ಮುದ್ದೇಬಿಹಾಳ : ಸಮಾಜದಲ್ಲಿ ಆರ್ಥಿಕವಾಗಿ ಸಬಲತೆ ಸಾಧಿಸಿದವರು ಬಡವರು,ನಿರ್ಗತಿಕರಿಗೆ ಹಬ್ಬದ ಸಮಯಗಳಲ್ಲಿ ನೆರವಾಗುವ ಕಾರ್ಯ ಮಾಡಬೇಕು ಎಂದು ಸಿಪಿಐ ಮೊಹ್ಮದ್ ಫಸಿವುದ್ದೀನ್ ಹೇಳಿದರು.
ಪಟ್ಟಣದ ಹುಡ್ಕೋದಲ್ಲಿರುವ ಉದ್ಯಮಿ ಅಯ್ಯೂಬ ಮನಿಯಾರ್ ಅವರ ಮನಿಯಾರ್ ಚಾರಿಟೇಬಲ್ ಟ್ರಸ್ಟ್ನಿಂದ ಮಂಗಳವಾರ ರಂಜಾನ್ ಹಬ್ಬದ ನಿಮಿತ್ಯ ಬಡವರಿಗೆ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನಿಯಾರ್ ಅವರು ತಮ್ಮ ತಂದೆ ತಾಯಿ ಸ್ಮರಣಾರ್ಥ ಈ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ.ಆರ್ಥಿಕ ಸಬಲತೆ ಸಾಧಿಸಿದವರು ಇಂತಹ ಕಾರ್ಯಗಳನ್ನು ಮಾಡುತ್ತಿದ್ದರೆ ಎಲ್ಲ ಹಬ್ಬಗಳನ್ನು ಸಂತಸದಿAದ ಆಚರಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.ರAಜಾನ್ ಹಬ್ಬದಲ್ಲಿ ರೋಜಾ ಎಲ್ಲ ಮುಸ್ಲಿಂರಿಗೆ ಕಡ್ಡಾಯವಾಗಿದೆ.ಅದು ಪಂಚೇAದ್ರಿಯಗಳ ನಿಯಂತ್ರಣ ಮಾಡಲು ಆಚರಣೆ ಮಾಡಬೇಕು.ತೋರಿಕೆಗಾಗಿ ರೋಜಾ ಇದ್ದೇನೆ ಎನ್ನುವುದು ನಮಗೆ ನಾವೇ ಮಾಡಿಕೊಳ್ಳುವ ಮೋಸವಾಗಿದೆ.ಬಡವರ,ನಿರ್ಗತಿಕರ ಸೇವೆ ಮಾಡಲು ಮನಿಯಾರ್ ಅವರ ಕಾರ್ಯ ಪ್ರೋತ್ಸಾಹದಾಯಕವಾಗಿದೆ ಎಂದರು.
