ಜಲಾನಯನ ಮಹೋತ್ಸವ-2025 : ಕುಂಟೋಜಿ,ಕವಡಿಮಟ್ಟಿ ವ್ಯಾಪ್ತಿಯಲ್ಲಿ 2800 ಹೆಕ್ಟೇರ್ ನೀರಾವರಿಗೆ ಆದ್ಯತೆ

ಜಲಾನಯನ ಮಹೋತ್ಸವ-2025 : ಕುಂಟೋಜಿ,ಕವಡಿಮಟ್ಟಿ ವ್ಯಾಪ್ತಿಯಲ್ಲಿ 2800 ಹೆಕ್ಟೇರ್ ನೀರಾವರಿಗೆ ಆದ್ಯತೆ

ಮುದ್ದೇಬಿಹಾಳ : ಜಲಾನಯನ ಇಲಾಖೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ನಿರ್ಮಿಸಲಾಗುವ ಕೃಷಿ ಹೊಂಡ,ಜಿನುಗು ಕೆರೆ,ನಾಲಾ ಬದು,ತಡೆ ಅಣೆಗಳಿಂದ ತಾಲ್ಲೂಕಿನ ಕವಡಿಮಟ್ಟಿ ಹಾಗೂ ಕುಂಟೋಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 2800 ಹೆಕ್ಟೇರ್ ಜಮೀನು ಅಭಿವೃದ್ಧಿಗೆ ಆದ್ಯತೆ ದೊರೆಯಲಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ತಾಲ್ಲೂಕಿನ ಕವಡಿಮಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಲಾನಯನ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷಿಯಲ್ಲಿ ಸಂಪ್ರದಾಯ ಪದ್ಧತಿಗಿಂತ ಆಧುನಿಕ ಕೃಷಿ ಜ್ಞಾನ ಬಳಸಿಕೊಳ್ಳಬೇಕು.ವಿಶೇಷವಾಗಿ ಕುರಿ ಸಾಕಾಣಿಕೆಗೆ ಸರ್ಕಾರದ ಸಹಾಯಧನ ಪಡೆದುಕೊಂಡು ಲಾಭ ಮಾಡಿಕೊಳ್ಳಬಹುದಾಗಿದೆ.ಒಕ್ಕಲುತನದಂತಹ ಪವಿತ್ರ ವೃತ್ತಿ ಮತ್ತೊಂದಿಲ್ಲ ಎಂದು ಹೇಳಿದರು.

ಕೃಷಿಕರನ್ನು ವಂಚಿಸುವ ದೊಡ್ಡ ಹುನ್ನಾರ ನಡೆದಿದೆ.ಮೆಕ್ಕೆಜೋಳ,ತೊಗರಿ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ಆದೇಶಿಸಬೇಕಿರುವುದು ಕೇಂದ್ರ ಸರ್ಕಾರ.ರಾಜ್ಯ ಸರ್ಕಾರ ತನ್ನ ಪಾಲನ್ನು ಕೊಡಲು ಸಿದ್ಧವಿದ್ದರೂ ಕೇಂದ್ರ ಸರ್ಕಾರ ನಿರ್ದೇಶನ ನೀಡುವವರೆಗೂ ರಾಜ್ಯ ಸರ್ಕಾರ ಖರೀದಿ ಆರಂಭಿಸಲು ಸಾಧ್ಯವಿಲ್ಲ.ದೊಡ್ಡ ಮಟ್ಟದಲ್ಲಿ ಆಹಾರ ಧಾನ್ಯ ಖರೀದಿಸಿದಾಗ ಅದನ್ನು ಶೇಖರಿಸುವುದು,ಮರು ಬಳಕೆಗೆ ಕ್ರಮ ಕೈಗೊಳ್ಳುವುದು ಮಾಡುತ್ತದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಂದಾಣಿಕೆಯಿAದ ಸಾಗಿದರೆ ಮಾತ್ರ ದೇಶದ ಪ್ರಗತಿ ಸಾಧ್ಯವಾಗುತ್ತದೆ ಎಂದರು.

