
ಕುಳಗೇರಿ ಕ್ರಾಸ್: ಜಗದ್ಗುರು ರೇಣುಕಾಚಾರ್ಯರು ಬೋಧಿಸಿರುವ ತತ್ವ ಸಿದ್ಧಾಂತಗಳು ಸಮಾಜದ ಸುಧಾರಣೆಗೆ ಸೋಪಾನವಾಗಿವೆ. ಇಂಥ ಮಹನಿಯರ ಜಯಂತಿ ಉತ್ಸವ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪಿಡಿಒ ಎಸ್ ಜಿ ಪರಸನ್ನವರ ಹೇಳಿದರು.

ಗ್ರಾಪಂ ಕಾರ್ಯಾಲಯದಲ್ಲಿ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಶಾಂತಿ ಸಂದೇಶವನ್ನು ಸಾರಿದ ಆದಿಜಗದ್ಗುರು ರೇಣುಕಾಚಾರ್ಯರು ಧರ್ಮ ಸಂಸ್ಕಾರವನ್ನು ನೀಡಿ ಸಮಾಜವನ್ನು ಮುನ್ನಡೆಸುವ ಕಾರ್ಯ ಮಾಡಿದ್ದಾರೆ.
ಪತ್ರಕರ್ತ ಆರ್ ಎಸ್ ಹಿರೇಮಠ ಮಾತನಾಡಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಎಲ್ಲ ಶಾಲೆ ಕಾಲೇಜು ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.
ಅಧ್ಯಕ್ಷೆ ರೇಣುಕಾ ಹಿರಗನ್ನವರ, ಉಪಾಧ್ಯಕ್ಷೆ ಲಲಿತಾ ಪೂಜಾರ, ಹನಮಂತ ನರಗುಂದ, ವೆಂಕಣ್ಣ ಹೊರಕೇರಿ, ಮಾರುತಿ ತಳವಾರ, ಲಲಿತಾ ಹುನಗುಂದ, ಶೇಖಪ್ಪ ಪವಾಡಿನಾಯ್ಕರ್, ಲಕ್ಷö್ಮಣ ದಾದನಟ್ಟಿ, ಸಣ್ಣಬೀರಪ್ಪ ದ್ಯಾವನಗೌಡ್ರ, ರಾಮನಗೌಡ ದ್ಯಾವನಗೌಡ್ರ, ಶಿವವ್ವ ಕರಲಿಂಗನ್ನವರ, ಶ್ಯಾಮಲಾ ಮಾದರ, ಶಿವಾನಂದ ಮಣ್ಣೂರ. ದ್ಯಾವಕ್ಕ ಕರಿಗಾರ, ನೇತ್ರಾವತಿ ಹಡಪದ, ನಾಗವ್ವ ದಂಡಿನ, ಬಸವರಾಜ ಕಟ್ಟಿಕಾರ, ಬಸವ್ವ ತೂರನೂರ, ಕಮಲವ್ವ ಪಾಟೀಲ, ಕಾರ್ಯದರ್ಶಿ ಬಂದೆನವಾಜ ಮುಲ್ಲಾ, ಮಹಮ್ಮದ ತಾಳಿಕೋಟೆ, ಪ್ರಕಾಶ, ಗಣೇಶ, ಬಸವರಾಜ, ನ್ಯಾಮದೇವ, ಆನಂದ, ರಂಗಪ್ಪ, ರಿಂದಪ್ಪ, ಅಸ್ಲಾಂ ಇದ್ದರು.
ಸರ್ಕಾರಿ ಕಚೇರಿಗಳಲ್ಲಿ ಜಯಂತಿ ಆಚರಿಸುವಂತೆ ಬಾದಾಮಿ ತಹಸಿಲ್ದಾರ ಮಧುರಾಜ ವಾಟ್ಸೆಪ್ ಮೂಲಕ ಸಂದೇಶ ರವಾನಿಸಿ ಆದೇಶ ನೀಡಿದರೂ ಕೆಲವರು ಜಯಂತಿ ಆಚರಿಸದೆ ಅಲಕ್ಷ ತೋರಿದ್ದಾರೆ. ಸಮಾಜಕ್ಕಾಗಿ ಹೋರಾಡಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹನೀಯರ ಜಯಂತಿಗಳನ್ನ ಮರೆಯಬಾರದು. ಮತ್ತೊಮ್ಮೆ ಹಿಗಾಗದಂತೆ ನೋಡಿಕೊಂಡು ಕಡ್ಡಾಯವಾಗಿ ಜಯಂತಿ ಆಚರಿಸುವಂತೆ ಮನವಿ ಮಾಡಿದರು. ಆರ್ ಎಸ್ ಹಿರೇಮಠ ಜಂಗಮ ಸಮಾಜದ ಮುಖಂಡರು ಇದ್ದರು.