ಬಾಕಿ ಬಿಲ್ ಪಾವತಿಗೆ ಆಗ್ರಹ : ಮಾ.6 ರಂದು ಬೆಂಗಳೂರಿನಲ್ಲಿ ಗುತ್ತಿಗೆದಾರರ ಬೃಹತ್ ಹೋರಾಟ

ಬಾಕಿ ಬಿಲ್ ಪಾವತಿಗೆ ಆಗ್ರಹ : ಮಾ.6 ರಂದು ಬೆಂಗಳೂರಿನಲ್ಲಿ ಗುತ್ತಿಗೆದಾರರ ಬೃಹತ್ ಹೋರಾಟ

ಮುದ್ದೇಬಿಹಾಳ : ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದೆರಡೂವರೆ ವರ್ಷಗಳಿಂದ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸದೇ ಇರುವ ಕಾರಣದಿಂದ ಗುತ್ತಿಗೆದಾರರ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ ಎಂದು ಗುತ್ತಿಗೆದಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಯ್.ಎಂ.ಪಟ್ಟಣಶೆಟ್ಟಿ ಹೇಳಿದರು.

ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಸಭಾಭವನದಲ್ಲಿ ಭಾನುವಾರ ತಾಲ್ಲೂಕು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದಲ್ಲಿ 30 ಸಾವಿರ ಕೋಟಿಗೂ ಅಧಿಕ ಬಿಲ್ ಪಾವತಿಸುವುದು ಬಾಕಿ ಉಳಿಸಿಕೊಂಡಿರುವುದರಿAದ ಎಲ್ಲ ಹಂತದ ಗುತ್ತಿಗೆದಾರರಿಗೆ ಸಂಕಷ್ಟ ತಂದೊಡ್ಡಿದೆ.ಇದು ಯಾವುದೇ ಪಕ್ಷದ ಪ್ರಾಯೋಜಿತ ಹೋರಾಟವಲ್ಲ.ಸರ್ಕಾರದ ಕಣ್ಣು ತೆರೆಸಲು ಮಾ.6 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಹೋರಾಟ ಹಮ್ಮಿಕೊಂಡಿದ್ದೇವೆ.ಬಿಲ್ ಈಗ ಮಾಡುತ್ತಾರೆ,ಆಗ ಮಾಡುತ್ತಾರೆ ಎಂದು ಜಾತಕ ಪಕ್ಷಿಗಳಂತೆ ಕಾಯ್ದು ಕೂತು ಸುಸ್ತಾಗಿದ್ದೇವೆ.ಸರ್ಕಾರದ ಕೆಲಸಗಳನ್ನು ಮಾಡಲು ಮಾಡಿದ ಸಾಲದ ಬಡ್ಡಿ ಕಟ್ಟಲು ತಮ್ಮ ಕುಟುಂಬ ಸದಸ್ಯರ ಬಂಗಾರದ ಆಭರಣಗಳನ್ನು ಒತ್ತೆ ಇಡುವ ದುಸ್ಥಿತಿ ಗುತ್ತಿಗೆದಾರರಿಗೆ ಬಂದಿದೆ.ನಮ್ಮದು ಗುತ್ತಿಗೆದಾರರ ಸಮಾಜ.ಯಾವುದೇ ಪಕ್ಷ,ಪಂಗಡ ಎಂಬುದಿಲ್ಲ.ವಿಜಯಪುರ ಜಿಲ್ಲೆಯಿಂದ ಸುಮಾರು ಒಂದು ಸಾವಿರ ಜನ ಗುತ್ತಿಗೆದಾರರು ಬೆಂಗಳೂರಿನ ಹೋರಾಟಕ್ಕೆ ತೆರಳಲಿದ್ದಾರೆ ಎಂದು ತಿಳಿಸಿದರು.

ಗುತ್ತಿಗೆದಾರರ ಜಿಲ್ಲಾ ಸಂಘದ ನಿರ್ದೇಶಕ ಆರ್.ಬಿ.ಅಸ್ಕಿ ಮಾತನಾಡಿ, ಗುತ್ತಿಗೆದಾರರ ಹಲವು ಬೇಡಿಕೆಗಳನ್ನು ಈಡೇರಿಸಲು ಈ ಹೋರಾಟ ಮಾಡಲಾಗುತ್ತಿದೆ.ಇದು ಯಾವುದೆ ಪಕ್ಷದ ವಿರುದ್ದ ಅಪಪ್ರಚಾರವಲ್ಲ.ನಮ್ಮ ಬಾಕಿ ಬಿಲ್ ಪಾವತಿಸಬೇಕು.ಇಎಂಡಿ ಸೌಲಭ್ಯ ಕೊಡುತ್ತಿಲ್ಲ.ಸಿಬಿಎಫ್ 4-5 ಸಾವಿರ ಕೋಟಿ ರೂ.ಬಾಕಿ ಉಳಿಸಿಕೊಳ್ಳಲಾಗಿದೆ.ಎಫ್.ಎಸ್.ಡಿಯನ್ನು ಶೇ.2ರಷ್ಟು ತುಂಬಿಸಿಕೊಳ್ಳಬೇಕು.ಅನುದಾನ ಲಭ್ಯತೆ ಆಧಾರದಲ್ಲಿ ಕಾಮಗಾರಿಗೆ ಟೆಂಡರ್ ಕರೆಯಬೇಕು ಎಂದು ಹೇಳಿದರು.

