ಮುದ್ದೇಬಿಹಾಳ : ತಾಲ್ಲೂಕಿನ ಬಳಬಟ್ಟಿ ಗ್ರಾಮದಲ್ಲಿ ಶ್ರೀ ನಾಗಲಿಂಗೇಶ್ವರ, ಮಾರುತೇಶ್ವರ ಹಾಗೂಗ್ರಾಮ ದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ (ಪುಣೆ ತಾಲೀಮು) ರಿಯಾಜ ಮುಳಕೋಟೆ ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಪಂದ್ಯಾವಳಿಯಲ್ಲಿ ಒಟ್ಟು 30 ಜೋಡಿ ಕುಸ್ತಿ ಪಟುಗಳು ರಾಜ್ಯದ ವಿವಿಧ ಕಡೆಯಿಂದ ಪಾಲ್ಗೊಂಡಿದ್ದರು. ಬಳಬಟ್ಟಿ ಗ್ರಾಮದ ಮಾಜಿ ಕುಸ್ತಿಪಟು ಕರಿಯಪ್ಪ ಆಸಂಗಿ ಹಾಗೂ ಯಮನಪ್ಪ ಮಾಳಗೊಂಡ ಇವರ ನೇತೃತ್ವದಲ್ಲಿ ಭರ್ಜರಿಯಾಗಿ ಕುಸ್ತಿ ಪಂದ್ಯಗಳು ನಡೆದವು.
ಒನ್ ನಂಬರ ಕುಸ್ತಿ ಪಂದ್ಯ ಒಂದು ಗಂಟೆಗಳ ಕಾಲ ಪ್ರಕಾಶ ಇಂಗಳಗಿ (ಮೇಲಮಟ್ಟಿ ತಾಲಿಮ) ಹಾಗೂ ರಿಯಾಜ ಮುಳಕೋಟ (ಪುಣೆ ತಾಲಿಮ) ಇವರ ಮದ್ಯ ನಡೆದು ರಿಯಾಜ ಮುಳಕೋಟ ಬಹುಮಾಮವನ್ನು ತಮ್ಮ ಮುಡಿಗೇರಿಸಿಕೊಂಡರು.ಗೆಲುವು ಸಾಧಿಸಿದ ಕುಸ್ತಿಪಟು ರಿಯಾಜ್‌ಗೆ 25000 ಸಾವಿರ ನಗದು ಹಾಗೂ ಬೆಳ್ಳಿ ಗದೆ ನೀಡಿ ಸನ್ಮಾನಿಸಲಾಯಿತು.ಅಲ್ಲದೇ ಎರಡನೇ ಸ್ಥಾನ ಪಡೆದ ಪ್ರಕಾಶ ಇಂಗಳಗಿ 20000 ನಗದು ಕೊಟ್ಟು ಪುರಸ್ಕರಿಸಲಾಯಿತು.
ಗ್ರಾಮದ ಹಿರಿಯರಾದ ಭೀಮಣ್ಣ ದಡ್ಟಿ, ಹಣಮಂತ ಹುಗ್ಗಿ,ಹುಲ್ಲೂರಿನ ನ್ಯಾಶನಲ್ ಎಸ್.ಎನ್.ಡಿ ಪಬ್ಲಿಕ್ ಶಾಲೆ ಅಧ್ಯಕ್ಷ ಎಮ್.ಎಸ್.ಕೊಪ್ಪ, ಮುತ್ತಪ್ಪ ಇಟಗಿ , ಹಣಮಂತ ಕಲಾದಗಿ, ವಾಯ್.ಎಲ್. ಗಣಿ, ಆರ್.ಎಸ್.ಪಾಟೀಲ, ಎಸ್.ಬಿ. ಕುಮಟಗಿ, ಎನ್.ಎಸ್.ಇಟಗಿ, ಸುರೇಶ ಹುಗ್ಗಿ , ಹನಮಂತ ಚಿಮ್ಮಲಗಿ , ನಿಂಗಪ್ಪ ಗಣಿ ಇದ್ದರು.







