ರವಿ ಹಂಜ್ ಚಿತ್ರಕ್ಕೆ ಬೆಂಕಿ: ಬಸವ ಪರಂಪರೆ ವಿನಾಶಕ್ಕೆ ಷಡ್ಯಂತ್ರ ನಡೆದಿದೆ-ಬಿದರಕುಂದಿ

ರವಿ ಹಂಜ್ ಚಿತ್ರಕ್ಕೆ ಬೆಂಕಿ: ಬಸವ ಪರಂಪರೆ ವಿನಾಶಕ್ಕೆ ಷಡ್ಯಂತ್ರ ನಡೆದಿದೆ-ಬಿದರಕುಂದಿ

ಮುದ್ದೇಬಿಹಾಳ : ವೀರಶೈವ ಲಿಂಗಾಯತರ ಹೆಗಲ ಮೇಲೆ ಬಂದೂಕು ಇಟ್ಟು ಬಸವ ಪರಂಪರೆಯನ್ನು ಹಾಳು ಮಾಡುವ ಕುತಂತ್ರ ಪುರೋಹಿತಶಾಹಿ ವ್ಯವಸ್ಥೆಯಿಂದ ನಡೆದಿದೆ.ಬಸವ ಪರಂಪರೆಯ ವಿನಾಶಕ್ಕೆ ಷಡ್ಯಂತ್ರ ಹಂಜಿಯoತಹ ಸಾಹಿತಿಯೇ ಅಲ್ಲದ ವ್ಯಕ್ತಿಗಳು ಬಸವಣ್ಣನವರ ವ್ಯಕ್ತಿತ್ವದ ತೇಜೋವಧೆಗೆ ಹೊರಟಿರುವುದು ಖಂಡನೀಯ ಎಂದು ಹಿರಿಯ ಸಾಹಿತಿ ಅಬ್ದುಲರಹೆಮಾನ್ ಬಿದರಕುಂದಿ ಹೇಳಿದರು.

ಪಟ್ಟಣದಲ್ಲಿ ವಿವಾದಿತ ಬಸವ ಮಂಟಪ ಪುಸ್ತಕದ ಲೇಖಕ ರವಿ ಹಂಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ವಿವಿಧ ಸಂಘಟನೆಗಳಿoದ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಬಸವಣ್ಣವರು ಏಳು ಕೋಟಿ ಕನ್ನಡಿಗರ ಪ್ರತಿನಿಧಿ.ಏಕದೇವೋಪಾಸನೆಯ ಸಂದೇಶ ನೀಡಿದ ಬಸವಣ್ಣವರ,ಪೈಗಂಬರ್‌ರ ಚಿಂತನೆಗಳು ಸಮಾನವಾಗಿದ್ದು ಇವುಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಹಿರಿಯ ಸಾಹಿತಿ ಬಿ.ಎಂ.ಹಿರೇಮಠ ಮಾತನಾಡಿ, ಹಂಜಿ ಸಾಹಿತಿಯೇ ಅಲ್ಲ.ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಹೀನವಾಗಿ ಬರೆದಿರುವ ವ್ಯಕ್ತಿಯನ್ನು ಬಂಧಿಸಬೇಕು ಎಂದು ಹೇಳಿದರು. ವಕೀಲರಾದ ಎನ್.ಆರ್.ಮೊಕಾಶಿ ಮಾತನಾಡಿ,ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ನಡೆದಿದೆ.ಕೊಂಡಿಮಿoಚಣ್ಣನoತವರು ಅಂದು ಇದ್ದರು ಇವತ್ತಿಗೂ ಇದ್ದಾರೆ. ಬಸವಣ್ಣನವರ ಕುರಿತು ಕೆಟ್ಟದಾಗಿ ಚಿತ್ರಿಸುವ ಕೆಲಸ ನಡೆದಿದೆ.ಇದನ್ನು ವಿರೋಧಿಸಬೇಕು ಎಂದರು.

