ಮುದ್ದೇಬಿಹಾಳ : ಬಿರು ಬಿಸಿಲಿನ ತಾಪದ ತೀವ್ರತೆಗೆ ಗುಡಿಸಲು ಹಾಗೂ ಜಾನುವಾರು ಕಟ್ಟುವ ಶೆಡ್‌ಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಎರಡು ಮೇಕೆ ಹಾಗೂ 20ಕ್ಕೂ ಅಧಿಕ ಕೋಳಿಗಳು ಸಜೀವ ದಹನಗೊಂಡಿರುವ ಘಟನೆ ತಾಲ್ಲೂಕಿನ ಅಡವಿ ಹುಲಗಬಾಳದಲ್ಲಿ ಶನಿವಾರ ನಡೆದಿದೆ.
ಅಡವಿ ಹುಲಗಬಾಳ ಗ್ರಾಮದ ಮೋತಿಲಾಲ ರಾಠೋಡ ಅವರ ಹೊಲದಲ್ಲಿದ್ದ ವಾಸಕ್ಕಿದ್ದ ಶೆಡ್ ಹಾಗೂ ಪ್ರಾಣಿಗಳಿದ್ದ ಶೆಡ್‌ಗೆ ಬೆಂಕಿ ತಗುಲಿದೆ.ಈ ವೇಳೆ 23 ಮೇಕೆಗಳ ಪೈಕಿ 2 ಮೇಕೆಗಳು ಹಾಗೂ 20ಕ್ಕೂ ಅಧಿಕ ಕೋಳಿಗಳು ಸಜೀವವಾಗಿ ದಹನಗೊಂಡಿವೆ.ಗುಡಿಸಲಿನಲ್ಲಿದ್ದ ಮಹಿಳೆ Lxmibai ರಾಠೋಡ ಅವರಿಗೆ ಅಲ್ಪ ಸುಟ್ಟ ಗಾಯಗಳಾಗಿವೆ.ಕೆಲವು ಮೇಕೆಗಳಿಗೂ ಸುಟ್ಟಿರುವ ಗಾಯಗಳಾಗಿವೆ.
ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ತೆರಳಿದ್ದ ಮುದ್ದೇಬಿಹಾಳ ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ ಬಸವರಾಜ ಬಿರಾದಾರ ನೇತೃತ್ವದಲ್ಲಿ ಸಿಬ್ಬಂದಿ ಜಾವೀದ ಜಮಖಂಡಿ, ನಾಗೇಶ ರಾಠೋಡ, ಸಿದ್ದಣ್ಣ ಪೊಲೇಸಿ, ಶಿವಾನಂದ ಭೋವಿ, ಸಂತೋಷ ಲಮಾಣಿ, ಸುಭಾಷ ಗೌಡರ,ಶ್ರೀಶೈಲ್ ಪಾಟೀಲ, ಸುನಿಲ್ ನಾಯಕ ಬೆಂಕಿ ನಂದಿಸಿ ಹೆಚ್ಚಿನ ಹಾನಿ ಆಗುವುದನ್ನು ತಡೆದಿದ್ದಾರೆ.ಬಿಸಿಲಿನ ಹೊಡೆತಕ್ಕೆ ಜಾನುವಾರುಗಳು ತತ್ತರಿಸುತ್ತಿವೆ.







