ಗ್ರಾಪಂ ಮಟ್ಟದ ಸೇವೆ ಅಸ್ತವ್ಯಸ್ತ ಸಾಧ್ಯತೆ:ಗ್ರಾ.ಪಂ ನೌಕರರನ್ನು ಸಮೀಕ್ಷೆಯಿಂದ ಕೈಬಿಡಲು ಒತ್ತಾಯ

ಗ್ರಾಪಂ ಮಟ್ಟದ ಸೇವೆ ಅಸ್ತವ್ಯಸ್ತ ಸಾಧ್ಯತೆ:ಗ್ರಾ.ಪಂ ನೌಕರರನ್ನು ಸಮೀಕ್ಷೆಯಿಂದ ಕೈಬಿಡಲು ಒತ್ತಾಯ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ,ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಕಾರ್ಯಕ್ಕೆ ತಾಲ್ಲೂಕಿನ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು,ಎಸ್.ಡಿ.ಎಗಳನ್ನು ನಿಯೋಜಿಸಿರುವುದನ್ನು ಕೈ ಬಿಡಬೇಕು ಎಂದು ತಹಸೀಲ್ದಾರ್‌ರಗೆ ಗ್ರಾಪಂ ನೌಕರರು ಗುರುವಾರ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ್ದ ಗ್ರಾಪಂ ನೌಕರರು, ತಹಸೀಲ್ದಾರ್ ಕೀರ್ತಿ ಚಾಲಕ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ಗ್ರಾಮ ಪಂಚಾಯಿತಿಗೆ ಸಂಬAಧಿಸಿದAತೆ ಸಾಮಾನ್ಯ ಸಭೆ ನಿರ್ವಹಣೆ, ಮಾಹಿತಿ ಹಕ್ಕು ಅರ್ಜಿಗಳ ವಿಲೇವಾರಿ,ಕರ ವಸೂಲಾತಿ ಆಂದೋಲನ, ಇಸ್ವತ್ತು ಉತಾರೆ ಜನನ-ಮರಣ ಉತಾರೆ ವಿತರಿಸುವುದು ಅವಶ್ಯವಿರುತ್ತದೆ.ಒಂದುವೇಳೆ ನಾವು ಪಂಚಾಯಿತಿಯಲ್ಲಿ ಇಲ್ಲದಿದ್ದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.ರೈತರಿಗೆ ಸಂಬAಧಿಸಿದAತೆ ಬೆಳೆ ಕಟಾವು ಮಾಡುವುದು, ಇಲಾಖೆಯ ಆನಲೈನ್ ಸೇವೆಗಳು ನಿರ್ವಹಿಸುವುದು,ಸೆ.17 ರಿಂದ ಅ.2ರವರೆಗೆ ಗಾಂಧೀಜಿ ಜಯಂತಿ ನಿಮಿತ್ಯ ವಿಶೇಷ ಅಭಿಯಾನ ಸ್ವಚ್ಛತಾ ಅಭಿಯಾನ,ವಾರ್ಡಸಭೆ, ಗ್ರಾಮಸಭೆ ನಡೆಸಿ ತಾಪಂ ಕಚೇರಿಗೆ ಸಲ್ಲಿಸುವ ಜವಾಬ್ದಾರಿ ಕಾರ್ಯದರ್ಶಿಗಳು,ಎಸ್‌ಡಿಎಗಳಿಗೆ ಇರುತ್ತದೆ.ಆದ್ದರಿಂದ ಈ ಎಲ್ಲ ಕೆಲಸಗಳ ಒತ್ತಡದ ಮಧ್ಯೆ ನಮಗೆ ತರಬೇತಿಯನ್ನೂ ನೀಡದೇ ಕೇಂದ್ರಸ್ಥಾನದಲ್ಲಿಯೇ ಸಮೀಕ್ಷೆಗೆ ನಿಯೋಜಿಸದೇ ಬೇರೊಂದು ಸ್ಥಳಕ್ಕೆ ನೇಮಿಸಿರುವುದು ಹತ್ತಾರು ತೊಂದರೆಗೆ ಕಾರಣವಾಗುತ್ತದೆ.ಕೂಡಲೇ ಸಮೀಕ್ಷೆ ಕಾರ್ಯದಿಂದ ಗ್ರಾಪಂ ಕಾರ್ಯದರ್ಶಿ,ಎಸ್.ಡಿ.ಎ ಅವರನ್ನು ಕೈ ಬಿಡಬೇಕು ಎಂದು ವಿನಂತಿಸಿದರು.