ಡಿಎಸ್‌ಎಸ್ ಮುಖಂಡ ಹರೀಶ ನಾಟೀಕಾರ, ಸರಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಅಶೋಕ ಮಣಿ,ವಾಯ್.ಎಚ್.ವಿಜಯಕರ್ ಮಾತನಾಡಿ,ರವಿ ಹಂಜಿ ಸಾಹಿತಿಗಳನ್ನು ತಲೆ ತಗ್ಗಿಸುವ ಕೆಲಸ ಮಾಡಿದ್ದಾನೆ.ಸಾಮಾಜಿಕ ಕ್ರಾಂತಿ ಮಾಡಿದ ಮೇರು ವ್ಯಕ್ತಿತ್ವದ ಬಸವಣ್ಣನವರ ಬಗ್ಗೆ ಮಸಿ ಬಳಿಯುವ ಕೆಲಸ ಮಾಡುತ್ತಿರುವವರು ಉಗ್ರವಾಗಿ ಶಿಕ್ಷಿಸಬೇಕು ಎಂದು ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರವಿ ಹಂಜ್ ಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಸುಟ್ಟು ಹಾಕಿದರು.ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಶಿರಸ್ತೇದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪ್ರೊ. ಎಸ್.ಎಸ್.ಹೂಗಾರ, ಕಾಶೀಬಾಯಿ ರಾಂಪೂರ, ವೀರೇಶ ಇಲ್‌ಕಲ್ ಮತ್ತಿತರರು ಮಾತನಾಡಿ ರವಿ ಹಂಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪ್ರಭುರಾಜ ಕಲ್ಬುರ್ಗಿ, ಮಾಣಿಕಚಂದ ದಂಡಾವತಿ, ಪ್ರಭು ಕಡಿ, ಬಸಲಿಂಗಪ್ಪ ರಕ್ಕಸಗಿ, ಮಹೆಬೂಬ ಗೊಳಸಂಗಿ,ಶAಕರ ಬೇವಿನಗಿಡದ, ಹುಸೇನ್ ಮುಲ್ಲಾ,ಹರೀಶ ಬೇವೂರ, ಮಹೇಶ ತೇಲಂಗಿ,ರಾಜು ಬಳ್ಳೊಳ್ಳಿ,ಎಚ್.ಆರ್.ಬಾಗವಾನ,ರಫಿಕ್ ಶಿರೋಳ, ಗಿರಿಜಾ ಕಡಿ,ಕಾಶಿನಾಥ ಹುಗ್ಗಿ,ಬಾಬು ಬಿರಾದಾರ,ಪರಶುರಾಮ ನಾಲತವಾಡ,ರಾಜು ರಾಯಗೂಂಡ, ವೆಂಕನಗೌಡ ಪಾಟೀಲ್,ಗೋಪಿ ಮಡಿವಾಳರ,ಮುತ್ತು ಕಡಿ,ರವಿ ತಡಸದ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಸಾಹಿತಿಗಳು, ಬಸವ ಅಭಿಮಾನಿಗಳು ಭಾಗವಹಿಸಿದ್ದರು.

Latest News

ಆರ್.ಬಿ. ಶುಗರ್ಸ್ ಮೌನಕ್ಕೆ ರೈತರ ಆಕ್ರೋಶ:                                 ಕಬ್ಬು ನುರಿಸುವಿಕೆ ಆರಂಭ, ದರ ಘೋಷಣೆಗೆ ಮೀನಮೇಷ..!

ಆರ್.ಬಿ. ಶುಗರ್ಸ್ ಮೌನಕ್ಕೆ ರೈತರ ಆಕ್ರೋಶ: ಕಬ್ಬು ನುರಿಸುವಿಕೆ ಆರಂಭ, ದರ ಘೋಷಣೆಗೆ ಮೀನಮೇಷ..!

ವಿಶೇಷ ವರದಿ : ಶಂಕರ್ ಹೆಬ್ಬಾಳ ಮುದ್ದೇಬಿಹಾಳ : ಹಲವು ಆಶಾಭಾವನೆ ಹಾಗೂ ಭರವಸೆಗಳೊಂದಿಗೆ

ಹಜರತ್ ಟಿಪ್ಪು ಸುಲ್ತಾನ್ ಜಯಂತಿ:                                       ರಕ್ತದಾನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ

ಹಜರತ್ ಟಿಪ್ಪು ಸುಲ್ತಾನ್ ಜಯಂತಿ: ರಕ್ತದಾನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ

ಮುದ್ದೇಬಿಹಾಳ : ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಅಂಗವಾಗಿ ಆಲ್ ಕಿದ್ಮತ್ ಫೌಂಡೇಶನ್ ವತಿಯಿಂದ

ಎರಡು ದಿನಗಳಲ್ಲಿ ಕಾಲುವೆಗಳಿಗೆ ನೀರು:  ಅಧಿಕಾರಿಗಳೊಂದಿಗೆಶಾಸಕ ನಾಡಗೌಡರ ಸಮಾಲೋಚನೆ

ಎರಡು ದಿನಗಳಲ್ಲಿ ಕಾಲುವೆಗಳಿಗೆ ನೀರು: ಅಧಿಕಾರಿಗಳೊಂದಿಗೆಶಾಸಕ ನಾಡಗೌಡರ ಸಮಾಲೋಚನೆ

ಮುದ್ದೇಬಿಹಾಳ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ರೈತರ ಜಮೀನುಗಳಿಗೆ ನೀರು ಸಿಗದೆ ತೀವ್ರ ತೊಂದರೆಯಾಗುತ್ತಿರುವ

ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿಗೆ ಅದ್ದೂರಿ ಸ್ವಾಗತ

ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿಗೆ ಅದ್ದೂರಿ ಸ್ವಾಗತ

ಮುದ್ದೇಬಿಹಾಳ : ಕಳ್ಳತನವಾಗಿದ್ದ ಬೆಳ್ಳಿ ಮೂರ್ತಿ ಪೊಲೀಸರ ಚುರುಕಾದ ತನಿಖೆಯಿಂದ ಗಟ್ಟಿ ಬೆಳ್ಳಿ ರೂಪದಲ್ಲಿ

34 ವಿದ್ಯಾರ್ಥಿಗಳು ತಾಲ್ಲೂಕುಮಟ್ಟಕ್ಕೆ ಆಯ್ಕೆ:                      ಹುಲ್ಲೂರು ಎಸ್‌ಎನ್‌ಡಿ ನ್ಯಾಶನಲ್ ಪಬ್ಲಿಕ್ ಶಾಲೆ ಸಾಧನೆ

34 ವಿದ್ಯಾರ್ಥಿಗಳು ತಾಲ್ಲೂಕುಮಟ್ಟಕ್ಕೆ ಆಯ್ಕೆ: ಹುಲ್ಲೂರು ಎಸ್‌ಎನ್‌ಡಿ ನ್ಯಾಶನಲ್ ಪಬ್ಲಿಕ್ ಶಾಲೆ ಸಾಧನೆ

ಮುದ್ದೇಬಿಹಾಳ : ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಶಿಕ್ಷಣಾಧಿಕಾರಿ ಎಂ.ಎಸ್. ಬಡದಾನಿ ಹೇಳಿದರು. ತಾಲ್ಲೂಕಿನ ಹುಲ್ಲೂರ ಗ್ರಾಮದ ಎಸ್‌ಎನ್‌ಡಿ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಹುಲ್ಲೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳು ತಮ್ಮ ಮಾತುಗಳಿಗಿಂತ ಶಿಕ್ಷಕರ ಮಾತುಗಳಿಗೆ ಹೆಚ್ಚಿನ ಗೌರವ ಹಾಗೂ ಮಹತ್ವ ನೀಡುತ್ತಾರೆ. ಹೀಗಾಗಿ ಶಿಕ್ಷಕರು ಜವಾಬ್ದಾರಿಯಿಂದ

ಬೆಂಗಳೂರು ದಕ್ಷಿಣ ತಂಡ ಸೋಲಿಸಿದ ಎಸ್.ಎಸ್.ಶಿವಾಚಾರ್ಯ ಕಾಲೇಜು:                                  ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜಯಪುರ ಜಿಲ್ಲೆಗೆ ಐತಿಹಾಸಿಕ ಗೆಲುವು

ಬೆಂಗಳೂರು ದಕ್ಷಿಣ ತಂಡ ಸೋಲಿಸಿದ ಎಸ್.ಎಸ್.ಶಿವಾಚಾರ್ಯ ಕಾಲೇಜು: ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜಯಪುರ ಜಿಲ್ಲೆಗೆ ಐತಿಹಾಸಿಕ ಗೆಲುವು

ಮುದ್ದೇಬಿಹಾಳ : ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದಲ್ಲಿ ಈಚೇಗೆ ಜರುಗಿದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ದಕ್ಷಿಣ ತಂಡವನ್ನು 40-04 ಅಂಕಗಳ ಭಾರಿ ಅಂತರದಿOದ ಪರಾಭವಗೊಳಿಸುವ ಮೂಲಕ ವಿಜಯಪುರ ಜಿಲ್ಲೆಯ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಈ ಸಾಧನೆಗೈದ ಮುದ್ದೇಬಿಹಾಳ ಪಟ್ಟಣದ ಎಸ್.ಎಸ್. ಶಿವಾಚಾರ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಸಂಸ್ಥೆಯ ಗೌರವಾಧ್ಯಕ್ಷ ಕುಂಟೋಜಿ ಚೆನ್ನವೀರ ಶಿವಾಚಾರ್ಯರು ಹಾಗೂ ಸಂಸ್ಥಾಪಕ ಕಾರ್ಯದರ್ಶಿ ರವಿ ಎನ್. ನಾಯಕ ಅವರ ನೇತೃತ್ವದಲ್ಲಿ