Muddebihal: ಚಿರತೆ ಹೆಜ್ಜೆ ಹೋಲುವ ಕಾಡುಪ್ರಾಣಿ ಹೆಜ್ಜೆ ಗುರುತು ಪತ್ತೆ? ಕಂದಗನೂರಿನಲ್ಲಿ ಮನೆ ಮಾಡಿದ ಆತಂಕ!

Muddebihal: ಚಿರತೆ ಹೆಜ್ಜೆ ಹೋಲುವ ಕಾಡುಪ್ರಾಣಿ ಹೆಜ್ಜೆ ಗುರುತು ಪತ್ತೆ? ಕಂದಗನೂರಿನಲ್ಲಿ ಮನೆ ಮಾಡಿದ ಆತಂಕ!

ಮುದ್ದೇಬಿಹಾಳ : ತಾಲ್ಲೂಕಿನ ಕಂದಗನೂರಿನ ಕಬ್ಬಿನ ಜಮೀನೊಂದರಲ್ಲಿ ಚಿರತೆಯಂತಹ ಕಾಡುಪ್ರಾಣಿಯದ್ದು ಎನ್ನಲಾದ ಹೆಜ್ಜೆ ಗುರುತು ಪತ್ತೆಯಾಗಿದ್ದು, ಈ ಭಾಗದ ಗ್ರಾಮಸ್ಥರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಜು.29 ರಂದು ಕಂದಗನೂರ ಗ್ರಾಮದ ಬೀಯಪ್ಪ ಬೋಳಿ ಅವರ ಹೊಲದಲ್ಲಿ ಆಕಳು ಹಾಗೂ ಕರುವಿನ ಕಳೆಬರ ಪತ್ತೆಯಾಗಿದೆ. ಇದು ಕಾಡು ಪ್ರಾಣಿ ದಾಳಿಯಿಂದ ಎರಡು ಜಾನುವಾರುಗಳು ಮೃತಪಟ್ಟಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಏತನ್ಮಧ್ಯೆ, ಕಂದಗನೂರು ಭಾಗದಲ್ಲಿ ಚಿರತೆ ಬಂದಿದೆ ಎಂಬ ವಿಡಿಯೋ, ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಅವು ಈ ಭಾಗದ್ದಲ್ಲ ಎಂಬುದನ್ನು ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ.

ಕಾಡುಪ್ರಾಣಿ ಸೆರೆಗೆ ಬಿ.ಎಸ್.ಬೋಳಿ ಅವರ ಹೊಲದಲ್ಲಿ ಬೋನು ಇರಿಸಲಾಗಿದೆ. ಆದರೆ ಜು.30 ರಂದು ಮೃತಪಟ್ಟ ಆಕಳ ಮಾಂಸ ತಿನ್ನುವುದಕ್ಕೆ ಕಾಡುಪ್ರಾಣಿ ಬಂದು ಹೋಗಿದೆ ಎಂದು ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿ ಬಸನಗೌಡ ಬಿರಾದಾರ ತಿಳಿಸಿದ್ದಾರೆ.

ಹೊಲದಲ್ಲಿ ಮಂಗಳವಾರ ಅವಲೋಕಿಸಿದಾಗ ಕಾಡುಪ್ರಾಣಿಯ ಹೆಜ್ಜೆಗಳು ಚಿರತೆಯದ್ದೆಂಬಂತೆ ಕಾಣುತ್ತಿವೆ.ಆದರೆ ಖಚಿತವಾಗಿ ಹೇಳಲು ಆಗದು.ಕತ್ತೆ ಕಿರುಬ ಕೂಡಾ ಜಾನುವಾರುಗಳನ್ನು ತಿಂದು ಹೋಗುತ್ತದೆ. ಮೇಲಧಿಕಾರಿಗಳ ಸೂಚನೆಯಂತೆ ಕಾಡುಪ್ರಾಣಿ ಸೆರೆ ಹಿಡಿಯಲು ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಅದರಲ್ಲಿ ಸೆರೆಯಾದರೆ ಯಾವ ಪ್ರಾಣಿ ಎಂಬುದು ಖಚಿತವಾಗಿ ತಿಳಿದು ಬರಲಿದೆ ಎಂದು ಮಾಹಿತಿ ನೀಡಿದರು.