ಮನವಿ ಸಲ್ಲಿಕೆ ಸಮಯದಲ್ಲಿ ಎಸ್.ವಾಯ್.ದ್ಯಾಮಗೊಂಡ, ಅಶೋಕ ಕೊರವೇರ, ಎ.ಎಸ್.ಬಿರಾದಾರ, ರಂಗರಾಜು, ಪಿ.ವಾಯ್.ಚಲವಾದಿ, ಜಿ.ಎಲ್.ಬಿರಾದಾರ, ಸಿ.ಬಿ.ಹೊಳಿ, ಟಿ.ಎಂ.ಕೋಲಕಾರ, ಎಸ್.ಎಸ್.ಬಂಗಾರಗುAಡ ,ಯಮನೂರಿ ಲಮಾಣಿ, ಸಿ.ಎನ್.ಊರನ್ನವರ,ಜಿ.ಎಸ್.ಬಿರಾದಾರ,ಬಿ.ಬಿ.ಬಿರಾದಾರ, ರವಿಕಾಂತ ಮೇಟಿ, ಬಾಬು ಪೋತೆಗೋಳ ಇದ್ದರು.

Latest News

ಮುದ್ದೇಬಿಹಾಳ ಕ್ಷೇತ್ರದಿಂದ ಶೇ.82.47 ರಷ್ಟು ಪ್ರಗತಿ ಸಾಧನೆ

ಮುದ್ದೇಬಿಹಾಳ ಕ್ಷೇತ್ರದಿಂದ ಶೇ.82.47 ರಷ್ಟು ಪ್ರಗತಿ ಸಾಧನೆ

ಮುದ್ದೇಬಿಹಾಳ : ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಎಸ್.ಆಯ್.ಆರ್ ಪ್ರಕ್ರಿಯೆಯಲ್ಲಿ ಮತಗಟ್ಟೆ ಅಧಿಕಾರಿಗಳು ಉತ್ತಮ ಸೇವೆ ಸಲ್ಲಿಸುತ್ತಿದ್ದು

58 ವರ್ಷಗಳ ಬಳಿಕ ಮುದ್ದೇಬಿಹಾಳದಲ್ಲಿ ಚಾತುರ್ಮಾಸ್ಯ ಮಹೋತ್ಸವ

58 ವರ್ಷಗಳ ಬಳಿಕ ಮುದ್ದೇಬಿಹಾಳದಲ್ಲಿ ಚಾತುರ್ಮಾಸ್ಯ ಮಹೋತ್ಸವ

ಮುದ್ದೇಬಿಹಾಳ : ಪಟ್ಟಣದಲ್ಲಿ ಸುಮಾರು 58 ವರ್ಷಗಳ ಬಳಿಕ ಪ್ರಥಮವಾಗಿ ಹುಣಶಿಹೊಳೆ ಕಣ್ವಮಠದ ಪೀಠಾಧಿಕಾರಿಗಳಾದ

ಅಸ್ವಸ್ಥಗೊಂಡ ಬಿದ್ದಿದ್ದ ನರಿ ಮರಿಗೆ ಚಿಕಿತ್ಸೆ:                ಮಾನವೀಯತೆ ಮೆರೆದ ಯುವಕರು, ಅಧಿಕಾರಿಗಳ ತಂಡ

ಅಸ್ವಸ್ಥಗೊಂಡ ಬಿದ್ದಿದ್ದ ನರಿ ಮರಿಗೆ ಚಿಕಿತ್ಸೆ: ಮಾನವೀಯತೆ ಮೆರೆದ ಯುವಕರು, ಅಧಿಕಾರಿಗಳ ತಂಡ

ಮುದ್ದೇಬಿಹಾಳ : ವಾಯುವಿಹಾರಕ್ಕೆಂದು ಹೋಗಿದ್ದ ಮೂವರು ಯುವಕರ ತಂಡವೊoದರ ಕಣ್ಣಿಗೆ ಬಿದ್ದ ಅಸ್ವಸ್ಥಗೊಂಡ ನರಿ

