ಸಚಿವ ಸ್ಥಾನಕ್ಕಾಗಿ ಮುದ್ದೇಬಿಹಾಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ; ಶಾಸಕ ನಾಡಗೌಡರಿಗೆ ಸಚಿವ ಸ್ಥಾನ ನೀಡದಿದ್ದರೆ ಪಕ್ಷತ್ಯಾಗ

ಸಚಿವ ಸ್ಥಾನಕ್ಕಾಗಿ ಮುದ್ದೇಬಿಹಾಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ; ಶಾಸಕ ನಾಡಗೌಡರಿಗೆ ಸಚಿವ ಸ್ಥಾನ ನೀಡದಿದ್ದರೆ ಪಕ್ಷತ್ಯಾಗ

ಮುದ್ದೇಬಿಹಾಳ : ಆರು ಬಾರಿ ಶಾಸಕರಾಗಿರುವ ರಾಜ್ಯದ ಅತ್ಯಂತ ಸರಳ ಸಜ್ಜನಿಕೆಯ ಹಿರಿಯ ರಾಜಕಾರಣಿ,ಯಾವುದೇ ಕಳಂಕವಿಲ್ಲದ ವ್ಯಕ್ತಿತ್ವ ಹೊಂದಿರುವ ಅಜಾತಶತ್ರು ಎಂದೇ ಹೆಸರಾಗಿರುವ ಶಾಸಕ ಸಿ.ಎಸ್.ನಾಡಗೌಡರಿಗೆ ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ಸಂಪುಟ ವಿಸ್ತರಣೆಯಲ್ಲಿ ಆದ್ಯತೆ ನೀಡಬೇಕು.ಇಲ್ಲದಿದ್ದರೆ ಕಾರ್ಯಕರ್ತರಿಂದ ಪಕ್ಷತ್ಯಾಗ ನಡೆಯಲಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಸುರೇಶಗೌಡ ಪಾಟೀಲ(ಇಂಗಳಗೇರಿ) ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಮುದ್ದೇಬಿಹಾಳ ಬಂದ್ ಕರೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು, ವ್ಯಾಪಾರಸ್ಥರಿoದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ನಲವತ್ತು ವರ್ಷಗಳ ಕಾಲ ಅವರು ಸಕ್ರಿಯವಾಗಿ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ.ಮುದ್ದೇಬಿಹಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಂಡುಕೊoಡಿರುವುದೇ ನಾಡಗೌಡರಿಂದ.ಆದರೆ ಅವರಿಗೆ ನಿರಂತರವಾಗಿ ಪಕ್ಷದಿಂದ ಅನ್ಯಾಯವಾಗುತ್ತಿದೆ ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಬಾಪುರಾವ್ ದೇಸಾಯಿ ಹಡಗಲಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಮಾತನಾಡಿ, ಹೈಕಮಾಂಡ್‌ನ ವರಿಷ್ಠರಾದ ಸೋನಿಯಾ ಗಾಂಧಿ,ರಾಹುಲ್ ಗಾಂಧಿ,ಮಲ್ಲಿಕಾರ್ಜುನ ಖರ್ಗೆ,ಉಸ್ತುವಾರಿ ರಣದೀಪ ಸುರ್ಜೇವಾಲಾ, ಸಿಎಂ ಡಿ.ಕೆ.ಶಿವಕುಮಾರ,ಪಕ್ಷದ ಅಧ್ಯಕ್ಷ ಬಿ.ಕೆ.ಹರಿಪ್ರಸಾದ,ಮಾಜಿ ಸಿಎಂ ಸಿದ್ಧರಾಮಯ್ಯನವರು ಪ್ರಜಾಧ್ವನಿ ಸಮಾಜವೇಶದಲ್ಲಿ ಮಾತು ಕೊಟ್ಟಂತೆ ನಾಡಗೌಡರನ್ನು ಮಂತ್ರಿ ಮಾಡಿ ಕಾರ್ಯಕರ್ತರು,ಕ್ಷೇತ್ರದ ಮತದಾರರ ನಂಬಿಕೆಯನ್ನು ಉಳಿಸಿಕೊಳ್ಳಬೇಕು.ಇಲ್ಲದಿದ್ದಲ್ಲಿ ಪಕ್ಷದ ಎಲ್ಲ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸುತ್ತೇವೆ ಎಂದು ಹೇಳಿದರು.

