Accident: ಐದು ಜನರ ಜೀವ ಉಳಿಸಿದ ವಾಂತಿ..!

Accident: ಐದು ಜನರ ಜೀವ ಉಳಿಸಿದ ವಾಂತಿ..!

ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್ ಲಾರಿಯೊಂದು ಕಾರಿನ ಮೇಲೆ ಮಗುಚಿ ಬಿದ್ದ ಪರಿಣಾಮ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿರುವ (Accident) ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಬರ್ಚಿನಹಳ್ಳದಲ್ಲಿ ಶನಿವಾರ ಈ ಘಟನೆ ನಡೆದಿದೆ.

ಆದರೆ ವಾಂತಿಯ ಪರಿಣಾಮ ಈ ಅಪಘಾತದ ವೇಳೆ ಕಾರಲ್ಲಿ ಯಾರೂ ಇಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Join Our Telegram: https://t.me/dcgkannada

ಶುಕ್ರವಾರ ಧರ್ಮಸ್ಥಳ ಕ್ಷೇತ್ರಕ್ಕೆ ಬಂದು ದರ್ಶನ ಪಡೆದಿದ್ದ ದಾವಣಗೆರೆಯ ನಿವಾಸಿಗರಾದ ಗಣೇಶ, ಶಿವು, ಕಾವ್ಯಾ, ದಂಡ್ಯಮ್ಮ ಅವರು ಚಾಲಕ ಅಬ್ದುಲ್ ರಹಿಮಾನ್ ಮುಲ್ಲಾ ಅವರೊಂದಿಗೆ ಶನಿವಾರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದರ್ಶನ ಪಡೆದು ಊರಿಗೆ ಹಿಂದಿರುಗುತ್ತಿದ್ದರು.

ಈ ವೇಳೆ ಕಾರಿನಲ್ಲಿ ಕಾವ್ಯಾ ಎಂಬವರಿಗೆ ವಾಂತಿ ಬಂದಿತ್ತು. ತಕ್ಷಣವೇ ಕಾರನ್ನು ನಿಲ್ಲಿಸಿ ಕಾವ್ಯಾಗೆ ಉಪಚರಿಸಲು ಎಲ್ಲರೂ ಕಾರಿನಿಂದ ಕೆಳಗಡೆ ಇಳಿದಿದ್ದರು. ಈ ವೇಳೆಗೆ ಕಾರಿನ ಚಾಲಕನೂ ಕೆಳಗಿಳಿದು ಮೂತ್ರ ವಿಸರ್ಜನೆಗಾಗಿ ಅಲ್ಲಿಂದ ಕೆಲ ದೂರ ತೆರಳಿದ್ದಾರೆ.

ಇದನ್ನೂ ಓದಿ: Rahul vs Modi: ಪ್ರಧಾನಿ ಮೋದಿಗೆ ವಾರ್ನಿಂಗ್ ಕೊಟ್ಟ ರಾಹುಲ್ ಗಾಂಧಿ!

ಇದೇ ವೇಳೆ ಕಂಟೇನರ್​ ಲಾರಿಯೊಂದು ಬಂದು ಇದಕ್ಕಿಂದಂತೆ ಕಾರಿನ ಮೇಲೆ ಮಗುಚಿ ಬಿದ್ದಿದೆ. ಇದರಿಂದಾಗಿ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದೆ. ಅದೃಷ್ಟವಶಾತ್ ಕಾರಿನಿಂದ ಎಲ್ಲರೂ ಇಳಿದಿದ್ದರಿಂದ ಯಾರಿಗೂ ಹಾನಿಯಾಗಿಲ್ಲ ಎಂದು ವರದಿಯಾಗಿದೆ.

