Viral: ಹೆಂಡತಿಯನ್ನು ಬೈಕ್ ಗೆ ಕಟ್ಟಿ ಎಳೆದೊಯ್ದ ಗಂಡ..! (ವೈರಲ್ ವಿಡಿಯೋ)

Viral: ಹೆಂಡತಿಯನ್ನು ಬೈಕ್ ಗೆ ಕಟ್ಟಿ ಎಳೆದೊಯ್ದ ಗಂಡ..! (ವೈರಲ್ ವಿಡಿಯೋ)

ಜೈಪುರ: ಈ ಪ್ರಪಂಚದಲ್ಲಿ ಪತಿ-ಪತ್ನಿ‌ಯರು ಜಗಳ ಮಾಡಿಕೊಂಡು ಮಾತು ಬಿಟ್ಟು, ದೂರದೂರ ಇದ್ದು ತಮ್ಮ ಜೀವನ ಸಾಗಿಸುವ ಹಲವಾರು ಪ್ರಕರಣಗಳಿವೆ. ಆದರೆ, ಇಲ್ಲೊಬ್ಬ ಗಂಡನು ತನ್ನ ಹೆಂಡತಿ ಮಾಡಿದ ಯಾವುದೋ ಸಣ್ಣ ತಪ್ಪಿಗೆ ಬೈಕ್ ಗೆ ಕಟ್ಟಿ ಎಳೆದುಕೊಂಡು ಹೋಗಿರುವ ವಿಡಿಯೋ ವೈರಲ್ (Viral) ಆಗಿದೆ.

Join Our Telegram: https://t.me/dcgkannada

ಹೌದು, ವ್ಯಕ್ತಿಯೊಬ್ಬ ತನ್ನ ಪತ್ನಿ ಮಾಡಿರುವ ಚಿಕ್ಕ ತಪ್ಪಿಗೆ ಆಕೆಯ ಕಾಲುಗಳನ್ನು ಬೈಕ್ ನ ಹಿಂಭಾಗಕ್ಕೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ಯುವ ಮೂಲಕ ಶಿಕ್ಷೆ ನೀಡಿರುವ ದಾರುಣ ಘಟನೆ ರಾಜಸ್ಥಾನದ ನಾಗ್ವುರ್ ನಲ್ಲಿ ನಡೆದಿದೆ.

ಈ ಕುಕೃತ್ಯ ಮಾಡಿದವನನ್ನು
ಪ್ರೇಮ್ ರಾಮ್ ಮೇಘವಾಲ್ ಎಂದು ಗುರುತಿಸಲಾಗಿದೆ.‌

ಇದನ್ನೂ ಓದಿ: ಪ್ರೇಮ ನಿರಾಕರಣೆ.. ಪ್ರತಿಷ್ಠಿತ ಆಳ್ವಾಸ್ ಕಾಲೇಜಿನ PUC ವಿದ್ಯಾರ್ಥಿನಿಗೆ ಕತ್ತರಿ ಚುಚ್ಚಿದ ಪಾಗಲ್..!

ಹಲ್ಲೆ ನಡೆಸಿ ನಂತರ ಕಾಲುಗಳನ್ನು ಹಗ್ಗದ ಮೂಲಕ ಬೈಕ್ ನ ಹಿಂಬದಿಗೆ ಕಟ್ಟಿದ್ದಾನೆ. ತದನಂತರ ಬೈಕ್ ಅನ್ನು ಹೊಂಡ ಗುಂಡಿಗಳಲ್ಲಿ ಎಳೆದುಕೊಂಡು ಹೋಗಿದ್ದಾನೆ. ಸಹಾಯಕ್ಕಾಗಿ ಪತ್ನಿ ಅಂಗಾಲಾಚುತ್ತಿದ್ದರು ಕೂಡ ಹಿಂಸೆ ನೀಡಿದ್ದಾನೆ ಪಾಪಿ ಪತಿರಾಯ!

ದಾಳಿಯಲ್ಲಿ ಪತಿ ಸೇರಿದಂತೆ ಇನ್ನು ಇಬ್ಬರು ಮಹಿಳೆಗೆ ಹಿಂಸೆ ನೀಡಿದ್ದಾನೆ ಎನ್ನಲಾಗಿದೆ. ಇದೀಗ ಮಹಿಳೆಯ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್ (Viral) ಆಗಿದೆ.

ಆರೋಪಿ ಪ್ರೇಮ್ ರಾಮ್ ಮೇಘವಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Latest News

ಎಲ್ಲೆಡೆ ಶಾಲಾ ಆರಂಭೋತ್ಸವ:                                            ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಎಲ್ಲೆಡೆ ಶಾಲಾ ಆರಂಭೋತ್ಸವ: ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಮುದ್ದೇಬಿಹಾಳ : ಬೇಸಿಗೆ ರಜೆ ಕಳೆದು ಶಾಲಾ ಮಕ್ಕಳು ಇನ್ನು ಮುಂದೆ ಶೈಕ್ಷಣಿಕ ಚಟುವಟಿಕೆಗಳಲ್ಲಿ

ಮುದ್ದೇಬಿಹಾಳ : ಗುಡಿಮನಿಗೆ ತಾಪಂ ಅಧಿಕಾರಿಗಳ ಸನ್ಮಾನ

ಮುದ್ದೇಬಿಹಾಳ : ಗುಡಿಮನಿಗೆ ತಾಪಂ ಅಧಿಕಾರಿಗಳ ಸನ್ಮಾನ

ಮುದ್ದೇಬಿಹಾಳ : ತಾಲ್ಲೂಕಿನ ಢವಳಗಿ ಗ್ರಾಮ ಪಂಚಾಯತಿಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಎಂ.ಕೆ.

