ಮುದ್ದೇಬಿಹಾಳ : ಉಪ ನೋಂದಣಿ ಕಛೇರಿಯಲ್ಲಿ ನೋಂದಾಯಿತವಲ್ಲದ ಡಿಜಿಟಲ್ ಈ ಸ್ಟ್ಯಾಂಪಿoಗ್ ಆನ್‌ಲೈನ್‌ನಲ್ಲಿ ಸೇವೆ ಸಲ್ಲಿಸುವ ಕುರಿತು ತರಬೇತಿ ಕಾರ್ಯಕ್ರಮ ಈಚೇಗೆ ಜರುಗಿತು.
ಜಿಲ್ಲಾ ನೋಂದಣಿ ಇಲಾಖೆಯ ಅಭಿಯಂತರ ಚಂದ್ರಶೇಖರ ಕೊಣ್ಣೂರ,ತಹಶೀಲ್ದಾರ್ ಕೀರ್ತಿ ಚಾಲಕ್, ಉಪ ನೋಂದಣಾಧಿಕಾರಿ ಸಚಿನ ಖೈನೂರ ಅವರು ತಿಳಿವಳಿಕೆ ನೀಡಿದರು.
ದಸ್ತು ಬರಹಗಾರ ಸಂಘದ ಅಧ್ಯಕ್ಷ ಎಚ್.ಆರ್.ಬಾಗವಾನ ಮಾತನಾಡಿ, ಡಿಜಿಟಲ್ ಈ ಸ್ಟ್ಯಾಂಪ ಯಾವ ರೀತಿ ಪಡೆದುಕೊಳ್ಳಬೇಕು ಎಂಬುದರ ಕುರಿತು ಮಾಹಿತಿ ನೀಡಿದರು.ವಿಜಯಪುರ ಜಿಲ್ಲಾ ನೋಂದಣಾಧಿಕಾರಿ ಡಿ.ಜಿ.ಮಠ ಅಧ್ಯಕ್ಷತೆ ವಹಿಸಿದ್ದರು.
ತಹಶೀಲ್ದಾರ್ ಕೀರ್ತಿ ಚಾಲಕ ಮಾತನಾಡಿ, ನೋಂದಣಿ ಅಲ್ಲದ ಕರಾರು ಪತ್ರ ಪ್ರತ್ಯೇಕ ಬಾಂಡ ಪಡೆಯದೆ ಸಿಟಿಜನ್ ಲಾಗಿನ ಮೂಲಕ ಪಡೆದು ಏಕಕಾಲಕ್ಕೆ ಕರಾರು ಮುದ್ರಿಸಿ ಸಾರ್ವಜನಿಕರು ಖಾತೆ ಮೂಲಕ ಹಣ ಸಂದಾಯ ಮಾಡಬಹುದಾಗಿದ್ದು ನಂತರ ಕರಾರು ಮಾಡಿದವರು ದಸ್ತು ಬರಹಗಾರರ ಮುದ್ರೆ ಅಥವಾ ನೋಟರಿಗಳನ್ನು ಮಾಡಿಸುವುದು ನಾಗರಿಕರಿಗೆ ಬಿಟ್ಟ ವಿಚಾರ ಎಂದರು.
ಡಿಜಿಟಲ್ ಸ್ಟಾö್ಯಂಪ್ ಪ್ರಯೋಜನ ಪಡೆದುಕೊಳ್ಳುವಂತೆ ತಹಶೀಲ್ದಾರ್‌ರು ತಿಳಿಸಿದರು. ಕಂದಾಯ ಇಲಾಖೆಯ ಸಿಬ್ಬಂದಿ ಎಸ್.ಬಿ.ಕಟ್ಟಿಮನಿ, ದಸ್ತು ಬರಹಗಾರರಾದ ಡಿ.ಎಚ್.ತೊಗರಿ, ರಾಜೇಂದ್ರ ಪಾವಲೆ, ಎಸ್.ಬಿ.ಕಡಿ, ಸಲೀಮ ಮುಲ್ಲಾ, ಆರ್.ಎಸ್.ಶಂಕೀನ್,ಗ್ರಾಮ ಒನ್ ಕರ್ನಾಟಕ ಒನ್ ಸಿಬ್ಬಂದಿ,ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು, ನಾಗರಿಕರು ಭಾಗವಹಿಸಿದ್ದರು. ಗಣಕ ಚಾಲಕ ಶಾಂತು ಹಿರೇಮಠ ಸ್ವಾಗತಿಸಿದರು. ಮಹಾಂತೇಶ ಬಿರಾದಾರ ವಂದಿಸಿದರು.







