ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಮುದ್ದೇಬಿಹಾಳ : ಗ್ರಾಮೀಣ ರಸ್ತೆಗಳ ಸುಧಾರಣೆಗೆ ರಾಜ್ಯ ಸರ್ಕಾರ ಹಂತ ಹಂತವಾಗಿ ಆದ್ಯತೆ ನೀಡುತ್ತಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ತಾಲ್ಲೂಕು ಯರಗಲ್ ಗ್ರಾಮದಲ್ಲಿ ಸನ್ 2025-26ನೆ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಯರಗಲ್ ಗ್ರಾಮದಿಂದ ದೇವೂರ ರಸ್ತೆ ಕಾಮಗಾರಿಗೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಹಿಂದಿನ ಸರ್ಕಾರದವರು ಆರ್ಥಿಕ ಶಿಸ್ತು ಕಾಪಾಡದೇ ಮನಬಂದOತೆ ಬಾಕಿ ಉಳಿಸಿ ಹೋಗಿದ್ದರಿಂದ ನಮ್ಮ ಸರ್ಕಾರದ ಅವಧಿಯಲ್ಲಿ ಅದನ್ನು ಪಾವತಿಸುವ ಕೆಲಸ ಆಗಿದೆ.ಶಾಸಕರಿಗೆ ವಿಶೇಷ ಅನುದಾನವನ್ನು ನೀಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದರಿಂದ ಸದ್ಯಕ್ಕೆ ಹೊಸ ಕೆಲಸಗಳಿಗೆ ಅನುದಾನ ಸಿಗುವುದು ಕಷ್ಟ.ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಕೊಡುವುದನ್ನು ಮುಂದುವರೆಸಬೇಕು ಎಂದರು.

ಗ್ರಾಪO ಮಾಜಿ ಸದಸ್ಯ ಬಸವರಾಜ ಡಮನಾಲ ಮಾತನಾಡಿ, ಯರಗಲ್ ದಿಂದ ದೇವೂರ ಗ್ರಾಮಕ್ಕೆ ಹೋಗುವ ರಸ್ತೆ ನಿರ್ಮಾಣಕ್ಕೆ ಬೇಡಿಕೆ ಬಹಳ ದಿನಗಳಿಂದ ಇತ್ತು.ಶಾಸಕರ ವಿಶೇಷ ಪ್ರಯತ್ನದಿಂದ ಈ ಕೆಲಸ ಆಗುತ್ತಿರುವುದು ಎಲ್ಲರ ಹರ್ಷಕ್ಕೆ ಕಾರಣವಾಗಿದೆ ಎಂದರು.

ಕೆ.ಆರ್.ಡಿ.ಎಲ್ ಜೆಇ ನಾಗರಾಜ ಬಿರಾದಾರ ಮಾತನಾಡಿ, 4 ಕೋಟಿ ರೂ.ವೆಚ್ಚದಲ್ಲಿ 8 ಕಿ.ಮೀ ರಸ್ತೆ ನಿರ್ಮಿಸಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಾಲಾಜಿ ಸಕ್ಕರೆ ನಿರ್ದೇಶಕರಾದ ರಾಹುಲಗೌಡ ಪಾಟೀಲ, ಶ್ರೀನಿವಾರ ಅರಕೇರಿ, ಗ್ರಾಮದ ಮುಖಂಡರಾದ ಎಂ.ಎಸ್.ದೇಶಮುಖ, ವಿ.ಎಸ್.ಕಡಿ,ಕೆ.ಆರ್.ಡಿ.ಎಲ್ ಎಇ ವಿಶಾಲ ಬರ್ಹಾನಪುರ,ಗುತ್ತಿಗೆದಾರ ಮುತ್ತಿನಶೆಟ್ಟಿ ಗೂಳಿ, ಮಾರುತಿ ಗುರವ ಮೊದಲಾದವರು ಇದ್ದರು.

ಇದೇ ಸಮಯದಲ್ಲಿ ಯರಗಲ್ ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಗಳ ದುರಸ್ತಿಗೆ ,ಎಸ್.ಸಿ ಕಾಲೋನಿಯಲ್ಲಿ ಸಮುದಾಯ ಭವನಕ್ಕೆ ಅನುದಾನ ಒದಗಿಸುವಂತೆ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.

Latest News

9.49 ಲಕ್ಷ ರೂ.ಲಾಭ :                                                           ಹಡಲಗೇರಿ ಪಿಕೆಪಿಎಸ್‌ನಿಂದ 4.47 ಕೋಟಿ ರೂ.ಸಾಲ ಹಂಚಿಕೆ

9.49 ಲಕ್ಷ ರೂ.ಲಾಭ : ಹಡಲಗೇರಿ ಪಿಕೆಪಿಎಸ್‌ನಿಂದ 4.47 ಕೋಟಿ ರೂ.ಸಾಲ ಹಂಚಿಕೆ

ಮುದ್ದೇಬಿಹಾಳ : ಈ ಆರ್ಥಿಕ ವರ್ಷದಲ್ಲಿ ಒಟ್ಟು 4.47 ಕೋಟಿ ರೂ.ಸಾಲ ರೈತರಿಗೆ ಹಂಚಿಕೆ

ಮುದ್ದೇಬಿಹಾಳ ತೀವ್ರ ಬರಪೀಡಿತ ತಾಲ್ಲೂಕು ಘೋಷಣೆಗೆ ಅರ್ಹ-ಶ್ರೀಶೈಲ್ ಮರೋಳ

ಮುದ್ದೇಬಿಹಾಳ ತೀವ್ರ ಬರಪೀಡಿತ ತಾಲ್ಲೂಕು ಘೋಷಣೆಗೆ ಅರ್ಹ-ಶ್ರೀಶೈಲ್ ಮರೋಳ

ಮುದ್ದೇಬಿಹಾಳ : ಪ್ರಸಕ್ತ ವರ್ಷ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಭೀಕರ ಬರಗಾಲವಿದ್ದು ರೈತರು ಸಂಕಷ್ಟದಲ್ಲಿದ್ದು ಶಾಸಕ

