BJP Rebels Basanagouda patil yatnal vs BY Vijayendra

BJP Rebels: ಅತೃಪ್ತರ ಮುಂದೆ ಮಂಡಿಯೂರಿದ್ರಾ ಬಿಜೆಪಿ ರಾಜ್ಯಾಧ್ಯಕ್ಷ..? ಬಿ.ವೈ. ವಿಜಯೇಂದ್ರ ಶಾಕಿಂಗ್ ರಿಯಾಕ್ಷನ್..!

BJP Rebels: ಅತೃಪ್ತರ ಮುಂದೆ ಮಂಡಿಯೂರಿದ್ರಾ ಬಿಜೆಪಿ ರಾಜ್ಯಾಧ್ಯಕ್ಷ..? ಬಿ.ವೈ. ವಿಜಯೇಂದ್ರ ಶಾಕಿಂಗ್ ರಿಯಾಕ್ಷನ್..!

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ (BJP Rebels) ಪಾದಯಾತ್ರೆಗೆ ಪಕ್ಷದ ವರಿಷ್ಠರು ಅನುಮತಿ ನೀಡಿದರೆ ನನ್ನದೇನು ತಕರಾರು ಇಲ್ಲ ಎನ್ನುವ ಮೂಲಕ ಬಿಜೆಪಿ ರಾಜ್ಯಾ ಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಮ್ಮ ವಿರೋಧಿ ಬಣದ‌ ಮುಂದೆ ಮಂಡಿಯೂರಿದ್ರಾ ಎಂಬ ಮಾತು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಹೌದು, ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಕೆಲವರು ಪಾದಯಾತ್ರೆ ಮಾಡುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಇದರಿಂದ ಪಕ್ಷಕ್ಕೆ ಶಕ್ತಿ ಸಿಗುವುದಾದರೆ, ವರಿಷ್ಠರು ಅನುಮತಿ ನೀಡಿದರೆ ನನ್ನದೇನು ತಕರಾರು ಇಲ್ಲ ಎಂದು ಹೇಳಿದ್ದಾರೆ.

Join Our Telegram: https://t.me/dcgkannada

ವರಿಷ್ಠರು ಅನುಮತಿ ನೀಡಿದರೆ ಮಾತ್ರ ಪಾದಯಾತ್ರೆ ಮಾಡಲು ಅವರು ಸ್ವತಂತ್ರರು. ಆದರೆ, ಆ ಪಾದಯಾತ್ರೆ ಪಕ್ಷಕ್ಕೆ ಪೂರಕವಾಗಿರಬೇಕು ಮತ್ತು ಪಕ್ಷ ಸಂಘಟನೆಗೆ ಲಾಭದ ಸದುದ್ದೇಶ ಇರಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿಜಯೇಂದ್ರ(BY Vijayendra), ನಾನು ಪಕ್ಷದ ಅಧ್ಯಕ್ಷನಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಆದ್ಯ ಕರ್ತವ್ಯ. ನಾನು ಅಧ್ಯಕ್ಷನಾದಾಗಿನಿಂದಲೂ ಸತತವಾಗಿ ಆ ಕೆಲಸ ಮಾಡುತ್ತಾ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಮುಡಾ ಹಗರಣ.. ಸಿಎಂ ಪರ ಅರ್ಜಿ ವಜಾ..! ಆ.21ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

ಭಾನುವಾರ ಬೆಳಗಾವಿಯ ರೆಸಾರ್ಟ್‌ವೊಂದರಲ್ಲಿ ಬಿಜೆಪಿಯ ಕೆಲವು ಹಿರಿಯ ನಾಯಕರು ಪ್ರತ್ಯೇಕವಾಗಿ ಸಭೆ ನಡೆಸಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಕೂಡಲಸಂಗಮದಿಂದ ಬಳ್ಳಾರಿವರೆಗೆ (Kudalasangama to Ballary) ಪಾದಯಾತ್ರೆ ನಡೆಸಬೇಕು. ಅಲ್ಲದೆ, ಶೀಘ್ರ ಈ ಸಂಬಂಧ ಪಕ್ಷದ ವರಿಷ್ಠರನ್ನು ಸಂಪರ್ಕಿಸಬೇಕು ಎಂಬ ನಿರ್ಧಾರ ಕೈಗೊಂಡಿದ್ದರು.

