ಮುದ್ದೇಬಿಹಾಳ : ಪಕ್ಕದ ಲಿಂಗಸ್ಗೂರು ತಾಲ್ಲೂಕಿನ ಸುಣಕಲ್ನಲ್ಲಿ ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ನೇತೃತ್ವದಲ್ಲಿ ಸ್ಥಾಪಿಸಲಾಗಿರುವ ಆರ್.ಬಿ.ಶುಗರ್ಸಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭಗೊoಡಿಲ್ಲ ಎಂದು ನಾಲತವಾಡ ಭಾಗದ ರೈತರು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ತಮ್ಮ ಅನುಭವ ಹಂಚಿಕೊoಡಿರುವ ಕಬ್ಬು ಬೆಳಗಾರರಾದ ಮಲ್ಲಪ್ಪ ತಾತರೆಡ್ಡಿ,ಶರಣು ಕಾನಿಕೇರಿ,ಬಾಬು ಕ್ಷತ್ರಿ,ಅಮರೇಶ ಮುದಗಲ್,ಪವಾಡೆಪ್ಪ ಬಂಡಿವಡ್ಡರ,ದ್ಯಾಮಣ್ಣ ಕೋಳಿ,ಶಾಂತಗೌಡ ಪಾಟೀಲ,ಅಮರೇಶ ಪಾಟೀಲ ಮೊದಲಾದವರ ತಂಡ ಸುಣಕಲ್ದ ಆರ್.ಬಿ.ಶುಗರ್ಸಗೆ ಭೇಟಿ ನೀಡಿದ ಸಮಯದಲ್ಲಿ ಕಂಡು ಬಂದಿರುವ ವಾಸ್ತವ ಸ್ಥಿತಿಯ ಕುರಿತು ಮಾಹಿತಿ ಹಂಚಿಕೊoಡರು.
ಆರ್.ಬಿ.ಶುರ್ಸ್ನಲ್ಲಿ ಇನ್ನೂ ಕಾರ್ಖಾನೆಗೆ ನೀರಿನ ವ್ಯವಸ್ಥೆ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದ್ದು ಹಲವು ತಾಂತ್ರಿಕ ಕೆಲಸಗಳು ಬಾಕಿ ಇವೆ.ಈ ಹಿನ್ನೆಲೆಯಲ್ಲಿ ನ.20ರಂದು ಕೇನ್ ಕ್ಯಾರಿಯರ್ ಪೂಜೆ ಮಾತ್ರ ನೆರವೇರಿಸಿದ್ದು ಕಬ್ಬು ನುರಿಸುವ ಕಾರ್ಯ ಇನ್ನೂ ಆರಂಭವಾಗಿಲ್ಲ ಎಂಬುದನ್ನು ಕಾರ್ಖಾನೆಯವರು ನಮಗೆ ತಿಳಿಸಿದರು ಎಂದು ರೈತ ಮಲ್ಲಪ್ಪ ತಾತರೆಡ್ಡಿ ಮಾಹಿತಿ ನೀಡಿದರು.