ಇಳಕಲ್‌ನ ಉಪನ್ಯಾಸಕ ಲಾಲ್‌ಹುಸೇನ್ ಕಂದಗಲ್ ಮಾತನಾಡಿ, ಇದು ಜೀವನದ ಪರೀಕ್ಷಾ ಕಾರ್ಯವಾಗಿದೆ.ಇಲ್ಲಿ ಬಡತನದಲ್ಲಿದ್ದವರು ಕೀಳರಿಮೆಯಿಂದ ಬದುಕಬಾರದು.ನಿರಂತರ ಪ್ರಯತ್ನ ಮಾಡಿದ ಬಳಿಕ ಹೊಟ್ಟೆ ತುಂಬದಿದ್ದರೆ ಅದು ದೇವರು ಮಾಡುತ್ತಿರುವ ಪರೀಕ್ಷೆ. ಬಡವರನ್ನು ಗುರುತಿಸಿ ಅವರಿಗೆ ನೀಡುವುದು ಹೃದಯವಂತರ ಲಕ್ಷಣವಾಗಿದೆ.ಅಯ್ಯೂಬ ಮನಿಯಾರ ಹೃದಯವಂತಿಕೆಯುಳ್ಳ ವ್ಯಕ್ತಿಯಾಗಿದ್ದಾರೆ.ಸಮಾಜದಲ್ಲಿ ನಿಸ್ವಾರ್ಥದ ಸೇವೆ ಅಗತ್ಯವಾಗಿದೆ.ಜಕಾತ್ ಬಡವರ ಸ್ವಾಭಿಮಾನಕ್ಕೆ ಧಕ್ಕೆಯಾಗದ ರೀತಿಯಲ್ಲಿ ದಾನ ಮಾಡಬೇಕು ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ ಬಿ.ಆರ್.ಚೌಕಿಮಠ ಮಾತನಾಡಿ, ಬಡವರ ನೋವನ್ನು ಅರ್ಥ ಮಾಡಿಕೊಂಡವರಿAದಲೇ ಇಂತಹ ಕೆಲಸಗಳು ಸಾಧ್ಯವಾಗುತ್ತದೆ.ದೊಡ್ಡಸ್ತಿಕೆಗಾಗಿ ಕಿಟ್ ಕೊಡುತ್ತಿಲ್ಲ.21 ನೇ ಶತಮಾನದಲ್ಲಿ ಭಾರತದ ಇಸ್ಲಾಮಿಕ್ ಜನರು ನಮ್ಮ ಕುಟುಂಬವಾಗಿದೆ.ಇಸ್ಲಾಮಿಕ್ ಕಾರ್ಯಕ್ರಮಗಳಿಗೆ ಹಿಂದೂಗಳನ್ನು ಆಹ್ವಾನಿಸುವ ಕಾರ್ಯ ಸೌಹಾರ್ದತೆಯ ಪ್ರತೀಕ.ಯಾವ ಧರ್ಮದಲ್ಲೂ ಮತ್ತೊಂದು ದೇಶದ ಮೇಲೆ ಯುದ್ಧ ಮಾಡು ಎಂದು ಹೇಳಿಲ್ಲ.ಆದರೆ ಪ್ರಪಂಚದ ಅಧಿಪತಿಯಾಗಬೇಕು ಹೊರಟಾಗ ಅಹಂಕಾರ,ಅಳಿವು ಬಂದಾಗ ಯುದ್ಧಗಳೇ ಅಂತವರಿಗೆ ಪಾಠ ಕಲಿಸುತ್ತವೆ.ರಾಜಕೀಯ ದುರ್ವವ್ಯಸ್ಥೆ, ಜಾತಿಯ ಮುಖಾಂತರ ಇಸ್ಲಾಮಿಕ್ ದೇಶಗಳೇ ಪರಸ್ಪರ ಹೊಡೆದಾಡುತ್ತಿರುವುದು ಅಚ್ಚರಿದಾಯಕ ಸಂಗತಿಯಾಗಿದೆ.ಹಪಹಪಿತ ಇದ್ದವರು ಜನಸೇವೆ ಮಾಡಲು ಮುಂದಾಗುವುದಿಲ್ಲ.ಧರ್ಮಕ್ಕೆ ಅನ್ಯಾಯ ಬಗೆದರೆ ಶಾಂತಿ ಎಂದಿಗೂ ಸಿಗುವುದಿಲ್ಲ.ಭಾರತ ದೇಶವನ್ನ ಧರ್ಮ ಕಾಪಾಡುತ್ತಿದೆ ಎಂದು ಹೇಳಿದರು.