ಡಿಸೇಲ್,ಪೆಟ್ರೋಲ್‌ಗಾಗಿ ಪರದಾಟ:                                       ಖಾಲಿ ಕ್ಯಾನ್‌ಗಳೊಂದಿಗೆ ಬಂಕ್‌ಗಳ ಮುಂದೆ ಸಾಲುದ್ದ ಕ್ಯೂ

ಡಿಸೇಲ್,ಪೆಟ್ರೋಲ್‌ಗಾಗಿ ಪರದಾಟ: ಖಾಲಿ ಕ್ಯಾನ್‌ಗಳೊಂದಿಗೆ ಬಂಕ್‌ಗಳ ಮುಂದೆ ಸಾಲುದ್ದ ಕ್ಯೂ

ಮುದ್ದೇಬಿಹಾಳ : ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮ ಈ ಭಾಗದಲ್ಲೂ ಎಫೆಕ್ಟ್ ಆಗಿದ್ದು ಡಿಸೇಲ್,ಪೆಟ್ರೋಲ್‌ಗಾಗಿ ಗ್ರಾಹಕರು

Muddebihal Cricket : ಆರ್.ಕೆ.ರಾಕೇಟ್ ಬೂದಿಹಾಳ ತಂಡಕ್ಕೆ ಎಂ.ಬಿ.ಎಲ್ ಗ್ರೂಪ್ ಪ್ರಶಸ್ತಿ

Muddebihal Cricket : ಆರ್.ಕೆ.ರಾಕೇಟ್ ಬೂದಿಹಾಳ ತಂಡಕ್ಕೆ ಎಂ.ಬಿ.ಎಲ್ ಗ್ರೂಪ್ ಪ್ರಶಸ್ತಿ

ಮುದ್ದೇಬಿಹಾಳ : ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಎಂ.ಬಿ.ಎಲ್.ಗ್ರೂಪ್ ನಿಂದ ಆಯೋಜಿಸಿದ್ದ ಹಾರ್ಡ್ ಟೆನ್ನಿಸ್

ಅಧ್ಯಕ್ಷರಾಗಿ ಬಿ.ಎಚ್.ಮುದ್ನೂರ ಪುನರಾಯ್ಕೆ:            ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಬಿ.ಎಚ್.ಮುದ್ನೂರ ಪುನರಾಯ್ಕೆ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸನ್ 2026-31ನೇ ಅವಧಿಗೆ ತಾಲ್ಲೂಕಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಸಂಘದ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಬಿ.ಎಚ್.ಮುದ್ನೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಪ್ರಧಾನ ಕಾರ್ಯದರ್ಶಿಗಳಾಗಿ ನಾಗಪ್ಪ ತುರಡಗಿ,ಖಜಾಂಚಿಯಾಗಿ ಭರತೇಶ ಹೊಳಿ, ಉಪಾಧ್ಯಕ್ಷರಾಗಿ ಶಾಂತಪ್ಪ ಬಿರಾದಾರ,ರೇಣುಕಾ ಹಿರೇಮಠ,ಸಹ ಕಾರ್ಯದರ್ಶಿಯಾಗಿ ಈರಯ್ಯ ಹಿರೇಮಠ,ಶೈಲಾ ಗೊಂಗಡಿ,ಸAಘಟನಾ ಕಾರ್ಯದರ್ಶಿಗಳಾಗಿ ಬಸನಗೌಡ ಭಗವತಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಎಸ್.ಕವಡಿಮಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಗರಬೆಟ್ಟದಲ್ಲಿ ಜೂನ್ ಮೊದಲ ವಾರದಲ್ಲಿ ಹೋರಾಟ ನಡೆಸಲು ನಿರ್ಧಾರ

ನಾಗರಬೆಟ್ಟದಲ್ಲಿ ಜೂನ್ ಮೊದಲ ವಾರದಲ್ಲಿ ಹೋರಾಟ ನಡೆಸಲು ನಿರ್ಧಾರ

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸಲು ಆಗ್ರಹಿಸಿ ಜೂನ್ ಮೊದಲ ವಾರದಿಂದ ನಾಗರಬೆಟ್ಟದಲ್ಲಿ ರೈತರೊಡಗೂಡಿ ಹೋರಾಟ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು. ತಾಲ್ಲೂಕಿನ ನಾಗರಬೆಟ್ಟದ ಮಾರುತೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ನಡೆದ ರೈತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ದಶಕದಿಂದ ಈ ನೀರಾವರಿ ಯೋಜನೆಯಡಿ ಹೊಲಗಳಿಗೆ ನೀರು ಹರಿದಿಲ್ಲ.ರಾಜಕಾರಣಿಗಳ