ಚಿರತೆ ಬಂದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋ ಫೋಟೊಗಳ ಮಾಹಿತಿಯಿಂದ ಗ್ರಾಮಸ್ಥರು ತೀವ್ರ ಆತಂಕಗೊಂಡರು. ಸಂಜೆಯವ ಹೊತ್ತಿಗೆ ಚಿರತೆ ಕಂದಗನೂರಿನಲ್ಲಿ ಕಾಣಿಸಿದ್ದಲ್ಲ ಬೇರೆ ಸ್ಥಳದ್ದು ಎಂದು ಗೊತ್ತಾದ ಬಳಿಕ ಅಲ್ಪ ನಿರಾಳರಾಗಿದ್ದಾರೆ. ಆದರೆ, ಚಿರತೆಯೇ ಬಂದಿದೆ ಎಂಬುದನ್ನು ಯಾರೊಬ್ಬರು ನೋಡಿಲ್ಲ ಎಂದು ಗ್ರಾಮಸ್ಥ ರಾಜಾಭಕ್ಷಿ ಮಕಾಶಿ ತಿಳಿಸಿದರು.

ಕೃಷಿ ಚಟುವಟಿಕೆ ಕೈಗೊಳ್ಳಲು ಗ್ರಾಮಸ್ಥರ ಹಿಂದೇಟು: ಚಿರತೆ ಕಾಣಿಸಿಕೊಂಡಿದೆ ಎಂಬ ವದಂತಿಯಿಂದ ಭೀತಿಗೊಳಗಾಗಿರುವ ಈ ಭಾಗದ ಕಂದಗನೂರು, ಕಾಳಗಿ, ಬಳಬಟ್ಟಿ ಗ್ರಾಮದ ರೈತಾಪಿ ವರ್ಗದವರಲ್ಲಿ ಕೃಷಿ ಚಟುವಟಿಕೆ ಗೆ ಹೋಗುವುದನ್ನು ಬಿಟ್ಟು ಮನೆಯಲ್ಲಿ ಕೂರುವಂತಾಗಿದೆ. ಆದಷ್ಟು ಬೇಗ ತಾಲ್ಲೂಕಾಡಳಿತದ ಅಧಿಕಾರಿಗಳು ಕಾಡುಪ್ರಾಣಿ ಪತ್ತೆ ಹಚ್ಚಿ ಸೆರೆ ಹಿಡಿದು ರೈತರಲ್ಲಿ ಉಂಟಾಗಿರುವ ಆತಂಕವನ್ನು ದೂರ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Latest News

ಟೆನ್ನಿಸ್‌ಬಾಲ್ ಕ್ರಿಕೆಟ್ ಪ್ರಿಮಿಯರ್ ಲೀಗ್:                      ಆರ್.ಎ.ಸಿ.ಸಿ ತಂಡ ಚಾಂಪಿಯನ್-ಒಂದು ಲಕ್ಷ ರೂ.ಬಹುಮಾನ

ಟೆನ್ನಿಸ್‌ಬಾಲ್ ಕ್ರಿಕೆಟ್ ಪ್ರಿಮಿಯರ್ ಲೀಗ್: ಆರ್.ಎ.ಸಿ.ಸಿ ತಂಡ ಚಾಂಪಿಯನ್-ಒಂದು ಲಕ್ಷ ರೂ.ಬಹುಮಾನ

ಮುದ್ದೇಬಿಹಾಳ : ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ನಡೆದ ಮುದ್ದೇಬಿಹಾಳ ಟೆನ್ನಿಸ್ ಕ್ರಿಕೇಟ್

ಹುಲ್ಲೂರಿನಲ್ಲಿ ಕಬ್ಬು ಬೆಳೆಗಾರರ ಧರಣಿ:                                 ನಾಳೆ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನಿರೀಕ್ಷೆ-ಶಾಂತಗೌಡ ಪಾಟೀಲ್

ಹುಲ್ಲೂರಿನಲ್ಲಿ ಕಬ್ಬು ಬೆಳೆಗಾರರ ಧರಣಿ: ನಾಳೆ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನಿರೀಕ್ಷೆ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ : ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಒಂದು ತಿಂಗಳಿನಿoದ

ನಿಯೋಜಿತ ಕನ್ನಡ ಸಾಹಿತ್ಯಭವನ ನಿರ್ಮಾಣಕ್ಕೆ ಸ್ಥಳ ನಿಗದಿ

ನಿಯೋಜಿತ ಕನ್ನಡ ಸಾಹಿತ್ಯಭವನ ನಿರ್ಮಾಣಕ್ಕೆ ಸ್ಥಳ ನಿಗದಿ

ಮುದ್ದೇಬಿಹಾಳ : ಸಾಹಿತ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಪಟ್ಟಣದ ಆಲಮಟ್ಟಿ ರಸ್ತೆಯ ಬಳಿ ಇರುವ ಸಾಯಿಮಂದಿರ

‘ಹೃದಯದ ಅಂತರoಗದ ಗೋಡೆಯಲ್ಲಿ ಕನ್ನಡ ಶಾಶ್ವತವಾಗಿ ನೆಲೆಸಲಿ’

‘ಹೃದಯದ ಅಂತರoಗದ ಗೋಡೆಯಲ್ಲಿ ಕನ್ನಡ ಶಾಶ್ವತವಾಗಿ ನೆಲೆಸಲಿ’