ಈಗಾಗಲೇ ಬೆಳೆದಿರುವ ಕಬ್ಬು ಹೊಲದಲ್ಲಿ ಒಣಗಲು ಶುರು ಮಾಡಿದ್ದು ಆದಷ್ಟು ಬೇಗನೇ ಕಬ್ಬು ನುರಿಸುವ ಕಾರ್ಯ ಆರಂಭವಾಗಬೇಕಿದೆ.ನಮ್ಮ ತಾಲ್ಲೂಕಿನಲ್ಲಿರುವ ಬಾಲಾಜಿ ಸಕ್ಕರೆ ಕಾರ್ಖಾನೆಯವರು ಕಬ್ಬಿನ ಗ್ಯಾಂಗ್ಗಳನ್ನು ಮೊದಲು ದೂರದಲ್ಲಿರುವ ಊರಿನ ಕಬ್ಬು ಕಟಾವು ಮಾಡಿಸಲು ಕಳಿಸಿರುತ್ತಾರೆ.ಹತ್ತಿರದಲ್ಲಿರುವ ಊರಿನವರ ಕಬ್ಬು ಕಟಾವು ಮಾಡಲು ವಿಳಂಬವಾಗುತ್ತದೆ.ಆದರೆ ಗ್ಯಾಂಗ್ನವರ ಅಲಭ್ಯತೆಯಿಂದ ತ್ವರಿತವಾಗಿ ಕಬ್ಬು ಸಾಗಾಣಿಕೆಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಆರoಭವಾಗದ ಕಾರ್ಖಾನೆಯಿಂದ ದರ ಘೋಷಣೆ ಅಸಾಧ್ಯ : ಆರ್.ಬಿ.ಶುಗರ್ಸ ಇನ್ನೂ ಕಬ್ಬು ನುರಿಸುವ ಕಾರ್ಯವೇ ಆರಂಭವಾಗಿಲ್ಲ.ದರ ಘೋಷಣೆ ಮಾಡಲು ಹೇಗೆ ಸಾಧ್ಯವಿದೆ ಎಂಬ ಮಾತುಗಳು ರೈತರಿಂದ ಕೇಳಿ ಬಂದಿವೆ.ರೈತರು ಪರ್ಯಾಯ ಕಾರ್ಖಾನೆಗಳನ್ನು ತಮ್ಮ ಹೊಲದಲ್ಲಿ ಬೆಳೆದಿರುವ ಕಬ್ಬನ್ನು ಸಾಗಿಸಲು ಹುಡುಕಾಟ ನಡೆಸುತ್ತಿದ್ದಾರೆ.ಆದಷ್ಟು ಬೇಗನೇ ಕೊಟ್ಟ ಮಾತಿನಂತೆ ಕಾರ್ಖಾನೆ ಆರಂಭವಾಗಲಿ ಎಂಬ ಆಶಯವನ್ನು ಕಬ್ಬು ಬೆಳೆಗಾರರು ಇಟ್ಟುಕೊಂಡಿದ್ದಾರೆ.
10 ದಿನ ವಿಳಂಬ : ಆರ್.ಬಿ.ಶುಗರ್ಸ ಪಿಆರ್ಓ ಅಮೀತ ನಲವಡೆ ಮಾತನಾಡಿ, ಚಾಲ್ತಿಯಲ್ಲಿರುವ ಕಾರ್ಖಾನೆಯಾಗಿದ್ದರೆ ಕಬ್ಬು ನುರಿಸುವ ಕಾರ್ಯ ಯಾವುದೇ ಆತಂಕವಿಲ್ಲದೇ ನಡೆಯುತ್ತಿತ್ತು.ಆದರೆ ನಮ್ಮ ಕಾರ್ಖಾನೆ ಹೊಸದು.ಎಲ್ಲವೂ ಆರಂಭಿಸುವ ವೇಳೆ ಒಂದಿಲ್ಲೊoದು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.ಆದ್ದರಿಂದ ಸುಮಾರು 10 ದಿನಗಳ ಕಾಲ ಬಾಕಿ ಕೆಲಸಗಳಿದ್ದು ಅವುಗಳನ್ನು ಪೂರ್ಣಗೊಳಿಸುವ ಕಾರ್ಯ ಮಾಡಲಾಗುತ್ತಿದೆ.ನೀರಿನ ವ್ಯವಸ್ಥೆಗಾಗಿ ಬೋರವೆಲ್ಗಳನ್ನು ಕೊರೆಯಿಸಲಾಗಿದೆ.ಆದಷ್ಟು ಬೇಗನೇ ಕಾರ್ಖಾನೆ ಆರಂಭಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದರಲ್ಲದೇ ಕಬ್ಬು ಕಡಿಯುವ ಗ್ಯಾಂಗ್ಗಳನ್ನು ಇನ್ನೂ ನಾವು ಯಾವುದೇ ಕಬ್ಬು ಬೆಳೆಗಾರರ ಹೊಲಕ್ಕೆ ಕಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.