Latest News

ಸುಣಕಲ್‌ನ ಆರ್.ಬಿ.ಶುಗರ‍್ಸ; ಇನ್ನೂ ಆರಂಭವಾಗದ ಕಬ್ಬು ನುರಿಸುವ ಕಾರ್ಯ

ಸುಣಕಲ್‌ನ ಆರ್.ಬಿ.ಶುಗರ‍್ಸ; ಇನ್ನೂ ಆರಂಭವಾಗದ ಕಬ್ಬು ನುರಿಸುವ ಕಾರ್ಯ

ಮುದ್ದೇಬಿಹಾಳ : ಪಕ್ಕದ ಲಿಂಗಸ್ಗೂರು ತಾಲ್ಲೂಕಿನ ಸುಣಕಲ್‌ನಲ್ಲಿ ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ನೇತೃತ್ವದಲ್ಲಿ

ಕ್ರೀಡೆ ಮಕ್ಕಳ ದೈಹಿಕ, ಮಾನಸಿಕ ಸದೃಢತೆಗೆ ಸಹಕಾರಿ-ಡಿವೈಎಸ್ಪಿ ನಂದರೆಡ್ಡಿ

ಕ್ರೀಡೆ ಮಕ್ಕಳ ದೈಹಿಕ, ಮಾನಸಿಕ ಸದೃಢತೆಗೆ ಸಹಕಾರಿ-ಡಿವೈಎಸ್ಪಿ ನಂದರೆಡ್ಡಿ

ಮುದ್ದೇಬಿಹಾಳ : ಮಕ್ಕಳನ್ನು ಶೈಕ್ಷಣಿಕವಾಗಿ ಸದೃಢಗೊಳಿಸುವುದರ ಜೊತೆಗೆ ದೈಹಿಕವಾಗಿಯೂ ಸದೃಢಗೊಳಿಸಲು ಕ್ರೀಡೆಗಳು ಮುಖ್ಯ. ಕ್ರೀಡೆಗಳಲ್ಲಿ

ಆರ್.ಬಿ. ಶುಗರ್ಸ್’ರಿಂದ ಕಬ್ಬು ದರ ಘೋಷಣೆಗೆ ಆಗ್ರಹ:             ದರ ಪ್ರಕಟಿಸದೆ ಕಬ್ಬು ನುರಿಸುವ ಕಾರ್ಯ ಆರಂಭ ; ರೈತರಲ್ಲಿ ಆತಂಕ

ಆರ್.ಬಿ. ಶುಗರ್ಸ್’ರಿಂದ ಕಬ್ಬು ದರ ಘೋಷಣೆಗೆ ಆಗ್ರಹ: ದರ ಪ್ರಕಟಿಸದೆ ಕಬ್ಬು ನುರಿಸುವ ಕಾರ್ಯ ಆರಂಭ ; ರೈತರಲ್ಲಿ ಆತಂಕ

ತಾಳಿಕೋಟಿ : ಮುದ್ದೇಬಿಹಾಳ ತಾಲ್ಲೂಕಿನ ಹಲವು ರೈತರು ರಾಯಚೂರು ಜಿಲ್ಲೆಯಲ್ಲಿರುವ ಆರ್.ಬಿ. ಶುಗರ್ಸ್ ಕಾರ್ಖಾನೆಗೆ

ಫಲ ನೀಡಿದ ಶಾಸಕರ ಪತ್ರ ವ್ಯವಹಾರ :                                   ಒಣಗುವ ಮೆಣಸಿಣಕಾಯಿ ಬೆಳೆಗೆ ಎಎಲ್‌ಬಿಸಿ ಕಾಲುವೆ ನೀರು

ಫಲ ನೀಡಿದ ಶಾಸಕರ ಪತ್ರ ವ್ಯವಹಾರ : ಒಣಗುವ ಮೆಣಸಿಣಕಾಯಿ ಬೆಳೆಗೆ ಎಎಲ್‌ಬಿಸಿ ಕಾಲುವೆ ನೀರು

ಮುದ್ದೇಬಿಹಾಳ : ಆಲಮಟ್ಟಿ ನೀರಾವರಿ ಸಲಹಾ ಸಮೀತಿ ಅಧ್ಯಕ್ಷ,ಸಚಿವ ವಿಜಯಾನಂದ ಕಾಶಪ್ಪನವರ ಹಾಗೂ ಸಂಬoಧಿಸಿದ

