಪರಿಣಿತರ ನೆರವು ಪಡೆದು ಶಾಶ್ವತವಾಗಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿ. ಮತ್ತೆ ರೈತರಿಗೆ ತೊಂದರೆ ಕೊಡುವುದು ಬೇಡ ಎಂದು ಅವರು ಸಲಹೆ ಮಾಡಿದರು.

ಅಣೆಕಟ್ಟೆಯ ಸುರಕ್ಷತೆಯ ಬಗ್ಗೆ ತಾಂತ್ರಿಕ ಸಮಿತಿ ಪ್ರತೀ ವರ್ಷ ಭೇಟಿ ಕೊಟ್ಟು ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ಮಾಡುತ್ತದೆ. ರೆಡಿಮೇಡ್ ಪ್ರಶ್ನಾವಳಿಗೆ ರೆಡಿಮೇಡ್ ಉತ್ತರ ಬರೆದು ಕಾಟಾಚಾರಕ್ಕೆ ಆ ಕೆಲಸ ಮುಗಿಸುತ್ತದೆ. ಕ್ರಸ್ಟ್ ಗೇಟ್ ಗಳಿಗೆ ಅಳವಡಿಸಿರುವ ಸರಪಳಿಗಳನ್ನು ಕಾಲ ಕಾಲಕ್ಕೆ ಪರಿಶೀಲನೆ ಮಾಡುತ್ತಿರಬೇಕು. ಅವುಗಳಿಗೆ ಹಲವಾರು ವರ್ಷಗಳಿಂದ ಲೂಬ್ರಿಕೇಷನ್ ಮಾಡದ ಕರ್ಣಾಕ್ಕೆ ಈ ಪರಿಸ್ಥಿತಿ ಉಂಟಾಗಿದೆ ಎಂದು ಅವರು ಟೀಕಾಪ್ರಹಾರ ನಡೆಸಿದರು.

Latest News

Boat Online such broker bear blast slot free spins as Yahtzee

BlogsBroker bear blast slot free spins: The brand new Dice:Yahtzee ThumbAdded

Păcănele Online Sweet nv casino Bonanza Gratis În Dans Pacanele

ContentNv casino | Caracteristica Bonus Roata Grămadă Să BaniSă Sunt Pacanele

Hra Chicken Road od InOut Games se blíží k velikosti velkého města.

Theme a Design Hra Chicken Road je netradiční online herní automat

Hühnerrad-Münzspiel im Stil von Casino Slot Machine – Die Ernte des Glücks bei Chicken Cross

In den letzten Jahren haben sich Online-Casinos um die Welt zu

ವಿಜಯಪುರ ಜಿಲ್ಲೆಯ ಕಾಲೇಜುಗಳನ್ನು ಅಕ್ಕಮಹಾದೇವಿ ಮ.ವಿ.ವಿ ಸಂಯೋಜನೆಗೊಳಪಡಿಸಿ-ಎಂ.ಬಿ.ಸಗರಿ

ವಿಜಯಪುರ ಜಿಲ್ಲೆಯ ಕಾಲೇಜುಗಳನ್ನು ಅಕ್ಕಮಹಾದೇವಿ ಮ.ವಿ.ವಿ ಸಂಯೋಜನೆಗೊಳಪಡಿಸಿ-ಎಂ.ಬಿ.ಸಗರಿ

ಮುದ್ದೇಬಿಹಾಳ : ಪ್ರಸ್ತುತ ವಿಜಯಪುರ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾರಹಿತ ಪದವಿ ಕಾಲೇಜುಗಳು ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಸಂಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಗ ವಿಜಯಪುರ ಜಿಲ್ಲೆಯ ಎಲ್ಲ ಪದವಿ ಕಾಲೇಜುಗಳನ್ನು ಬಾಗಲಕೋಟಿ ಜಿಲ್ಲೆಯ ಜಮಖಂಡಿಯಲ್ಲಿರುವ ವಿಶ್ವವದ್ಯಾಲಯಕ್ಕೆ ಸೇರಿಸುವ ಬಹಳಷ್ಟು ಹುನ್ನಾರ ನಡೆದಿದೆ ಎಂದು ಅರಿಹಂತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಾವೀರ ಸಗರಿ ಆರೋಪಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ ಜಿಲ್ಲೆಯ ಎಲ್ಲ ಕಾಲೇಜುಗಳನ್ನು ವಿಜಯಪುರದಲ್ಲಿ ಈಗಾಗಲೇ

ಕೋವಿಡ್ ಸಮಯದಲ್ಲಿ ನಿರ್ವಹಿಸಿದ ಸೇವೆ ಅನುಪಮ-ಡಾ.ಶೇಗುಣಸಿ

ಕೋವಿಡ್ ಸಮಯದಲ್ಲಿ ನಿರ್ವಹಿಸಿದ ಸೇವೆ ಅನುಪಮ-ಡಾ.ಶೇಗುಣಸಿ

ಮುದ್ದೇಬಿಹಾಳ : ಕೋವಿಡ್ ಸಮಯದಲ್ಲಿ ಜೀವ ಒತ್ತೆ ಇಟ್ಟು ಸೇವೆ ಸಲ್ಲಿಸಿದ ವೈದ್ಯರು,ಶುಶ್ರೂಷಕರ ಸೇವೆ ಅನುಪಮವಾದದ್ದು ಎಂದು ಕಾಳಗಿ ಸಮುದಾಯ ಕೇಂದ್ರದ ವೈದ್ಯ ಡಾ.ಅನೀಲಕುಮಾರ ಶೇಗುಣಸಿ ಹೇಳಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಕರ್ನಾಟಕ ರಾಜ್ಯ ಸರ್ಕಾರಿ ಶುಶ್ರೂಷಾಧಿಕಾರಿಗಳ ಕೇಂದ್ರ ಸಂಘದ ತಾಲೂಕು ಘಟಕದಿಂದ ನೂತನ ವರ್ಷದ ದಿನದರ್ಶಿಕೆ ಉದ್ಘಾಟನೆ,ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪರಶುರಾಮ ವಡ್ಡರ ಮಾತನಾಡಿ, ವೈದ್ಯಕೀಯ ಸೇವೆಯನ್ನು