ಅಧಿಸೂಚನೆ ಪ್ರಕಟ; ನಾಮಪತ್ರ ಸಲ್ಲಿಕೆ ಶುರು;           ಮುದ್ದೇಬಿಹಾಳ ಅಂಜುಮನ್ ಕಮೀಟಿಗೆ ಚುನಾವಣೆ ಘೋಷಣೆ

ಅಧಿಸೂಚನೆ ಪ್ರಕಟ; ನಾಮಪತ್ರ ಸಲ್ಲಿಕೆ ಶುರು; ಮುದ್ದೇಬಿಹಾಳ ಅಂಜುಮನ್ ಕಮೀಟಿಗೆ ಚುನಾವಣೆ ಘೋಷಣೆ

ಮುದ್ದೇಬಿಹಾಳ : ಇಲ್ಲಿಯ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಕಮೀಟಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ

ತನಿಖೆಯಲ್ಲಿ ಮಹತ್ವದ ಸುಳಿವು ಲಭ್ಯ-ಐಜಿಪಿ ಸಂದೀಪ ಪಾಟೀಲ್

ತನಿಖೆಯಲ್ಲಿ ಮಹತ್ವದ ಸುಳಿವು ಲಭ್ಯ-ಐಜಿಪಿ ಸಂದೀಪ ಪಾಟೀಲ್

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನದ ಬೆಳ್ಳಿ ಕವಚ ಕಳ್ಳತನ ಪ್ರಕರಣಕ್ಕೆ ಸಂಬoಧಿಸಿದoತೆ ಮಹತ್ವದ ಸುಳಿವು ದೊರಕಿದ್ದು ಶೀಘ್ರದಲ್ಲಿ ಪ್ರಕರಣವನ್ನು ಬೇಧಿಸಲಾಗುವುದು ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ್ ಹೇಳಿದರು. ತಾಲ್ಲೂಕಿನ ಬಸರಕೋಡ ಗ್ರಾಮದ ಐತಿಹಾಸಿಕ ಶ್ರೀ ಪವಾಡ ಬಸವೇಶ್ವರ ದೇವಾಲಯಕ್ಕೆ ಮಂಗಳವಾರ ಭೇಟಿ ನೀಡಿದ್ದ ಅವರು ದೇವಸ್ಥಾನದ ಕರ್ತೃಗದ್ದುಗೆ ಮೇಲಿನ 32 ಕೆಜಿ ಬೆಳ್ಳಿಯ ಕವಚ ಕಳ್ಳತನ ಪ್ರಕರಣದ ಕುರಿತು ವಿಜಯಪುರ ಎಸ್ಪಿ

S.I.R-ಮುದ್ದೇಬಿಹಾಳ ಮತಕ್ಷೇತ್ರ :  ಇಬ್ಬರು ಬಿಎಲ್‌ಓಗಳಿಂದ ಶೇ.100ರಷ್ಟು ಕಾರ್ಯ ಪೂರ್ಣ

S.I.R-ಮುದ್ದೇಬಿಹಾಳ ಮತಕ್ಷೇತ್ರ : ಇಬ್ಬರು ಬಿಎಲ್‌ಓಗಳಿಂದ ಶೇ.100ರಷ್ಟು ಕಾರ್ಯ ಪೂರ್ಣ

ಮುದ್ದೇಬಿಹಾಳ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಬಿಎಲ್‌ಓಗಳು,ಮೇಲ್ವಿಚಾರಕರು,ಬಿಎಲ್‌ಎಗಳ ಹಾಗೂ ಮತದಾರರ ಸಹಕಾರದಿಂದ ಗಣತಿ ನಮೂನೆಗಳ ವಿತರಣೆ ಕಾರ್ಯದಲ್ಲಿ ಮುದ್ದೇಬಿಹಾಳ ಮತಕ್ಷೇತ್ರ ಶೇ.98.38ರಷ್ಟು ಸಾಧನೆ ಮಾಡಿ ವಿಜಯಪುರ ಜಿಲ್ಲೆಗೆ ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ಮತದಾರರ ನೋಂದಣಾಧಿಕಾರಿ,ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಬಿ.ಎ.ಸೌದಾಗರ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಕುರಿತು ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.2,28,285 ಮತದಾರರಲ್ಲಿ 2,24,589 ಮತದಾರರಿಗೆ ಗಣತಿ ನಮೂನೆ