ಉಪನ್ಯಾಸ ನೀಡಿದ ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಎ.ಎಮ್.ಸಾವಳಗಿ ಮಾತನಾಡಿ, ನೀರಾವರಿ ಪದ್ಧತಿಯಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ರೈತರಿಗೆ ಅರಿವು ಮೂಡಿಸುವ ಕೆಲಸ ಕೃಷಿ ಇಲಾಖೆ ಮಾಡುತ್ತಿದೆ.ಸಮುದಾಯಗಳು ಜವಾಬ್ದಾರಿ ಅರಿತುಕೊಂಡು ಅಭಿವೃದ್ಧಿ ಸಾಧಿಸಬೇಕು ಎಂದರು.
ಬಿಇಒ ಬಿ.ಎಸ್.ಸಾವಳಗಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಶಕುಂತಲಾ ಹಂಡರಗಲ್ ಅಧ್ಯಕ್ಷತೆ ವಹಿಸಿದ್ದರು.ಉಪ ಕೃಷಿ ನಿರ್ದೇಶಕ-1 ಶರಣಗೌಡ ಆರ್., ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಆರ್.ಟಿ.ಹಿರೇಮಠ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಪಾಟೀಲ , ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಡಿ.ಭಾವಿಕಟ್ಟಿ, ಕೃಷಿ ಅಧಿಕಾರಿಗಳಾದ ಅರವಿಂದ ಹೂಗಾರ,ಸಂಗನಗೌಡ ಪಾಟೀಲ, ಸೋಮನಗೌಡ ಬಿರಾದಾರ,ರಾಜೇಶ್ವರಿ ನಾಡಗೌಡ ಇದ್ದರು.

ಉತ್ಸವದಲ್ಲಿ ಕಿರು ಪುಸ್ತಕ ಬಿಡುಗಡೆ, ಗ್ರಾಮ್ಸ ಸಂಸ್ಥೆಯಿAದ ಬೀದಿ ನಾಟಕ ಪ್ರದರ್ಶನ,ಫಲಾನುಭವಿಗಳಿಗೆ ಕೃಷಿ ಪರಿಕರಗಳ ವಿತರಣೆ, ಸಸಿ ನೆಡುವ ಕಾರ್ಯಕ್ರಮ ಹಾಗೂ ಶಾಲೆಗೆ ಪಿಎಂಕೆಎಸ್ ಡಬ್ಲೂö್ಯಡಿಸಿ 2.0 ಸನ್ 2025-26 ಯೋಜನೆಯಡಿ 92 ಬೆಂಚ್‌ಗಳನ್ನು ವಿತರಿಸಲಾಯಿತು.ಅಲ್ಲದೇ ರಂಗೋಲಿ,ಚಿತ್ರಕಲೆ ಹಾಗೂ ವಿಜ್ಞಾನ ವಸ್ತುಪ್ರದರ್ಶನದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ,ಮಣ್ಣು ಪ್ರಮಾಣಪತ್ರಗಳನ್ನು ವಿತರಿಸಲಾಯಿತು.ಸಂಗಮೇಶ ಶಿವಣಗಿ ಪ್ರಾರ್ಥನಾ ಗೀತೆ ಹಾಡಿದರು.ಟಿ.ಡಿ.ಲಮಾಣಿ ವೀರೇಶ ಆಂದೋನಿ ನಿರೂಪಿಸಿದರು.

Latest News

ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ

ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ

ಮುದ್ದೇಬಿಹಾಳ : ಹಣ, ಆಸ್ತಿ, ಅಂತಸ್ತು, ಐಶ್ವರ್ಯ, ಉದ್ಯೋಗ ಮುಂತಾದವುಗಳ ಕೊರತೆಯಿಂದ ಮನುಷ್ಯ ಬಡವನಾಗುವುದಿಲ್ಲ

ಏಳನೇ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಚಾಲನೆ: ಹುಣಶಿಹೊಳೆ ಕಣ್ವಮಠದ ವಿದ್ಯಾಕಣ್ವವಿರಾಜ್ ತೀರ್ಥರ ಭವ್ಯ ಮೆರವಣಿಗೆ

ಏಳನೇ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಚಾಲನೆ: ಹುಣಶಿಹೊಳೆ ಕಣ್ವಮಠದ ವಿದ್ಯಾಕಣ್ವವಿರಾಜ್ ತೀರ್ಥರ ಭವ್ಯ ಮೆರವಣಿಗೆ

ಮುದ್ದೇಬಿಹಾಳ : ಪಟ್ಟಣದಲ್ಲಿ ಸುಮಾರು 58 ವರ್ಷಗಳ ಬಳಿಕ ಪ್ರಥಮವಾಗಿ ಹುಣಶಿಹೊಳೆ ಕಣ್ವಮಠದ ಪೀಠಾಧಿಕಾರಿಗಳಾದ

ಮುದ್ದೇಬಿಹಾಳ : ಆ.8 ರಂದು ಪದ ಪ್ರದಾನ,ಜಾನಪದ ಬುಡಕಟ್ಟು ದಿನಾಚರಣೆ

ಮುದ್ದೇಬಿಹಾಳ : ಆ.8 ರಂದು ಪದ ಪ್ರದಾನ,ಜಾನಪದ ಬುಡಕಟ್ಟು ದಿನಾಚರಣೆ

ಮುದ್ದೇಬಿಹಾಳ : ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಉದ್ಘಾಟನೆ,ಪದ ಪ್ರದಾನ ಹಾಗೂ ಜಾನಪದ

