ಮುದ್ದೇಬಿಹಾಳ : ತಾಲ್ಲೂಕಿನ ಐತಿಹಾಸಿಕ ಸುಕ್ಷೇತ್ರ ಬಸರಕೋಡ ಗ್ರಾಮದಲ್ಲಿ ಮಂಗಳವಾರ ಗೌರಿ ಹುಣ್ಣಿಮೆಯ ದಿನದಂದು ಸಂಭ್ರಮದಿoದ ಪವಾಡ ಬಸವೇಶ್ವರ ನೂತನ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.ವಿಶೇಷ ರುದ್ರಾಭಿಷೇಕ ನಡೆಸಿ ದೇವರ ಮೂರ್ತಿಯನ್ನು ಅನಾವರಣಗೊಳಿಸಲಾಯಿತು.
ನೂತನ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕ ಸಿ.ಎಸ್ ನಾಡಗೌಡ, ನೂತನ ಪ್ರತಿಮೆ ದರ್ಶನ ಪಡೆದರು.ಬಳಿಕ ತಮ್ಮ ಕುಟುಂಬದಿAದ ಒಂದು ಕೆಜಿ ಬೆಳ್ಳಿ ದಾನವಾಗಿ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಿ.ಎಸ್.ನಾಡಗೌಡ, ಪವಾಡ ಬಸವೇಶ್ವರರು ಭಕ್ತರಿಗೆ ಬೇಡಿದ ವರವನ್ನು ಅವರ ಕಷ್ಟಗಳನ್ನು ದೂರ ಮಾಡುತ್ತಾರೆ. ಈ ಪವಾಡ ಬಸವೇಶ್ವರರ ಈ ಹಿಂದಿನ ಬೆಳ್ಳಿ ಪ್ರತಿಮೆ ಸಹ ಕಳ್ಳತನವಾಗಿ ಮರಳಿ ಬಂದಿರೋದು ಸಹ ಒಂದು ಪವಾಡವೇ ಸರಿ. ಹೊಸ ಪ್ರತಿಮೆಗೆ ಎಲ್ಲಾ ಭಕ್ತರು ನೀಡಿದ ಬೆಳ್ಳಿಯನ್ನು ಸೇರಿಸಿ ನೂತನ ಪ್ರತಿಮೆ ಪ್ರತಿಷ್ಠಾಪನೆ ಆಗಿದ್ದು ಸಹ ಒಂದು ಪವಾಡವಾಗಿದೆ. ವರ್ಷದಲ್ಲಿ ಎಲ್ಲಾ ಭಕ್ತರು ಸೇರಿ 3 ಜಾತ್ರೆಯನ್ನು ಮಾಡುತ್ತಾರೆ.ದೇವಸ್ಥಾನ ಕಮೀಟಿ ಹಗಲಿರಳು ಭಕ್ತರ ಭಾವನೆಗಳನ್ನು ಗೌರವಿಸುವ ಕೆಲಸ ಮಾಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಕರನಂದಪ್ಪ ಬಿರಾದಾರ ಹಾಗೂ ಆಡಳಿತ ಮಂಡಳಿ ಸದಸ್ಯ, ಪವಾಡ ಬಸವೇಶ್ವರ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಶ್ರೀಶೈಲ್ ಮೇಟಿ ಮಾತನಾಡಿ, ನೂತನ ಬೆಳ್ಳಿ ಪ್ರತಿಮೆಯನ್ನು 40 ಕೆಜಿ ಬೆಳ್ಳಿ ಹಾಗೂ ದೇವರ ಪ್ರಭಾವಳಿ 15 ಒಟ್ಟು 55 ಕಜಿ ಬೆಳ್ಳಿಯಲ್ಲಿ ನೂತನ ಪ್ರತಿಮೆ ಇಂದು ಪ್ರಾಣ ಪ್ರತಿಷ್ಠಾಪನೆ ಮೂಲಕ ಭಕ್ತರ ದರ್ಶನಕ್ಕೆ ಲೋಕಾರ್ಪಣೆ ಮಾಡಲಾಗಿದೆ ಎಂದರು.
ಧರ್ಮಸಭೆ: ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ನಿಮಿತ್ಯ ಧರ್ಮಸಭೆ ಜರುಗಿತು. ಕುಷ್ಟಗಿ ಮದ್ದಾನೇಶ್ವರ ಮಠದ ಶ್ರೀ ಕರಿಬಸವ ಸ್ವಾಮೀಜಿ,ಕುಂಟೋಜಿ ಭಾವೈಕ್ಯತಾ ಮಠದ ಚನ್ನವೀರ ಶಿವಾಚಾರ್ಯರು, ಪಡೇಕನೂರ ದಾಸೋಹಮಠದ ಮಲ್ಲಿಕಾರ್ಜುನ ಸ್ವಾಮೀಜಿ,ಢವಳಗಿ ಗದ್ದುಗೆಮಠದ ಘನಮಠೇಶ್ವರ ಸ್ವಾಮೀಜಿ,ಶರಣ ಸೋಮನಾಳದ ಮಹಾದೇವಯ್ಯ ಶಾಸ್ತ್ರಿ,ಅರಳಿಚಂಡಿ ಶರಣರು ಸಾನಿಧ್ಯವಹಿಸಿದ್ದರು.ಆಡಳಿತ ಮಂಡಳಿಯ ಅಧ್ಯಕ್ಷ ಕೆ ವೈ ಬಿರಾದಾರ, ಕಾರ್ಯದರ್ಶಿ ಎಸ್ ಬಿ ನಾಡಗೌಡ,ಶ್ರೀಶೈಲ್ ಮೇಟಿ, ನೀಲಕಂಠರಾವ ನಾಡಗೌಡ ,ಅಪ್ಪು ಬಿರಾದಾರ, ಕೆ.ಎಸ್ ಕೂಟಗಿ, ಬಿ.ಸಿ ಕಲ್ಲೂರ,ವಿರೇಶ ಮಂಕಣಿ ಸೇರಿದಂತೆ ಬಸರಕೋಡ ಹಾಗೂ ಸುತ್ತಮುತ್ತಲಿನ ಭಕ್ತರು ಭಾಗವಹಿಸಿದ್ದರು.ಶಿಕ್ಷಕ ಪ್ರಕಾಶ ಗೊಂಧಳೆ ನಿರೂಪಿಸಿ ವಂದಿಸಿದರು.