ಮುದ್ದೇಬಿಹಾಳ : ಇಂದಿನ ಆಧುನಿಕ ಕಾಲದಲ್ಲಿ ಇಂಗ್ಲಿಷ್ ಭಾಷೆಯ ಅವಶ್ಯಕತೆ ಇದೆ ಎಂಬುದನ್ನು ನಾವು

ಅ.30 ರಂದು ಗಂಗೂರಿನಲ್ಲಿ ಅಂಕಲಿಮಠದ ಶ್ರೀಗಳ ತುಲಾಭಾರ

ಅ.30 ರಂದು ಗಂಗೂರಿನಲ್ಲಿ ಅಂಕಲಿಮಠದ ಶ್ರೀಗಳ ತುಲಾಭಾರ

ಮುದ್ದೇಬಿಹಾಳ : ದಸರಾ  ನಿಮಿತ್ಯವಾಗಿ  ತಾಲ್ಲೂಕಿನ  ಗಂಗೂರ  ಗ್ರಾಮದಲ್ಲಿ ಅ.30  ರಂದು ಬೆಳಗ್ಗೆ 11.30ಕ್ಕೆ  ಸಾಮೂಹಿಕ  ವಿವಾಹ, 108 ಮುತೈದೆಯರಿಗೆ  ಉಡಿ  ತುಂಬುವ ಕಾರ್ಯಕ್ರಮ ಹಾಗೂ ಅಂಕಲಿಮಠದ ಸ್ವಾಮೀಜಿಗಳ ತುಲಾಭಾರ,ಧರ್ಮಸಭೆ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಅಂಕಲಿಮಠದ ವೀರಭದ್ರ ಸ್ವಾಮೀಜಿಗಳು ,ಯರಝರಿ ಮಲ್ಲಾರಲಿಂಗ ಸ್ವಾಮೀಜಿ,ಕುಂಟೋಜಿ ಚೆನ್ನವೀರ ಶಿವಾಚಾರ್ಯರು,ತುರುವಿಹಾಳದ ಅಮರಗುಂಡ ಶಿವಾಚಾರ್ಯರು,ಹೊಸಮಠದ ಅಮರೇಶ್ವರ ದೇವರು,ಸರೂರಿನ ಕಾಡಯ್ಯ ಗುರುವಿನ,ಅಡಿವಯ್ಯ ಹಿರೇಮಠ ದಿವ್ಯ ಸಾನಿಧ್ಯ ವಹಿಸುವರು. ವಿಜಯಪುರ ಸಿಕ್ಯಾಬ್ ಕಾಲೇಜಿನ  ಉಪನ್ಯಾಸಕ ಯು.ಎನ್.ಕುಂಟೋಜಿ ಉಪನ್ಯಾಸ ನೀಡುವರು.ಶಾಸಕ ಸಿ.ಎಸ್.ನಾಡಗೌಡ

ಬಿಜೆಪಿ ರಾಜ್ಯ ಕಾರ್ಯದರ್ಶಿಗೆ ಅದ್ದೂರಿ ಸ್ವಾಗತ:                    ಯತ್ನಾಳ ಘರ್‌ವಾಪ್ಸಿ : ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ-ಶರಣು ತಳ್ಳಿಕೇರಿ

ಬಿಜೆಪಿ ರಾಜ್ಯ ಕಾರ್ಯದರ್ಶಿಗೆ ಅದ್ದೂರಿ ಸ್ವಾಗತ: ಯತ್ನಾಳ ಘರ್‌ವಾಪ್ಸಿ : ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ-ಶರಣು ತಳ್ಳಿಕೇರಿ

ಮುದ್ದೇಬಿಹಾಳ : ಬಿಜೆಪಿಗೆ ಮರಳಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ವಾಪಸ್ ಕರೆತರುವ ವಿಚಾರ ಪಕ್ಷದ ವರಿಷ್ಠರಿಗೆ ಬಿಟ್ಟಿರುವ ವಿಚಾರ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಹೇಳಿದರು. ರಾಜ್ಯ ಬಿಜೆಪಿ ಕಾರ್ಯದರ್ಶಿಯಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಮುದ್ದೇಬಿಹಾಳ ನಗರಕ್ಕೆ ಸೋಮವಾರ ಆಗಮಿಸಿದ್ದ ಅವರಿಗೆ ಮುದ್ದೇಬಿಹಾಳ ಬಿಜೆಪಿ ಮಂಡಲದ ವತಿಯಿಂದ ನೀಡಲಾದ ಅದ್ದೂರಿ ಸ್ವಾಗತದ ಬಳಿಕ ಅಂಬೇಡ್ಕರ್ ವೃತ್ತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಶಾಸಕ ಯತ್ನಾಳ ಹಾಗೂ