ಮನಿಯಾರ ಚಾರಿಟೇಬಲ್ ಟ್ರಸ್ಟ್ನ ಸಂಚಾಲಕ ಅಯ್ಯೂಬ ಮನಿಯಾರ ಮಾತನಾಡಿ, 1998ರಿಂದ ಕಿಟ್ ಕೊಡುತ್ತಾ ಬಂದಿದ್ದೇನೆ.ಆರAಭದಲ್ಲಿ ತಾಲ್ಲೂಕಿನಲ್ಲಿ 400 ಕಿಟ್‌ಗಳನ್ನು ಕೊಡುತ್ತಿದ್ದೇವು.ಈಗ ಆ ಸಂಖ್ಯೆ 2500 ತಲುಪಿದೆ.ಬಡವರ ಸೇವೆಯಲ್ಲಿ ದೇವರನ್ನು ಕಾಣಬಹುದು.ಕಿಟ್ ಪಡೆದುಕೊಳ್ಳುವವರಲ್ಲಿ ನನ್ನ ತಮ್ಮ,ಅಣ್ಣ,ತಾಯಿ,ತಂದೆ ನನ್ನನ್ನು ಅವರ ರೂಪದಲ್ಲಿ ಭೇಟಿಯಾಗಲು ಬಂದಿದ್ದಾರೆ ಎನ್ನುವ ಭಾವನೆ ನನ್ನದು.ಅವರೇ ನನಗೆ ಆಶೀರ್ವಾದ ಮಾಡಿದಂತೆ.ಉಳಿತಾಯದಿAದ ಜನಸೇವೆ ಮಾಡಲು ಸಾಧ್ಯವಿದೆ ಎಂದು ಹೇಳಿದರು.
ಆಲಮೇಲದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ ಮಾತನಾಡಿ, ಬಡವರ ಅಂತರoಗದಲ್ಲಿ ದೇವರನ್ನು ಕಾಣುವ ಕೆಲಸ ದೊಡ್ದದು.ಉದ್ಯಮಿ ಅಯ್ಯೂಬ ಮನಿಯಾರ ಸೇವಾ ಕಾರ್ಯ ಸಮಾಜಕ್ಕೆ ಪ್ರೇರಣೆದಾಯಕ ಎಂದರು.ಗಣ್ಯರಾದ ಶಂಕರಗೌಡ ಹೊಸಮನಿ,ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ,ನ್ಯಾಯವಾದಿ ವಿ.ಎಸ್.ಸಾಲಿಮಠ,ಬನಶ್ರೀ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ರೂಪಸಿಂಗ ಲೋಣಾರಿ, ಮೌಲಾನಾ ಅಲ್ಲಾಭಕ್ಷ ಖಾಜಿ, ಟ್ರಸ್ಟ್ ಕಾರ್ಯದರ್ಶಿ ಅಫ್ತಾಬ ಮನಿಯಾರ, ನಿಂಗಣ್ಣ ಬೈಚಬಾಳ,ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ವಾಯ್.ಎಚ್.ವಿಜಯಕರ್ ಇದ್ದರು. ಮೌಲಾನಾ ಅಫ್ತಾಬ್ ಖುರಾನ್ ಪಠಣ ಮಾಡಿದರು.ಮುಜಾಹಿದ್ ನಮಾಜಕಟ್ಟಿ ನಿರೂಪಿಸಿದರು.
ಸೌಹಾರ್ದತೆ ಮೆರೆದ ಮನಿಯಾರ್ : 600 ಬಡವರಿಗೆ ಕಿಟ್ ವಿತರಣೆ:
ಮುದ್ದೇಬಿಹಾಳ ಪಟ್ಟಣದ ವಿವಿಧ ಬಡಾವಣೆಗಳಿಂದ ಆಗಮಿಸಿದ್ದ ಬಡ ಮುಸ್ಲಿಂ ಜನಾಂಗದವರಷ್ಟೇ ಅಲ್ಲದೇ ಇತರೆ ಧರ್ಮೀಯರಿಗೂ ಸುಮಾರು 600 ಜನರಿಗೆ ರಂಜಾನ್ ಹಬ್ಬದ ಕಿಟ್‌ಗಳನ್ನು ಉದ್ಯಮಿ ಅಯ್ಯೂಬ್ ಮನಿಯಾರ ಅವರು ವಿತರಿಸುವ ಮೂಲಕ ಹಿಂದೂ ಮುಸ್ಲಿಂ ಬಾಂಧವರನ್ನು ಸರಿಸಮಾನವಾಗಿ ಕಂಡು ಸೌಹಾರ್ದತೆ ಮೆರೆದರು.