ತಾಳಿಕೋಟಿಯ ಮುಸ್ಲಿಂ ಸಮಾಜದ ಧಾರ್ಮಿಕ ಮುಖಂಡ ಸಯ್ಯದ ಶಕೀಲ್‌ಅಹ್ಮದ ಖಾಜಿ ಮಾತನಾಡಿ, ಎಸ್.ಎಂ.ಕೃಷ್ಣಾ,ಎo.ವೀರಪ್ಪಮೊಯ್ಲಿ,ಎಸ್.ಬoಗಾರಪ್ಪ,ಸಿದ್ಧರಾಮಯ್ಯನವರ ಅವಧಿಯಲ್ಲಿ ಶಾಸಕರಾಗಿ ಕಾರ್ಯನಿರ್ವಹಿಸಿರುವ ಸರಳ ಸಜ್ಜನಿಕೆಯ ರಾಜಕಾರಣಿ ನಾಡಗೌಡರು.ಕಾಂಗ್ರೆಸ್ ಹೈಕಮಾಂಡ್ ನಾಡಗೌಡರನ್ನು ಮಂತ್ರಿ ಮಾಡಿದ್ದಾದರೆ ಕಾಂಗ್ರೆಸ್ ಸರ್ಕಾರಕ್ಕೆ,ಡಿಕೆಶಿ ಸಂಪುಟಕ್ಕೆ ಗೌರವ ಬರಲಿದೆ.ಸಂಪುಟದಲ್ಲಿ ಸ್ಥಾನ ನೀಡದಿದ್ದರೆ ಬೆಂಗಳೂರು,ದೆಹಲಿಯವರೆಗೂ ಕಾರ್ಯಕರ್ತರು ವರಿಷ್ಠರ ಮೇಲೆ ಒತ್ತಡ ಹಾಕಲು ಹಿಂಜರಿಯುವುದಿಲ್ಲ.ಪಕ್ಷದಿoದ ನಾಡಗೌಡರನ್ನು ಗುರುತಿಸದಿದ್ದರೆ ಸಾಮೂಹಿಕವಾಗಿ ಪಕ್ಷತ್ಯಾಗ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಹಿರಿಯ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ವಾಯ್.ಎಚ್.ವಿಜಯಕರ್,ಬಿ.ಎಸ್.ಪಾಟೀಲ ಯಾಳಗಿ, ಗ್ಯಾರಂಟಿ ಸಮೀತಿ ತಾಲ್ಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ,ವರ್ತಕರಾದ ಶರಣು ದೇಗಿನಾಳ,ಬಸವರಾಜ ಗೋನಾಳ, ಯುವ ಮುಖಂಡ ತಿಪ್ಪಣ್ಣ ದೊಡಮನಿ,ಮಹಿಳಾ ಘಟಕದ ಅಧ್ಯಕ್ಷೆ ಅಕ್ಷತಾ ಚಲವಾದಿ,ಸರಸ್ವತಿ ಪೀರಾಪೂರ,ಮಹ್ಮದರಫೀಕ ಶಿರೋಳ ಮತ್ತಿತರರು ಮಾತನಾಡಿದರು.
ಬಸವೇಶ್ವರ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿದ ಕಾರ್ಯಕರ್ತರು,ನಾಡಗೌಡರಿಗೆ ಸಚಿವ ಸ್ಥಾನ ಈ ಬಾರಿ ನೀಡಲೇಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ತಂದರು. ಮುಖoಡರಾದ ಶ್ರೀಶೈಲ ಮರೋಳ, ರಾಜುಗೌಡ ಕೊಂಗಿ,ಬಸವರಾಜ ಇಸ್ಲಾಂಪೂರ,ಎ.ಗಣೇಶ ನಾರಾಯಣಸ್ವಾಮಿ,ಹೆಸ್ಕಾಂ ಗ್ರಾಹಕರ ಸಲಹಾ ಸಮಿತಿ ನಾಮನಿರ್ದೇಶಿತ ಸದಸ್ಯ ಸಿಕಂದರ್ ಜಾನ್ವೇಕರ,ಎಸ್ಸಿ ಮೋರ್ಚಾ ಅಧ್ಯಕ್ಷ ಶ್ರೀಕಾಂತ ಚಲವಾದಿ,ಶರಣಬಸ್ಸು ಚಲವಾದಿ,ಹಣಮಂತ ಕುರಿ,ಹುಸೇನ್ ಮುಲ್ಲಾ, ಸಂಗಣ್ಣ ಮೇಲಿನಮನಿ,ಸದು ಮಠ,ಎಸ್.ಎಸ್.ಮಾಲಗತ್ತಿ,ಕೆ.ಎಸ್.ಪಾಟೀಲ ಜಮ್ಮಲದಿನ್ನಿ,ಅಶೋಕ ಚಟ್ಟೇರ,ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಮಲ್ಲು ಅಪರಾಧಿ,ಅಮರೇಶ ಗೂಳಿ,ಬಾಪುಗೌಡ ಪೀರಾಪೂರ,ಮಹಿಳಾ ಘಟಕದ ಪದಾಧಿಕಾರಿಗಳಾದ ಕಮಲಾ ಭಜಂತ್ರಿ,ಹುಸೇನಬಿ ವಾಲೀಕಾರ,ನೀಲಮ್ಮ ಚಲವಾದಿ,ಮಾಬುಬಿ ಬಾಗವಾನ, ಸೇರಿದಂತೆ ಪ್ರತಿಭಟನೆಯಲ್ಲಿ ಮುದ್ದೇಬಿಹಾಳ,ತಾಳಿಕೋಟಿ,ನಾಲತವಾಡ ಭಾಗಗಳಿಂದ ಕಾಂಗ್ರೆಸ್ ಕಾರ್ಯಕರ್ತರು,ಮುಖಂಡರು,ನಾಡಗೌಡರ ಅಭಿಮಾನಿಗಳು ಭಾಗವಹಿಸಿದ್ದರು. ಬನಶಂಕರಿ ದೇವಸ್ಥಾನದಿಂದ ಪ್ರಮುಖ ಬೀದಿಯಲ್ಲಿ ಹಾಯ್ದು ಬಸವೇಶ್ವರ ವೃತ್ತದಲ್ಲಿ ಬಹಿರಂಗ ಸಮಾವೇಶ ನಡೆಸಲಾಯಿತು.ಡಿವೈಎಸ್‌ಪಿ ಚಂದ್ರಕಾoತ ನಂದರೆಡ್ಡಿ, ಸಿಪಿಐ ಮೊಹ್ಮದಫಸಿವುದ್ದೀನ, ಮುದ್ದೇಬಿಹಾಳ ಪಿಎಸ್‌ಐ ಸಂಜಯ ತಿಪರೆಡ್ಡಿ,ತಾಳಿಕೋಟಿ ಪಿಎಸ್‌ಐ ಜ್ಯೋತಿ ಖೋತ ಸೇರಿದಂತೆ ನಿಡಗುಂದಿ,ಕೊಲ್ಹಾರ,ಬ.ಬಾಗೇವಾಡಿ ಠಾಣೆಗಳಿಂದ ಪೊಲೀಸರು ಆಗಮಿಸಿ ಬಿಗಿ ಬಂದೋಬಸ್ತ್ ವಹಿಸಿದ್ದರು.