ಮುದ್ದೇಬಿಹಾಳ : ನ.25 ರಂದು ಬೃಹತ್ ರಕ್ತದಾನ ಶಿಬಿರ

ಮುದ್ದೇಬಿಹಾಳ : ನ.25 ರಂದು ಬೃಹತ್ ರಕ್ತದಾನ ಶಿಬಿರ

ಮುದ್ದೇಬಿಹಾಳ : ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆಯ ಅಂಗವಾಗಿ ನ.25ರಂದು ಬೆಳಿಗ್ಗೆ 9:30 ಗಂಟೆಗೆ ಮುದ್ದೇಬಿಹಾಳದ ಎಂ.ಜಿ.ವಿ.ಸಿ ಮಹಾವಿದ್ಯಾಲಯದಲ್ಲಿ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ವಿಜಯಪುರ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ, ತಾಲೂಕು ಸಾರ್ವಜನಿಕ ಆಸ್ಪತ್ರೆ ಮುದ್ದೇಬಿಹಾಳ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ವಿಜಯಪುರ, ಎಂ.ಜಿ.ವಿ.ಸಿ ಮಹಾವಿದ್ಯಾಲಯ ಹಾಗೂ ನಗರದ

ಆರ್.ಬಿ. ಶುಗರ್ಸ್ ಮೌನಕ್ಕೆ ರೈತರ ಆಕ್ರೋಶ:                                 ಕಬ್ಬು ನುರಿಸುವಿಕೆ ಆರಂಭ, ದರ ಘೋಷಣೆಗೆ ಮೀನಮೇಷ..!

ಆರ್.ಬಿ. ಶುಗರ್ಸ್ ಮೌನಕ್ಕೆ ರೈತರ ಆಕ್ರೋಶ: ಕಬ್ಬು ನುರಿಸುವಿಕೆ ಆರಂಭ, ದರ ಘೋಷಣೆಗೆ ಮೀನಮೇಷ..!

ವಿಶೇಷ ವರದಿ : ಶಂಕರ್ ಹೆಬ್ಬಾಳ ಮುದ್ದೇಬಿಹಾಳ : ಹಲವು ಆಶಾಭಾವನೆ ಹಾಗೂ ಭರವಸೆಗಳೊಂದಿಗೆ ಆರಂಭಗೊoಡಿರುವ ಲಿಂಗಸುಗೂರು ತಾಲ್ಲೂಕಿನ ಸುಣಕಲ್‌ನಲ್ಲಿರುವ ಮಾಜಿ ಸಚಿವ ಆರ್.ಬಿ. ತಿಮ್ಮಾಪೂರ ಒಡೆತನದ ಆರ್.ಬಿ. ಶುಗರ್ಸ್ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಆದರೆ ಕಾರ್ಖಾನೆ ಆರಂಭವಾಗಿ ಕಬ್ಬು ನುರಿಸುವಿಕೆ ಪ್ರಗತಿಯಲ್ಲಿದ್ದರೂ ಟನ್ ಕಬ್ಬಿಗೆ ಎಷ್ಟು ದರ ನೀಡಲಾಗುತ್ತದೆ ಎಂಬುದನ್ನು ಆಡಳಿತ ಮಂಡಳಿ ಈವರೆಗೂ ಅಧಿಕೃತವಾಗಿ ಘೋಷಿಸದಿರುವುದು ಕಬ್ಬು ಬೆಳೆಗಾರರ ಅಸಮಾಧಾನಕ್ಕೆ ಕಾರಣವಾಗಿದೆ. ಮುದ್ದೇಬಿಹಾಳ