ಪಕ್ಷದ ಮುಖಂಡರು, ಬಸನಗೌಡ ಪಾಟೀಲ ಯತ್ನಾಳ್ (Basanagouda patil yatnal), ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಜಿ.ಎಂ.ಸಿದ್ಧೇಗೌಡ, ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ ಆ ಸಭೆಯಲ್ಲಿ ಭಾಗವಹಿಸಿದ್ದರು.

Latest News

ಎಸ್.ಎಸ್.ಎಲ್.ಸಿ ಪರೀಕ್ಷೆ:                                         ಕವಡಿಮಟ್ಟಿಯ ಆರ್ಚ್ ಏಂಜಲ್ ಶಾಲೆಗೆ ಶೇ.100ರಷ್ಟು ಫಲಿತಾಂಶ

ಎಸ್.ಎಸ್.ಎಲ್.ಸಿ ಪರೀಕ್ಷೆ: ಕವಡಿಮಟ್ಟಿಯ ಆರ್ಚ್ ಏಂಜಲ್ ಶಾಲೆಗೆ ಶೇ.100ರಷ್ಟು ಫಲಿತಾಂಶ

ಮುದ್ದೇಬಿಹಾಳ : ತಾಲೂಕಿನ ಸರೂರ ಕ್ರಾಸ್ ಬಳಿ ಇರುವ ಕವಡಿಮಟ್ಟಿಯ ದಿ ಆರ್ಚ್ ಏಂಜಲ್

ಉತ್ತಮ ಕಾರ್ಯನಿರ್ವಹಣೆ :                                              KRIDL ಇಇ ಆನಂದಸ್ವಾಮಿ ಅವರಿಗೆ ಪ್ರಶಸ್ತಿ

ಉತ್ತಮ ಕಾರ್ಯನಿರ್ವಹಣೆ : KRIDL ಇಇ ಆನಂದಸ್ವಾಮಿ ಅವರಿಗೆ ಪ್ರಶಸ್ತಿ

ಮುದ್ದೇಬಿಹಾಳ : ವಿಜಯಪುರದ ಕೆ.ಆರ್.ಐ.ಡಿ.ಎಲ್ ಇಲಾಖೆಯ ಇಇ ಆನಂದಸ್ವಾಮಿ ಅವರು ಇಲಾಖೆಯಲ್ಲಿ ಸಲ್ಲಿಸುತ್ತಿರುವ ಉತ್ತಮ

ತೆರಿಗೆ ವಸೂಲಾತಿಯಲ್ಲಿ ಸಾಧನೆ: ಆಲೂರು ಗ್ರಾ.ಪಂಗೆ ಪ್ರಶಸ್ತಿ ಪ್ರದಾನ

ತೆರಿಗೆ ವಸೂಲಾತಿಯಲ್ಲಿ ಸಾಧನೆ: ಆಲೂರು ಗ್ರಾ.ಪಂಗೆ ಪ್ರಶಸ್ತಿ ಪ್ರದಾನ

ನಾಲತವಾಡ : ತೆರಿಗೆ ವಸೂಲಾತಿಯಲ್ಲಿ ವಿಜಯಪುರ ಜಿಲ್ಲೆಗೆ ಮೂರನೇ ಸ್ಥಾನ ಪಡೆದುಕೊಂಡ ಹಿನ್ನೆಲೆಯಲ್ಲಿ ಮುದ್ದೇಬಿಹಾಳ

