ಮುದ್ದೇಬಿಹಾಳ : ತಾಲ್ಲೂಕಿನ ದೇವೂರು ಜಾಕವೆಲ್ ಹಾಗೂ ನೇಬಗೇರಿ ಹತ್ತಿರ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಕೊಳವೆ ಪೈಪ್ಲೈನ್ದಲ್ಲಿ ದುರಸ್ತಿ ಬಂದಿರುವ ಕಾರಣ ಪಟ್ಟಣಕ್ಕೆ ಆ.8ರ ವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕಿರಿಯ ಅಭಿಯಂತರ ಜಾವೇದ ನಾಯ್ಕೋಡಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ನೇಬಗೇರಿ ಬಳಿ ಮಹಾದೇವಪ್ಪ ಕರಮುಡಿ ಅವರ ಹೊಲದಲ್ಲಿ ನೀರು ಸೋರಿಕೆ ಆಗುತ್ತಿದ್ದು ಪಟ್ಟಣಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಅವರು ವಿನಂತಿಸಿದ್ದಾರೆ.