ಸ್ ಬಂದ್ ವೃದ್ಧರು,ಮಹಿಳೆಯರ ಪರದಾಟ: ಸಾರಿಗೆ ಘಟಕದಿಂದ ಹೊರ ಹೋಗುವ ಎಲ್ಲ ಬಹುತೇಕ ಮಾರ್ಗಗಳ ಬಸ್‌ಗಳನ್ನು ಊರಿನಿಂದ ಹೊರಗಡೆ ಎರಡು ಕಿ.ಮೀ ಅಂತರದಿoದ ಕಾರ್ಯಾಚರಣೆ ನಡೆಸಿದ್ದರಿಂದ ಪ್ರಯಾಣಿಕರು ತೀವ್ರ ಪರದಾಟ ಅನುಭವಿಸಬೇಕಾಯಿತು.ಮಹಿಳೆಯರು,ಸಣ್ಣ ಸಣ್ಣ ಮಕ್ಕಳನ್ನು ಕರೆತಂದಿದ್ದ ತಾಯಂದಿರು,ಸರಕು ಸರಂಜಾಮುಗಳನ್ನು ತಂದಿದ್ದ ಮಹಿಳೆಯರು,ಬೆಳಗ್ಗೆಯೇ ಕಾಲೇಜುಗಳಿಗೆ ಬಂದಿದ್ದ ವಿದ್ಯಾರ್ಥಿಗಳು ಕಿ.ಮಿ ಗಟ್ಟಲೇ ನಡೆದುಕೊಂಡು ಸಾಗಿ ಊರ ಹೊರಗಡೆ ಬಸ್ ನಿಲುಗಡೆ ಮಾಡಿದ್ದಲ್ಲಿಗೆ ತೆರಳಿದರು.ಕೆಲವರು ಈ ಬಂದ್ ಮಾಡಿದ್ದಕ್ಕೆ ಹಿಡಿಶಾಪ ಹಾಕಿದರು.