ಗುತ್ತಿಗೆದಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶಗೌಡ ಪಾಟೀಲ ಇಂಗಳಗೇರಿ ಮಾತನಾಡಿ, ನಾವು ಬಾಕಿ ಉಳಿದಿರುವ ಬಿಲ್ ಪಾವತಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಕಾರ್ಯ ಗುತ್ತಿಗೆದಾರರು ಮಾಡುತ್ತಿದ್ದೇವೆ.ಇದು ಶಾಂತಿಯುತ ಹೋರಾಟವಾಗಿದ್ದು ಬಿಲ್ ಪಾವತಿಗೆ ಕ್ರಮ ಜರುಗಿಸದಿದ್ದರೆ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಿ ಹೋರಾಟವನ್ನು ಉಗ್ರಸ್ವರೂಪಕ್ಕೆ ಬದಲಾಯಿಸುವ ಕುರಿತು ಚಿಂತನೆ ನಡೆಸಲು ರಾಜ್ಯ ಸಂಘ ನಿರ್ಧರಿಸಿದೆ ಎಂದು ಹೇಳಿದರು.
ಗುತ್ತಿಗೆದಾರರ ಸಂಘದ ಸದಾನಂದ ಕುಂಬಾರ, ಆರ್.ಎಂ.ಮಾವಿನಗಿಡದ, ಸಿ.ಎಸ್.ನ್ಯಾಮಣ್ಣವರ, ಎ.ಬಿ.ನರಸರೆಡ್ಡಿ, ತಾಲ್ಲೂಕಿನ ಗುತ್ತಿಗೆದಾರರಾದ ರಾಯನಗೌಡ ತಾತರೆಡ್ಡಿ, ಬಸವರಾಜ ಇಸ್ಲಾಂಪೂರ,ಶ್ರೀಶೈಲ ಮರೋಳ, ರಾಜುಗೌಡ ಕೊಂಗಿ,ಸಚಿನಗೌಡ ಪಾಟೀಲ,ಶ್ರೀಕಾಂತಗೌಡ ಪಾಟೀಲ,ಯಲ್ಲಪ್ಪ ಚಲವಾದಿ,ಶ್ರೀನಿವಾಸ ಗೌಂಡಿ ಹಲವರು ಪಾಲ್ಗೊಂಡಿದ್ದರು.

Latest News

ಶಿವಯೋಗಿಮಠ ಕುಟುಂಬದಿoದ ಆಯೋಜನೆ:                  ಮಾ.2 ರಂದು ಆರೋಗ್ಯ ಉಚಿತ  ತಪಾಸಣಾ ಶಿಬಿರ

ಶಿವಯೋಗಿಮಠ ಕುಟುಂಬದಿoದ ಆಯೋಜನೆ: ಮಾ.2 ರಂದು ಆರೋಗ್ಯ ಉಚಿತ ತಪಾಸಣಾ ಶಿಬಿರ

ಮುದ್ದೇಬಿಹಾಳ : ಶ್ರೀ ಫಕಿರೇಶ್ವರ ವಿವಿದೋದ್ಧೇಶ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಘ ಮತ್ತು ಸೇಂಟ್

ಮಾ.1 ರಂದು ಹುಲ್ಲೂರಿನಲ್ಲಿ ಎಸ್.ಎನ್.ಡಿ ಸಂಸ್ಕೃತಿ ಉತ್ಸವ,ಪ್ರತಿಭಾ ಪುರಸ್ಕಾರ

ಮಾ.1 ರಂದು ಹುಲ್ಲೂರಿನಲ್ಲಿ ಎಸ್.ಎನ್.ಡಿ ಸಂಸ್ಕೃತಿ ಉತ್ಸವ,ಪ್ರತಿಭಾ ಪುರಸ್ಕಾರ

ಮುದ್ದೇಬಿಹಾಳ : ತಾಲ್ಲೂಕಿನ ಹುಲ್ಲೂರಿನಲ್ಲಿ ಎಸ್.ಎನ್.ಡಿ.ನ್ಯಾಶನಲ್ ಪಬ್ಲಿಕ್ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಾ.1 ರಂದು

