ಮುದ್ದೇಬಿಹಾಳ : ರೈತಾಪಿ ಕುಟುಂಬದಲ್ಲಿ ಜನಿಸಿ ಗ್ರಾಮೀಣ ಪ್ರದೇಶದಲ್ಲಿ ಹಳ್ಳಿಯ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಎಂ.ಎಸ್.ಕೊಪ್ಪ ಅವರು ಆರಂಭಿಸಿರುವ ಶಾಲೆ ಬಡವರ ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.
ಮುದ್ದೇಬಿಹಾಳ ತಾಲ್ಲೂಕು ಇಂದು ಶಿಕ್ಷಣಕ್ಕೆ ಒಳ್ಳೆಯ ಹೆಸರು ಮಾಡಿದೆ.ಬಿಎಎಸ್ ಶಾಲೆ, ಅಂಜುಮನ್ ಸಂಸ್ಥೆ,ಅಹಿಲ್ಯಾದೇವಿ ಶಿಕ್ಷಣ ಸಂಸ್ಥೆ,ನಾಗರಬೆಟ್ಟ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿವೆ. ಗ್ರಾಮೀಣ ಭಾಗದಲ್ಲಿ ಎಸ್.ಎನ್.ಡಿ ಪಬ್ಲಿಕ್ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಈ ವರ್ಷದ ಪ್ರಥಮ ಬ್ಯಾಚ್‌ನಲ್ಲಿ ಅತೀ ಹೆಚ್ಚು ಅಂಕ ಪಡೆದುಕೊಳ್ಳುವ ವಿದ್ಯಾರ್ಥಿಗೆ ಅಸ್ಕಿ ಫೌಂಡೇಶನ್‌ದಿoದ 25 ಸಾವಿರ ರೂ.ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದರು.
ಮುದ್ದೇಬಿಹಾಳ ಬಸವಜ್ಯೋತಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಇಸ್ಲಾಂಪೂರ ಮಾತನಾಡಿ, ಕಷ್ಟದ ಜೀವನ ಸವೆಸಿ ಧೈರ್ಯದಿಂದ ಮುಂದಡಿಯಿಟ್ಟಿದ್ದಕ್ಕೆ ಪ್ರತಿಭಾವಂತ ಮಕ್ಕಳನ್ನು ಗುರುತಿಸುವಂತಹ ಶಿಕ್ಷಣ ಸಂಸ್ಥೆ ರೂಪಿಸಲು ಸಾಧ್ಯವಾಗಲಿದೆ.ಒಳ್ಳೆಯ ಪ್ರಜೆಯಾಗಿ ಒಳ್ಳೆಯ ಸಂದೇಶವನ್ನು ನೀಡುವ ಕಾರ್ಯ ಮಾಡುವ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಎಸ್.ಎಸ್.ಎಲ್.ಸಿ ಪ್ರಥಮ ಬ್ಯಾಚಿನಲ್ಲಿ ಅತೀ ಹೆಚ್ಚು ಅಂಕ ಪಡೆದು ಎರಡನೇ ಸ್ಥಾನ ಗಳಿಸಿದವರಿಗೆ 11 ಸಾವಿರ ರೂ.ನೀಡುವುದಾಗಿ ಘೋಷಣೆ ಮಾಡಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಯರಝರಿ ಯಲ್ಲಾಲಿಂಗೇಶ್ವರ ಮಠದ ಮಲ್ಲಾರಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಹಳ್ಳಿಯ ಮಕ್ಕಳ ಶಿಕ್ಷಣದ ಕನಸನ್ನು ನನಸು ಮಾಡುತ್ತಿರುವ ಎಂ.ಎಸ್.ಕೊಪ್ಪ ಅವರ ಕಾರ್ಯದ ಹಿಂದೆ ಅಪಾರ ಪರಿಶ್ರಮವಿದೆ.ಸಂಸ್ಥೆಗೆ ಸದಾ ನಾವು ಬೆನ್ನೆಲುಬಾಗಿ ಇರುತ್ತೇವೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್.ಎನ್.ಡಿ.ನ್ಯಾಶನಲ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ.ಎಸ್.ಕೊಪ್ಪ, ನಾನು ಗೌಂಡಿ ಕೈಯ್ಯಲ್ಲಿ ಗಾರೆ ಕೆಲಸವನ್ನು ಮಾಡಿದ್ದೇನೆ.ಹೊಲದಲ್ಲಿ ಕೃಷಿ ಕೆಲಸವನ್ನು ಮಾಡಿದ್ದೇನೆ.ಮತ್ತೊಬ್ಬರ ಬಳಿ ಆಳಾಗಿಯೂ ಕೆಲಸ ಮಾಡಿದ್ದೇನೆ.ಆದರೆ ನನ್ನ ಕನಸು ಬಡವರ ಮಕ್ಕಳು ಶಿಕ್ಷಣ ಪಡೆದುಕೊಳ್ಳಬೇಕಾದರೆ ಕಷ್ಟಪಡಬಾರದು ಎಂಬ ಉದ್ದೇಶದಿಂದ ಈ ಸಂಸ್ಥೆ ಕಟ್ಟಿದ್ದೇನೆ.ಜಮಖಂಡಿ ಓಲೇಮಠದ ದಿ.ಚನ್ನಬಸವ ಸ್ವಾಮೀಜಿಯವರ ಆಶೀರ್ವಾದ ಸಂಸ್ಥೆಯ ಮೇಲಿದೆ ಎಂದರು.