ರಾಜ್ಯದ ಟಾಪರ್ ಸ್ಥಾನಕ್ಕೆ ಒಂದೇ ಅಂಕ ಮಿಸ್ :  ವಿದ್ಯಾರ್ಥಿನಿ ಕಣ್ಣೀರು…!                                                                 ನಾಗರಬೆಟ್ಟ ಎಸ್.ಡಿ.ಕೆ ಪ್ರೌಢಶಾಲೆ ವಿದ್ಯಾರ್ಥಿನಿ ಪೂಜಾ ಲಮಾಣಿ ಸಾಧನೆ

ರಾಜ್ಯದ ಟಾಪರ್ ಸ್ಥಾನಕ್ಕೆ ಒಂದೇ ಅಂಕ ಮಿಸ್ : ವಿದ್ಯಾರ್ಥಿನಿ ಕಣ್ಣೀರು…! ನಾಗರಬೆಟ್ಟ ಎಸ್.ಡಿ.ಕೆ ಪ್ರೌಢಶಾಲೆ ವಿದ್ಯಾರ್ಥಿನಿ ಪೂಜಾ ಲಮಾಣಿ ಸಾಧನೆ

ಮುದ್ದೇಬಿಹಾಳ : ಸನ್ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶದಲ್ಲಿ ನಾಗರಬೆಟ್ಟದ ಎಸ್.ಡಿ.ಇ

ಶೋಷಿತರ ಧ್ವನಿ ಡಾ. ಬಿ.ಆರ್.ಅಂಬೇಡ್ಕರ್ – ಇಂದಿರಾ ಕುಂಬಾರ

ಶೋಷಿತರ ಧ್ವನಿ ಡಾ. ಬಿ.ಆರ್.ಅಂಬೇಡ್ಕರ್ – ಇಂದಿರಾ ಕುಂಬಾರ

​ಮುದ್ದೇಬಿಹಾಳ : ತಾಲ್ಲೂಕಿನ ಚವನಭಾವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ​ಕಾರ್ಯಕ್ರಮದ ಆರಂಭದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನಗಳನ್ನು ಅರ್ಪಿಸಲಾಯಿತು. ​ಇದೆ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ಇಂದಿರಾ ಕುಂಬಾರ ಅವರು ಮಾತನಾಡಿ,ಡಾ. ಬಿ.ಆರ್. ಅಂಬೇಡ್ಕರ್ ಅವರು ಈ ದೇಶಕ್ಕೆ ಸರ್ವಶ್ರೇಷ್ಠ ಸಂವಿಧಾನವನ್ನು ನೀಡಿದ

ಡಾ.ಬಿ.ಆರ್.ಅಂಬೇಡ್ಕರ್ ಭಾರತ ದೇಶದ ಆತ್ಮ-ಶಾಸಕ ಸಿ.ಎಸ್.ನಾಡಗೌಡ

ಡಾ.ಬಿ.ಆರ್.ಅಂಬೇಡ್ಕರ್ ಭಾರತ ದೇಶದ ಆತ್ಮ-ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಭಾರತದ ರಾಷ್ಟçಪಿತ ಮಹಾತ್ಮಾ ಗಾಂಧೀಜಿ ಆಗಿದ್ದರೆ,ಡಾ.ಅಂಬೇಡ್ಕರ್ ಅವರು ಈ ದೇಶದ ಆತ್ಮವಾಗಿದ್ದಾರೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಖಂಡ ಭಾರತ ಒಂದಾಗಿ ಉಳಿಯಲು ಮಾನವ ಧರ್ಮದ ಪರವಾಗಿ ಅಂಬೇಡ್ಕರ್ ಧ್ವನಿ ಎತ್ತಿದ್ದಾರೆ.ಅಂಬೇಡ್ಕರ್ ಅವರ ಬದುಕು ಪ್ರತಿ ದಿನ ಅಭ್ಯಾಸ ಮಾಡುವಂತಹದ್ದಾಗಿದೆ.ಅವರ ಚಿಂತನೆಗಳನ್ನು ಓದಬೇಕಿದೆ.ಒಂದು ದಿನದ ಆಚರಣೆ ಆಗಬಾರದು.ನಾವೆಲ್ಲರೂ