ತಾಲ್ಲೂಕು ಆಡಳಿತದಿಂದ ಕನಕ ಜಯಂತಿ: ಮಾನವೀಯತೆ, ಸಮಾನತೆಗೆ ಕನಕದಾಸರ ಬದುಕೇ ಮಾದರಿ-ಬಡದಾನಿ

ತಾಲ್ಲೂಕು ಆಡಳಿತದಿಂದ ಕನಕ ಜಯಂತಿ: ಮಾನವೀಯತೆ, ಸಮಾನತೆಗೆ ಕನಕದಾಸರ ಬದುಕೇ ಮಾದರಿ-ಬಡದಾನಿ

ಮುದ್ದೇಬಿಹಾಳ : 15ನೇ ಶತಮಾನದಲ್ಲಿಯೇ ಸಮಾಜಕ್ಕೆ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ದಾರ್ಶನಿಕ ಸಂತ ಕನಕದಾಸರು.ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಜಾತಿ ವ್ಯವಸ್ಥೆ ಹಾಗೂ ಮೇಲು-ಕೀಳು ಎಂಬ ಭಾವನೆಗಳನ್ನು ಹೋಗಲಾಡಿಸಲು ಶ್ರಮಿಸಿದ್ದರು. ಭಕ್ತಿಮಾರ್ಗವನ್ನು ಅನುಸರಿಸುವ ಮೂಲಕ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯತೆಯ ಸಂದೇಶವನ್ನು ಸಾರಿದ ಅವರ ಚಿಂತನೆಗಳು ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿವೆ ಎಂದು ಬಿಇಒ ಎಂ.ಎಸ್. ಬಡದಾನಿ ಹೇಳಿದರು.

ಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ಶುಕ್ರವಾರ ಆಯೋಜಿಸಿದ್ದ ಸಂತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಕದಾಸರ ಕೀರ್ತನೆಗಳು ಕೇವಲ ಭಕ್ತಿಯ ಅಭಿವ್ಯಕ್ತಿಯಾಗಿರದೆ, ಸಾಮಾಜಿಕ ಪರಿವರ್ತನೆಗೆ ದಾರಿದೀಪವಾಗಿವೆ. ಜಾತಿ-ಧರ್ಮದ ಭೇದಭಾವವಿಲ್ಲದೆ ಎಲ್ಲರೂ ಸಮಾನರು ಎಂಬ ಸಂದೇಶವನ್ನು ಅವರು ತಮ್ಮ ಕೀರ್ತನೆಗಳ ಮೂಲಕ ಸಾರಿದ್ದಾರೆ ಎಂದರು.

ಎಂಜಿವಿಸಿ ಕಾಲೇಜಿನ ಉಪನ್ಯಾಸಕ ವಿ.ಎಸ್.ಲಮಾಣಿ ಮಾತನಾಡಿ, ಕನಕದಾಸರ ಜೀವನ, ಸಾಹಿತ್ಯ ಹಾಗೂ ಸಾಮಾಜಿಕ ಕೊಡುಗೆಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಸಂತ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವಿಸಲಾಯಿತು.

ಕುರುಬರ ಸಂಘದ ತಾಲೂಕು ಅಧ್ಯಕ್ಷ ಎಂ.ಎನ್. ಮದರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ. ಬಿರಾದಾರ,ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಕಾಂಗ್ರೆಸ್ ಮುಖಂಡ ವೈ.ಎಚ್. ವಿಜಯಕರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.. ಬೆಳಗಲ್, ಜಿಪಂ ಮಾಜಿ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ, ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಶಿವಾನಂದ ಮೇಟಿ, ಉಪನ್ಯಾಸಕ ಎಸ್.ಕೆ. ಹರನಾಳ, ಜಿಪಂ ಮಾಜಿ ಸದಸ್ಯ ಬಿ.ಎಸ್. ಶಿರೋಳ, ಪುರಸಭೆ ಮಾಜಿ ಸದಸ್ಯೆ ಸಂಗಮ್ಮ ದೇವರಳ್ಳಿ, ಶಿರಸ್ತೇದಾರ ಎಂ.ಎಸ್. ಬಾಗೇವಾಡಿ, ಗಣ್ಯ ವರ್ತಕ ಬಿ.ಎಸ್. ಮೇಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಪಟ್ಟಣದಲ್ಲಿ ಸಂತ ಕನಕದಾಸರ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನಡೆಸಲಾಯಿತು.

ಮೆರವಣಿಗೆ ಮಾರ್ಗದಲ್ಲಿ ಕುಡಿವ ನೀರಿಗೆ ಪರದಾಡಿದ ವಿದ್ಯಾರ್ಥಿಗಳು: ಪಟ್ಟಣದ ಸಂತ ಕನಕದಾಸ ಶಾಲೆಯ ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಮಕ್ಕಳನ್ನು ಸಂತ ಕನಕದಾಸರ ಶಾಲೆಯಲ್ಲಿ ಅಲ್ಪೋಪಹಾರ ಮಾಡಿಸಿಕೊಂಡು ಕನಕದಾಸರ ಭಾವಚಿತ್ರದ ಮೆರವಣಿಗೆಯಲ್ಲಿ ಕರೆದೊಯ್ಯಲಾಗಿತ್ತು.ಸಂತ ಕನಕದಾಸ ಶಾಲೆಯಿಂದ ಬಸವೇಶ್ವರ ವೃತ್ತ,ಸಂತ ಕನಕದಾಸ ವೃತ್ತ,ಅಂಬೇಡ್ಕರ್ ವೃತ್ತ,ರಾಯಣ್ಣ ವೃತ್ತ,ರಾಘವೇಂದ್ರ ಮಠ,ಲಕ್ಷಿö್ಮÃವೆಂಕಟೇಶ್ವರ ದೇವಸ್ಥಾನ,ಗ್ರಾಮದೇವತೆ ಕಟ್ಟೆ,ಮುಖ್ಯರಸ್ತೆಯಿಂದ ತಾಲ್ಲೂಕು ಆಡಳಿತ ಸೌಧದ ಪಕ್ಕದ ಅಂಬೇಡ್ಕರ ಸಭಾಂಗಣಕ್ಕೆ ವಿದ್ಯಾರ್ಥಿಗಳನ್ನು ಕರೆತರಲಾಯಿತು. ಈ ಮಾರ್ಗದಲ್ಲಿ ಬಿಸಿಲಿನಿಂದ ಬಾಯಾರಿದ ವಿದ್ಯಾರ್ಥಿಗಳು ಕುಡಿವ ನೀರಿಗಾಗಿ ಹೊಟೇಲ್,ಅಂಗಡಿಗಳನ್ನು ಆಶ್ರಯಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.ಮೋಟಗಿ ಕಾಂಪ್ಲೆಕ್ಸ್ನಲ್ಲಿರುವ ಅಪ್ಸರಾ ಟೇಲರ್ ಅಂಗಡಿಯವರು ತಮ್ಮಲ್ಲಿದ್ದ ಕುಡಿವ ನೀರಿನ ಎರಡು ಕ್ಯಾನಗಳನ್ನು ಮಕ್ಕಳಿಗೆ ಕೊಟ್ಟು ಮಾನವೀಯತೆ ಮೆರೆದರು.ಶಾಲೆ ಆಡಳಿತ ಮಂಡಳಿ ಹಾಗೂ ತಾಲ್ಲೂಕು ಆಡಳಿತ ವಿದ್ಯಾರ್ಥಿಗಳನ್ನು ಕಾಳಜಿಪೂರ್ವಕವಾಗಿ ನಡೆಸಿಕೊಳ್ಳದೇ ಇರುವುದು ಸಾರ್ವಜನಿಕರ ಟೀಕೆಗೆ ಗುರಿಯಾಯಿತು.

