ಮುದ್ದೇಬಿಹಾಳ : ತಾಲ್ಲೂಕಿನ ಹುಲ್ಲೂರು ಗ್ರಾಮದ ಚೆನ್ನಬಸವ ಶ್ರೀ ಏಜ್ಯೂಕೇಷನ ರೂರಲ್ ಕಲ್ಚರಲ್ ಸೊಸೈಟಿಯಿಂದ ಪ್ರತಿ ವರ್ಷ ಕೊಡಮಾಡುವ ರಾಜ್ಯಮಟ್ಟದ ಚೆನ್ನಬಸವ ಶ್ರೀ ಪ್ರಶಸ್ತಿಗೆ ಮಾಧ್ಯಮ, ಸಂಕೀರ್ಣ,ಶಿಕ್ಷಣ,ಸಾಮಾಜಿಕ ಹೋರಾಟ ಕ್ಷೇತ್ರಗಳಿಂದ ಒಟ್ಟು 30 ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುದ್ದೇಬಿಹಾಳ ತಾಲ್ಲೂಕಿನ ಹಂಡರಗಲ್ದಲ್ಲಿ ತ್ರಿಕೂಟೇಶ್ವರ ದೇವಸ್ಥಾನದ ಉಳಿವು,ಜೀರ್ಣೋದ್ಧಾರಕ್ಕೆ ಹೋರಾಟ ಮಾಡಿದ ಕುಮಾರಸ್ವಾಮಿ ಹಿರೇಮಠ, ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಜನರಕೂಗು ಸುದ್ದಿವಾಹಿನಿಯ ಸಂಸ್ಥಾಪಕ ಗುಲಾಮಮೊಹ್ಮದ ದಫೇದಾರ, ಪ್ರಜಾವಾಣಿ ದಿನಪತ್ರಿಕೆ ವರದಿಗಾರ ಸಾಗರಕುಮಾರ ಉಕ್ಕಲಿ,ದಲಿತಪರ ಹೋರಾಟಗಾರ ಹರೀಶ ನಾಟೀಕಾರ ಹಾಗೂ
ಶೈಕ್ಷಣಿಕ ಕ್ಷೇತ್ರದಿಂದ ಎಸ್.ಎಂ.ಜೋಗಿನ(ಅಡವಿ ಸೋಮನಾಳ), ಎಸ್.ಪಿ.ಢವಳಗಿ(ಆಲೂರ),ರೇಷ್ಮಾ ಶೇಖ(ಸಾಲೋಡಗಿ),ವೀರೇಶ ಹುಲಮನಿ(ಬಳಬಟ್ಟಿ),ಕಾಶೀನಾಥ ಸೂಳಿಭಾವಿ(ಬಸರಕೋಡ),VIJAYALAXMI NIDAGUNDI (ಢವಳಗಿ),ಎo.ಕೆ.ಪೂಜಾರಿ (ಹಡಲಗೇರಿ),ಜಯಶ್ರೀ ಕರಡ್ಡಿ(ಇಂಗಳಗೇರಿ),ಎಸ್.ಜಿ.ನೀರಲಗಿ(ಕೊಣ್ಣೂರ),ಸoಗಣ್ಣ ಹೊಸಮನಿ(ಮಡಿಕೇಶ್ವರ),ಜ್ಯೋತಿ ಬಿರಾದಾರ(ಮಿಣಜಗಿ),ಎಸ್.ಎಸ್.ಪಾಟೀಲ(ಮುದ್ದೇಬಿಹಾಳ),ಬಸಮ್ಮ ಅಮಾತೆಗೌಡರ(ನಾಲತವಾಡ), VIJAYALAXM BHOVI (ರಕ್ಕಸಗಿ), ಎಸ್.ಐ.ಪತ್ತಾರ(ತಾಳಿಕೋಟಿ), ವಿ.ಎಸ್.ತೆಗ್ಗಿ(ತಂಗಡಗಿ), ಜಿ.ಬಿ.ಬಿರಾದಾರ(ತುಂಬಗಿ), ಭೀಮಪ್ಪ ಮಾದರ(ಹುಲ್ಲೂರ), ಎಂ.ಬಿ.ಪಾಟೀಲ(ಹಿರೇಮುರಾಳ), ಆರ್.ಎಂ.ಲಮಾಣಿ(ಯರಝರಿ),ಬಿ.ಎ.ಉಡಚಣಕರ(ಹುಲ್ಲೂರ ಉರ್ದು),ವಾಯ್.ಎಸ್.ಖಾದ್ರಿ(ಬಿದರಕುಂದಿ ಉರ್ದು),ಎಚ್.ಎಂ.ಮಕಾನದಾರ(ಕೊಣ್ಣೂರ ಉರ್ದು),ಯಮನಪ್ಪ ಬಾಗೇವಾಡಿ(ಹುಲ್ಲೂರ), ಎಂ.ಬಿ.ಗುಡಗುoಟಿ(ಹಡಲಗೇರಿ) ಸಾಮಾಜಿಕ ಕ್ಷೇತ್ರದಿಂದ ಕುಂಟೋಜಿಯ ಯಶಸ್ವಿನಿ ಮಹಿಳಾ ಸಂಘಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸಾಧಕರಿಗೆ ಮಾ.15 ರಂದು ಹುಲ್ಲೂರಿನ ನ್ಯಾಶನಲ್ ಎಸ್.ಎನ್.ಡಿ.ಪಬ್ಲಿಕ್ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕೊಪ್ಪ ತಿಳಿಸಿದ್ದಾರೆ.