Latest News

58 ವರ್ಷಗಳ ಬಳಿಕ ಮುದ್ದೇಬಿಹಾಳದಲ್ಲಿ ಚಾತುರ್ಮಾಸ್ಯ ಮಹೋತ್ಸವ

58 ವರ್ಷಗಳ ಬಳಿಕ ಮುದ್ದೇಬಿಹಾಳದಲ್ಲಿ ಚಾತುರ್ಮಾಸ್ಯ ಮಹೋತ್ಸವ

ಮುದ್ದೇಬಿಹಾಳ : ಪಟ್ಟಣದಲ್ಲಿ ಸುಮಾರು 58 ವರ್ಷಗಳ ಬಳಿಕ ಪ್ರಥಮವಾಗಿ ಹುಣಶಿಹೊಳೆ ಕಣ್ವಮಠದ ಪೀಠಾಧಿಕಾರಿಗಳಾದ

ಅಸ್ವಸ್ಥಗೊಂಡ ಬಿದ್ದಿದ್ದ ನರಿ ಮರಿಗೆ ಚಿಕಿತ್ಸೆ:                ಮಾನವೀಯತೆ ಮೆರೆದ ಯುವಕರು, ಅಧಿಕಾರಿಗಳ ತಂಡ

ಅಸ್ವಸ್ಥಗೊಂಡ ಬಿದ್ದಿದ್ದ ನರಿ ಮರಿಗೆ ಚಿಕಿತ್ಸೆ: ಮಾನವೀಯತೆ ಮೆರೆದ ಯುವಕರು, ಅಧಿಕಾರಿಗಳ ತಂಡ

ಮುದ್ದೇಬಿಹಾಳ : ವಾಯುವಿಹಾರಕ್ಕೆಂದು ಹೋಗಿದ್ದ ಮೂವರು ಯುವಕರ ತಂಡವೊoದರ ಕಣ್ಣಿಗೆ ಬಿದ್ದ ಅಸ್ವಸ್ಥಗೊಂಡ ನರಿ

ಅಧಿಸೂಚನೆ ಪ್ರಕಟ; ನಾಮಪತ್ರ ಸಲ್ಲಿಕೆ ಶುರು;           ಮುದ್ದೇಬಿಹಾಳ ಅಂಜುಮನ್ ಕಮೀಟಿಗೆ ಚುನಾವಣೆ ಘೋಷಣೆ