ಅಂತರ್‌ರಾಜ್ಯ ಕಳ್ಳರ ಬಂಧನ :                                       ಬಸರಕೋಡದ ಪವಾಡ ಬಸವೇಶ್ವರರ ಮೂರ್ತಿ ಕರಗಿಸಿ ಮಾರಿದ್ದ ಗಟ್ಟಿ ಬೆಳ್ಳಿ ವಶಕ್ಕೆ

ಅಂತರ್‌ರಾಜ್ಯ ಕಳ್ಳರ ಬಂಧನ : ಬಸರಕೋಡದ ಪವಾಡ ಬಸವೇಶ್ವರರ ಮೂರ್ತಿ ಕರಗಿಸಿ ಮಾರಿದ್ದ ಗಟ್ಟಿ ಬೆಳ್ಳಿ ವಶಕ್ಕೆ

ಮುದ್ದೇಬಿಹಾಳ(ವಿಜಯಪುರ ಜಿಲ್ಲೆ ): ತಾಲ್ಲೂಕಿನ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ

ಮುದ್ದೇಬಿಹಾಳ ಕ್ಷೇತ್ರದಿಂದ ಶೇ.82.47 ರಷ್ಟು ಪ್ರಗತಿ ಸಾಧನೆ

ಮುದ್ದೇಬಿಹಾಳ ಕ್ಷೇತ್ರದಿಂದ ಶೇ.82.47 ರಷ್ಟು ಪ್ರಗತಿ ಸಾಧನೆ

ಮುದ್ದೇಬಿಹಾಳ : ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಎಸ್.ಆಯ್.ಆರ್ ಪ್ರಕ್ರಿಯೆಯಲ್ಲಿ ಮತಗಟ್ಟೆ ಅಧಿಕಾರಿಗಳು ಉತ್ತಮ ಸೇವೆ ಸಲ್ಲಿಸುತ್ತಿದ್ದು ಈವರೆಗೆ ಶೇ.82.47ರಷ್ಟು ಗಣತಿ ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದೆ ಎಂದು ಮತದಾರರ ನೋಂದಣಾಧಿಕಾರಿ ಬಿ.ಎ.ಸೌದಾಗರ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಎಸ್.ಆಯ್.ಆರ್ ಪ್ರಕ್ರಿಯೆಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿದ ಮೇಲ್ವಿಚಾರಕರು,ಬಿಎಲ್‌ಓಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗೈರು ಹಾಜರಿ 1483, ಶಾಶ್ವತವಾಗಿ ಸ್ಥಳಾಂತರಗೊAಡವರು 16331,8505 ಮತದಾರರು ಮರಣ ಹೊಂದಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಬಿಎಲ್‌ಓಗಳ ಸಹಕಾರದಿಂದ ಉತ್ತಮ

58 ವರ್ಷಗಳ ಬಳಿಕ ಮುದ್ದೇಬಿಹಾಳದಲ್ಲಿ ಚಾತುರ್ಮಾಸ್ಯ ಮಹೋತ್ಸವ

58 ವರ್ಷಗಳ ಬಳಿಕ ಮುದ್ದೇಬಿಹಾಳದಲ್ಲಿ ಚಾತುರ್ಮಾಸ್ಯ ಮಹೋತ್ಸವ

ಮುದ್ದೇಬಿಹಾಳ : ಪಟ್ಟಣದಲ್ಲಿ ಸುಮಾರು 58 ವರ್ಷಗಳ ಬಳಿಕ ಪ್ರಥಮವಾಗಿ ಹುಣಶಿಹೊಳೆ ಕಣ್ವಮಠದ ಪೀಠಾಧಿಕಾರಿಗಳಾದ ವಿದ್ಯಾಕಣ್ವವಿರಾಜ್ ತೀರ್ಥ ಶ್ರೀಗಳು ತಮ್ಮ ಏಳನೇ ಚಾತುರ್ಮಾಸ್ಯವನ್ನು ಆ.8 ರಿಂದ ಸೆ.26ರವರೆಗೆ ಕೈಗೊಳ್ಳಲಿದ್ದಾರೆ ಎಂದು ಮಹೋತ್ಸವ ಸಮೀತಿ ಅಧ್ಯಕ್ಷ ಅನೀಲಕುಮಾರ ಕುಲಕರ್ಣಿ ಹೇಳಿದರು. ಪಟ್ಟಣದ ಪಟ್ಟಣದ ಶ್ರೀ ಶಿವ ಚಿದಂಬರ ದೇವಸ್ಥಾನದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸಪ್ತಮ ಚಾತುರ್ಮಾಸ್ಯದ ಕುರಿತು ಅವರು ವಿವರಿಸಿದರು.ಮುದ್ದೇಬಿಹಾಳ ಪಟ್ಟಣದಲ್ಲಿ ಸುಮಾರು 58 ವರ್ಷಗಳ ಹಿಂದೆ ಹುಣಶಿಹೊಳೆ ಕಣ್ವಮಠದ ವಿದ್ಯಾತಪೋನಿಧಿ