ಕಾಳಗಿಯ ದೇವಿ ಆರಾಧಕ ಮಹಾದೇವಪ್ಪ ವಿಶ್ವಕರ್ಮ, ವಿಶ್ವಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿರೇಶ ಗುರುಮಠ, ಶಾಲೆಯ ಮುಖ್ಯಗುರುಮಾತೆ ರೇಖಾ ಎಂ.ಎಸ್,ಈರಣ್ಣ ಬಡಿಗೇರ ಸಾನಿಧ್ಯ ವಹಿಸುವರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಸ್.ಎ.ಲೋನಾರಮಠ,ಮಾಜಿ ಕುಸ್ತಿಪಟು ಕರಿಯಪ್ಪ ಆಸಂಗಿ,ಪ್ರಮುಖರಾದ ಯಮನಪ್ಪ ಪೂಜಾರಿ,ಮಹದೇವಪ್ಪ ಹಳ್ಳದ,ರಾಮನಗೌಡ ಬಿರಾದಾರ,ಚಂದ್ರಶೇಖರ ಕುಂಬಾರ,ನಿoಗಪ್ಪ ಓಲೇಕಾರ,ಸುಭಾಷ ಕಟ್ಟೀಮನಿ,ಹಣಮಂತ್ರಾಯ ಮಾದಿನಾಳ,ಮಲ್ಲಯ್ಯ ಹಿರೇಮಠ ಮೊದಲಾದವರು ಇದ್ದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳು ಅತೀ ಹೆಚ್ಚಿನ ಅಂಕ ಪಡೆದುಕೊಳ್ಳುವ ತೃತೀಯ,ನಾಲ್ಕನೇ,ಐದನೇ ಬಹುಮಾನಗಳನ್ನು ವೇದಿಕೆಯಲ್ಲಿದ್ದ ಕರಿಯಪ್ಪ ಆಸಂಗಿ, ನಾನಪ್ಪ ಲಮಾಣಿ, ಬಸವರಾಜ ಸಂಕನಾಳ ನೀಡುವುದಾಗಿ ವಾಗ್ದಾನ ಮಾಡಿದರು. ಎಚ್.ಆರ್.ಬಾಗಲಕೋಟ ಸ್ವಾಗತಿಸಿದರು.ನಂದಿನಿ ಪವಾರ ವರದಿ ವಾಚಿಸಿದರು. ಅಶೋಕ ಗುಂಡಿನಮನಿ ನಿರೂಪಿಸಿದರು.
ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗೆ 25 ಸಾವಿರ ರೂ-ಸಿ.ಬಿ.ಅಸ್ಕಿ
ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗೆ 25 ಸಾವಿರ ರೂ-ಸಿ.ಬಿ.ಅಸ್ಕಿ
Latest News
ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ
ಮುದ್ದೇಬಿಹಾಳ : ಹಣ, ಆಸ್ತಿ, ಅಂತಸ್ತು, ಐಶ್ವರ್ಯ, ಉದ್ಯೋಗ ಮುಂತಾದವುಗಳ ಕೊರತೆಯಿಂದ ಮನುಷ್ಯ ಬಡವನಾಗುವುದಿಲ್ಲ
ಏಳನೇ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಚಾಲನೆ: ಹುಣಶಿಹೊಳೆ ಕಣ್ವಮಠದ ವಿದ್ಯಾಕಣ್ವವಿರಾಜ್ ತೀರ್ಥರ ಭವ್ಯ ಮೆರವಣಿಗೆ
ಮುದ್ದೇಬಿಹಾಳ : ಪಟ್ಟಣದಲ್ಲಿ ಸುಮಾರು 58 ವರ್ಷಗಳ ಬಳಿಕ ಪ್ರಥಮವಾಗಿ ಹುಣಶಿಹೊಳೆ ಕಣ್ವಮಠದ ಪೀಠಾಧಿಕಾರಿಗಳಾದ
ಮುದ್ದೇಬಿಹಾಳ : ಆ.8 ರಂದು ಪದ ಪ್ರದಾನ,ಜಾನಪದ ಬುಡಕಟ್ಟು ದಿನಾಚರಣೆ
ಮುದ್ದೇಬಿಹಾಳ : ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಉದ್ಘಾಟನೆ,ಪದ ಪ್ರದಾನ ಹಾಗೂ ಜಾನಪದ
ಅಂತರ್‌ರಾಜ್ಯ ಕಳ್ಳರ ಬಂಧನ : ಬಸರಕೋಡದ ಪವಾಡ ಬಸವೇಶ್ವರರ ಮೂರ್ತಿ ಕರಗಿಸಿ ಮಾರಿದ್ದ ಗಟ್ಟಿ ಬೆಳ್ಳಿ ವಶಕ್ಕೆ
ಮುದ್ದೇಬಿಹಾಳ(ವಿಜಯಪುರ ಜಿಲ್ಲೆ ): ತಾಲ್ಲೂಕಿನ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ
ಮುದ್ದೇಬಿಹಾಳ ಕ್ಷೇತ್ರದಿಂದ ಶೇ.82.47 ರಷ್ಟು ಪ್ರಗತಿ ಸಾಧನೆ
ಮುದ್ದೇಬಿಹಾಳ : ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಎಸ್.ಆಯ್.ಆರ್ ಪ್ರಕ್ರಿಯೆಯಲ್ಲಿ ಮತಗಟ್ಟೆ ಅಧಿಕಾರಿಗಳು ಉತ್ತಮ ಸೇವೆ ಸಲ್ಲಿಸುತ್ತಿದ್ದು ಈವರೆಗೆ ಶೇ.82.47ರಷ್ಟು ಗಣತಿ ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದೆ ಎಂದು ಮತದಾರರ ನೋಂದಣಾಧಿಕಾರಿ ಬಿ.ಎ.ಸೌದಾಗರ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಎಸ್.ಆಯ್.ಆರ್ ಪ್ರಕ್ರಿಯೆಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿದ ಮೇಲ್ವಿಚಾರಕರು,ಬಿಎಲ್‌ಓಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗೈರು ಹಾಜರಿ 1483, ಶಾಶ್ವತವಾಗಿ ಸ್ಥಳಾಂತರಗೊAಡವರು 16331,8505 ಮತದಾರರು ಮರಣ ಹೊಂದಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಬಿಎಲ್‌ಓಗಳ ಸಹಕಾರದಿಂದ ಉತ್ತಮ
58 ವರ್ಷಗಳ ಬಳಿಕ ಮುದ್ದೇಬಿಹಾಳದಲ್ಲಿ ಚಾತುರ್ಮಾಸ್ಯ ಮಹೋತ್ಸವ
ಮುದ್ದೇಬಿಹಾಳ : ಪಟ್ಟಣದಲ್ಲಿ ಸುಮಾರು 58 ವರ್ಷಗಳ ಬಳಿಕ ಪ್ರಥಮವಾಗಿ ಹುಣಶಿಹೊಳೆ ಕಣ್ವಮಠದ ಪೀಠಾಧಿಕಾರಿಗಳಾದ ವಿದ್ಯಾಕಣ್ವವಿರಾಜ್ ತೀರ್ಥ ಶ್ರೀಗಳು ತಮ್ಮ ಏಳನೇ ಚಾತುರ್ಮಾಸ್ಯವನ್ನು ಆ.8 ರಿಂದ ಸೆ.26ರವರೆಗೆ ಕೈಗೊಳ್ಳಲಿದ್ದಾರೆ ಎಂದು ಮಹೋತ್ಸವ ಸಮೀತಿ ಅಧ್ಯಕ್ಷ ಅನೀಲಕುಮಾರ ಕುಲಕರ್ಣಿ ಹೇಳಿದರು. ಪಟ್ಟಣದ ಪಟ್ಟಣದ ಶ್ರೀ ಶಿವ ಚಿದಂಬರ ದೇವಸ್ಥಾನದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸಪ್ತಮ ಚಾತುರ್ಮಾಸ್ಯದ ಕುರಿತು ಅವರು ವಿವರಿಸಿದರು.ಮುದ್ದೇಬಿಹಾಳ ಪಟ್ಟಣದಲ್ಲಿ ಸುಮಾರು 58 ವರ್ಷಗಳ ಹಿಂದೆ ಹುಣಶಿಹೊಳೆ ಕಣ್ವಮಠದ ವಿದ್ಯಾತಪೋನಿಧಿ