ಅಧಿಸೂಚನೆ ಪ್ರಕಟ; ನಾಮಪತ್ರ ಸಲ್ಲಿಕೆ ಶುರು; ಮುದ್ದೇಬಿಹಾಳ ಅಂಜುಮನ್ ಕಮೀಟಿಗೆ ಚುನಾವಣೆ ಘೋಷಣೆ

ಮುದ್ದೇಬಿಹಾಳ : ಇಲ್ಲಿಯ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಕಮೀಟಿಯ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ:      ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು

S.I.R-ಮುದ್ದೇಬಿಹಾಳ ಮತಕ್ಷೇತ್ರ :  ಇಬ್ಬರು ಬಿಎಲ್‌ಓಗಳಿಂದ ಶೇ.100ರಷ್ಟು ಕಾರ್ಯ ಪೂರ್ಣ

S.I.R-ಮುದ್ದೇಬಿಹಾಳ ಮತಕ್ಷೇತ್ರ : ಇಬ್ಬರು ಬಿಎಲ್‌ಓಗಳಿಂದ ಶೇ.100ರಷ್ಟು ಕಾರ್ಯ ಪೂರ್ಣ

ಮುದ್ದೇಬಿಹಾಳ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಬಿಎಲ್‌ಓಗಳು,ಮೇಲ್ವಿಚಾರಕರು,ಬಿಎಲ್‌ಎಗಳ ಹಾಗೂ ಮತದಾರರ ಸಹಕಾರದಿಂದ ಗಣತಿ ನಮೂನೆಗಳ ವಿತರಣೆ ಕಾರ್ಯದಲ್ಲಿ ಮುದ್ದೇಬಿಹಾಳ ಮತಕ್ಷೇತ್ರ ಶೇ.98.38ರಷ್ಟು ಸಾಧನೆ ಮಾಡಿ ವಿಜಯಪುರ ಜಿಲ್ಲೆಗೆ ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ಮತದಾರರ ನೋಂದಣಾಧಿಕಾರಿ,ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಬಿ.ಎ.ಸೌದಾಗರ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಎಸ್‌ಐಆರ್ ಪ್ರಕ್ರಿಯೆಯ ಕುರಿತು ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.2,28,285 ಮತದಾರರಲ್ಲಿ 2,24,589 ಮತದಾರರಿಗೆ ಗಣತಿ ನಮೂನೆ

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಎನ್ರೋಲ್‌ಮೆಂಟ್ ಆಗದಿದ್ದರೆ ಸರ್ಕಾರಿ ಯೋಜನೆಗಳು ಸಿಗಲ್ಲ-ನಾಡಗೌಡ

ಮುದ್ದೇಬಿಹಾಳ : ಮುಖ್ಯಮಂತ್ರಿಗಳು ಹೇಳಿದಂತೆ ನೀವು ಮತದಾರರಾಗಿ ನೋಂದಾಯಿಸಿಕೊಳ್ಳದಿದ್ದರೆ ಸರಕಾರದ ಯಾವುದೇ ಯೋಜನೆ ಕೊಡುವುದಕ್ಕೆ ಬರುವುದಿಲ್ಲ.ಪಂಚ ಗ್ಯಾರಂಟಿ ಹಿಡಿದು ಗಂಗಾಕಲ್ಯಾಣ,ಮಕ್ಕಳ ಸ್ಕಾಲರಶಿಪ್ ಸೇರಿದಂತೆ ಸರ್ಕಾರಿ ಯೋಜನೆಗಳು ನಿಮಗೆ ದೊರೆಯುವುದಿಲ್ಲ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಎಲ್‌ಎ-2 ಗಳಿಗಾಗಿ ಏರ್ಪಡಿಸಿದ್ದ ಎಸ್‌ಆಯ್‌ಆರ್ ಪ್ರಕ್ರಿಯೆ ಕುರಿತು ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.ಮತದಾನ ನಿಮ್ಮ ಜೀವನದ ಹಕ್ಕು.ಸರ್ಕಾರದ ಎಲ್ಲ ಯೋಜನೆಗಳನ್ನು ಪಡೆದುಕೊಳ್ಳಬೇಕಾದರೆ ಎನ್ರೋಲಮೆಂಟ್ ಆಗುವುದು ಕಡ್ಡಾಯವಾಗಿದೆ.ಈ