ಮುದ್ದೇಬಿಹಾಳ : ಪಟ್ಟಣದ ಆಸ್ತಿ ಮಾಲೀಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮುದ್ದೇಬಿಹಾಳ ಪುರಸಭೆ ವ್ಯಾಪ್ತಿಯಲ್ಲಿರುವ ಎಲ್ಲ ಅರ್ಹ ಆಸ್ತಿಗಳಿಗೆ ಡಿಸೆಂಬರ್ 1, 2026ರಿಂದ ಫೆಬ್ರವರಿ 1, 2027ರವರೆಗೆ ವಿಶೇಷ ‘ಇ-ಖಾತಾ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ತಿಳಿಸಿದ್ದಾರೆ.
ಪಟ್ಟಣದ ಪುರಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ (ಪೌರಾಡಳಿತ-2 ಮತ್ತು ಮಂಡಳಿ) ಆದೇಶದನ್ವಯ ‘ಭೂ-ಗ್ಯಾರಂಟಿ’ ಯೋಜನೆಯಡಿ ಬಾಕಿ ಉಳಿದಿರುವ ಎಲ್ಲ ಆಸ್ತಿಗಳಿಗೆ ಇ-ಆಸ್ತಿ ತಂತ್ರಾoಶದ ಮೂಲಕ ಅಭಿಯಾನದ ರೂಪದಲ್ಲಿ ಇ-ಖಾತಾ ವಿತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಆಸ್ತಿ ಮಾಲೀಕರು ನಿಗದಿತ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಪುರಸಭೆ ಕಾರ್ಯಾಲಯಕ್ಕೆ ಸಲ್ಲಿಸುವ ಮೂಲಕ ಈ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ವಿನಂತಿಸಿದ್ದಾರೆ.ಪುರಸಭೆ ಕಂದಾಯ ಅಧಿಕಾರಿ ಎನ್.ಎಸ್.ಪಾಟೀಲ,ಆರೋಗ್ಯ ನಿರೀಕ್ಷಕರಾದ ಜಾವೇದ ನಾಯ್ಕೋಡಿ,ಮಹಾಂತೇಶ ಕಟ್ಟೀಮನಿ,ಸಿಬ್ಬಂದಿ ಶಮ್ಸುದ್ದೀನ ಮೂಲಿಮನಿ ಮೊದಲಾದವರು ಇದ್ದರು.