ನಾಗರಬೆಟ್ಟ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಶೇ.100ರಷ್ಟು ಹಾಜರಾತಿ

ನಾಗರಬೆಟ್ಟ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಶೇ.100ರಷ್ಟು ಹಾಜರಾತಿ

ಮುದ್ದೇಬಿಹಾಳ : ದ್ವಿತೀಯ ಪಿಯುಸಿ ಪರೀಕ್ಷೆ ರಾಜ್ಯಾದ್ಯಂತ ಶನಿವಾರದಿಂದ ಆರಂಭಗೊAಡಿದ್ದು ತಾಲ್ಲೂಕಿನ ಏಳು ಪರೀಕ್ಷಾ

ಮುದ್ದೇಬಿಹಾಳ : ಮಾ.1 ರಂದು ಗುತ್ತಿಗೆದಾರರ ಪೂರ್ವಭಾವಿ ಸಭೆ

ಮುದ್ದೇಬಿಹಾಳ : ಮಾ.1 ರಂದು ಗುತ್ತಿಗೆದಾರರ ಪೂರ್ವಭಾವಿ ಸಭೆ

ಮುದ್ದೇಬಿಹಾಳ : ಬೆಂಗಳೂರಿನಲ್ಲಿ ಮಾ.6 ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಗುತ್ತಿಗೆದಾರರ ಪ್ರತಿಭಟನೆ ಹಿನ್ನೆಲೆಯಲ್ಲಿ ಮಾ.1

ಜಾಗೃತಿಯೊಂದೇ ಏಡ್ಸ್ ನಿಯಂತ್ರಣಕ್ಕೆ ಮಾರ್ಗ – ಅನಸೂಯಾ ತೇರದಾಳ

ಜಾಗೃತಿಯೊಂದೇ ಏಡ್ಸ್ ನಿಯಂತ್ರಣಕ್ಕೆ ಮಾರ್ಗ – ಅನಸೂಯಾ ತೇರದಾಳ

ಮುದ್ದೇಬಿಹಾಳ : ಇಂದಿನ ಯುವಕ, ಯುವತಿಯರು ಏಡ್ಸ್ ಹಾಗೂ ಟಿಬಿಯಂತ ಮಾರಕ ರೋಗಗಳ ಬಗ್ಗೆ ಅರಿವು ಹೊಂದಿ ಅವುಗಳ ಬಾರದಂತೆ ಜಾಗೃತಿಯಿಂದಿರಬೇಕು ಎಂದು ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನಸೂಯಾ ತೇರದಾಳ ಹೇಳಿದರು. ಪಟ್ಟಣದ ಮಾದರಿ ಪಜಾ/ಪಪಂ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಡಲಗೇರಿಯ ರೆಡ್ ಕ್ರಾಸ್ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಶುಕ್ರವಾರ ಎಚ್‌ಐವಿ / ಏಡ್ಸ್. ಟಿಬಿ ಮತ್ತು ರಕ್ತದಾನದ ಕುರಿತು ಜಾಗೃತಿ

ಹೆಸರು ನೋಂದಾಯಿಸಲು ಸೂಚನೆ:ಮಾ.21 ರಂದು ಉಚಿತ ಸಾಮೂಹಿಕ ವಿವಾಹ

ಹೆಸರು ನೋಂದಾಯಿಸಲು ಸೂಚನೆ:ಮಾ.21 ರಂದು ಉಚಿತ ಸಾಮೂಹಿಕ ವಿವಾಹ

ಮುದ್ದೇಬಿಹಾಳ : ಈಗಾಗಲೇ ತಾಲ್ಲೂಕಿನಲ್ಲಿ ಶಿಕ್ಷಣ ಕ್ರಾಂತಿಯ ಮೂಲಕ ಕಡು ಬಡವರ ಮಕ್ಕಳಿಗೆ ಕೋವಿಡ್ ಕಾಲಘಟ್ಟದಲ್ಲಿ ಎರಡು ಕೋಟಿ ರೂ.ಗಳಿಗೂ ಅಧಿಕ ವೆಚ್ಚದ ಶಿಕ್ಷಣವನ್ನು ಉಚಿತವಾಗಿ ನೀಡಿ ಜನಮನ್ನಣೆ ಗಳಿಸಿರುವ ಸಮಾಜ ಸೇವಕ ಎಂ.ಎನ್.ಮದರಿ ಅವರು ಖಿಲಾರಹಟ್ಟಿ ಗ್ರಾಮದಲ್ಲಿ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಶ್ರೀ ಬೀರಲಿಂಗೇಶ್ವರ ಹಾಗೂ ಕಾಡಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಮಾ.21 ರಂದು ಖಿಲಾರಹಟ್ಟಿಯಲ್ಲಿ ಮದರಿ ಅವರ ನೇತೃತ್ವದಲ್ಲಿ ಜರುಗಲಿರುವ