ಬಸರಕೋಡ ಪಿಕೆಪಿಎಸ್‌ನ 51ನೇ ವಾರ್ಷಿಕ ಸಭೆ:                       ಮಾಜಿ ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ದಾವೆಗೆ ತೀರ್ಮಾನ-ಎಚ್.ಬಿ.ಮೇಟಿ

ಬಸರಕೋಡ ಪಿಕೆಪಿಎಸ್‌ನ 51ನೇ ವಾರ್ಷಿಕ ಸಭೆ: ಮಾಜಿ ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ದಾವೆಗೆ ತೀರ್ಮಾನ-ಎಚ್.ಬಿ.ಮೇಟಿ

ಮುದ್ದೇಬಿಹಾಳ : ನಮ್ಮ ಸಂಘದ ಹಿಂದಿನ ಕಾರ್ಯದರ್ಶಿ ಮಾಡಿದ ಅವ್ಯವಹಾರದಿಂದ ಸಂಘಕ್ಕೆ ಲಾಭಾಂಶ ಕಡಿಮೆಯಾಗಿದೆ.ಅವರ

16.17 ಲಕ್ಷ ರೂ.ಲಾಭ :                                                     ಮುದ್ದೇಬಿಹಾಳ ಪಿಕೆಪಿಎಸ್‌ನಿಂದ 8.18 ಕೋಟಿ ರೂ ಸಾಲ ಹಂಚಿಕೆ

16.17 ಲಕ್ಷ ರೂ.ಲಾಭ : ಮುದ್ದೇಬಿಹಾಳ ಪಿಕೆಪಿಎಸ್‌ನಿಂದ 8.18 ಕೋಟಿ ರೂ ಸಾಲ ಹಂಚಿಕೆ

ಮುದ್ದೇಬಿಹಾಳ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿoದ ಸನ್ 2025-26 ನೇ ಸಾಲಿನಲ್ಲಿ

ಮೂರುವರೆ ವರ್ಷದಲ್ಲಿ 500 ಕಾರ್ಯಕರ್ತರ ಮೇಲೆ ಎಫ್.ಐ.ಆರ್-ನಡಹಳ್ಳಿ ಹೇಳಿಕೆ

ಮೂರುವರೆ ವರ್ಷದಲ್ಲಿ 500 ಕಾರ್ಯಕರ್ತರ ಮೇಲೆ ಎಫ್.ಐ.ಆರ್-ನಡಹಳ್ಳಿ ಹೇಳಿಕೆ

ಮುದ್ದೇಬಿಹಾಳ : ತಾಲ್ಲೂಕು ಬರಪೀಡಿತ ಎಂದು ಘೋಷಣೆಗೆ ಸ್ಥಳ ಪರಿಶೀಲನೆಗೆ ಆದೇಶ ಮಾಡಿದ್ದಾರೆ.ಅಧಿಕೃತವಾಗಿ ಬರಪೀಡಿತ ತಾಲ್ಲೂಕು ಇನ್ನೂವರೆಗೂ ಘೋಷಣೆಯಾಗಿಲ್ಲ.ಎರಡು ದಿನಗಳ ಕಾಲ ಮಣ್ಣಿನ ತೇವಾಂಶ,ಬೆಳೆಯ ಗುಣಮಟ್ಟ,ವಾತಾವರಣದಲ್ಲಿ ತೇವಾಂಶ ಎಷ್ಟಿದೆ ಎಂದು ಸರ್ವೆ ಮಾಡಿ ಸರ್ಕಾರಕ್ಕೆ ವರದಿ ಕಳಿಸಬೇಕು.ಈಗ ಸಾಧಾರಣ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿದ್ದಾರೆ ಎಂದು ಮಾಜಿ ಶಾಸಕ,ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು. ಪಟ್ಟಣದ ದಾಸೋಹ ನಿಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಒಂದು ದಿನವೂ

ಮುದ್ದೇಬಿಹಾಳ ಬರಪೀಡಿತ ತಾಲ್ಲೂಕು ಘೋಷಣೆ ; ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಮುದ್ದೇಬಿಹಾಳ ಬರಪೀಡಿತ ತಾಲ್ಲೂಕು ಘೋಷಣೆ ; ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಮುದ್ದೇಬಿಹಾಳ : ಬರಪೀಡಿತ ತಾಲ್ಲೂಕು ಪಟ್ಟಿಯಲ್ಲಿ ಮುದ್ದೇಬಿಹಾಳ ತಾಲ್ಲೂಕು ಘೋಷಣೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು,ನಾಡಗೌಡರ ಅಭಿಮಾನಿಗಳು ಗುರುವಾರ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳ ಮೂರನೇ ಪಟ್ಟಿ ಬಿಡುಗಡೆಯಾಗುತ್ತಲೇ ಅದರಲ್ಲಿ ಮುದ್ದೇಬಿಹಾಳ ತಾಲ್ಲೂಕು ಹೆಸರು ಪ್ರಕಟಗೊಳ್ಳುತ್ತಿದ್ದಂತೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಮುಖಂಡರು ಸರ್ಕಾರಕ್ಕೆ,ಸಿಎಂ,ಕoದಾಯ ಮಂತ್ರಿ ಹಾಗೂ ಶಾಸಕ ಸಿ.ಎಸ್.ನಾಡಗೌಡರಿಗೆ ಜಯಘೋಷಗಳನ್ನು ಹಾಕಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