Latest News

ಫಲ ನೀಡಿದ ಶಾಸಕರ ಪತ್ರ ವ್ಯವಹಾರ :                                   ಒಣಗುವ ಮೆಣಸಿಣಕಾಯಿ ಬೆಳೆಗೆ ಎಎಲ್‌ಬಿಸಿ ಕಾಲುವೆ ನೀರು

ಫಲ ನೀಡಿದ ಶಾಸಕರ ಪತ್ರ ವ್ಯವಹಾರ : ಒಣಗುವ ಮೆಣಸಿಣಕಾಯಿ ಬೆಳೆಗೆ ಎಎಲ್‌ಬಿಸಿ ಕಾಲುವೆ ನೀರು

ಮುದ್ದೇಬಿಹಾಳ : ಆಲಮಟ್ಟಿ ನೀರಾವರಿ ಸಲಹಾ ಸಮೀತಿ ಅಧ್ಯಕ್ಷ,ಸಚಿವ ವಿಜಯಾನಂದ ಕಾಶಪ್ಪನವರ ಹಾಗೂ ಸಂಬoಧಿಸಿದ

ಆರೋಗ್ಯ ಇಲಾಖೆ ತಂಡದಿoದ ಸಾಧನೆ :                  ಮುದ್ದೇಬಿಹಾಳದಿಂದ 115 ಯೂನಿಟ್ ದಾಖಲೆಯ ರಕ್ತ ಸಂಗ್ರಹ

ಆರೋಗ್ಯ ಇಲಾಖೆ ತಂಡದಿoದ ಸಾಧನೆ : ಮುದ್ದೇಬಿಹಾಳದಿಂದ 115 ಯೂನಿಟ್ ದಾಖಲೆಯ ರಕ್ತ ಸಂಗ್ರಹ

ಮುದ್ದೇಬಿಹಾಳ : ಪಟ್ಟಣದ ಎಂಜಿವಿಸಿ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟಿçÃಯ ಸ್ವಯಂಪ್ರೇರಿತ ರಕ್ತದಾನ

ಬಸರಕೋಡದಲ್ಲಿ ಹಬ್ಬದ ಸಂಭ್ರಮ:                                         ಪವಾಡ ಬಸವೇಶ್ವರರ ನೂತನ ಮೂರ್ತಿ ಪ್ರತಿಷ್ಠಾಪನೆ

ಬಸರಕೋಡದಲ್ಲಿ ಹಬ್ಬದ ಸಂಭ್ರಮ: ಪವಾಡ ಬಸವೇಶ್ವರರ ನೂತನ ಮೂರ್ತಿ ಪ್ರತಿಷ್ಠಾಪನೆ

ಮುದ್ದೇಬಿಹಾಳ : ತಾಲ್ಲೂಕಿನ ಐತಿಹಾಸಿಕ ಸುಕ್ಷೇತ್ರ ಬಸರಕೋಡ ಗ್ರಾಮದಲ್ಲಿ ಮಂಗಳವಾರ ಗೌರಿ ಹುಣ್ಣಿಮೆಯ ದಿನದಂದು

ರವಿ ಹಂಜ್ ಚಿತ್ರಕ್ಕೆ ಬೆಂಕಿ:                                                                ಬಸವ ಪರಂಪರೆ ವಿನಾಶಕ್ಕೆ ಷಡ್ಯಂತ್ರ ನಡೆದಿದೆ-ಬಿದರಕುಂದಿ

ರವಿ ಹಂಜ್ ಚಿತ್ರಕ್ಕೆ ಬೆಂಕಿ: ಬಸವ ಪರಂಪರೆ ವಿನಾಶಕ್ಕೆ ಷಡ್ಯಂತ್ರ ನಡೆದಿದೆ-ಬಿದರಕುಂದಿ

ಮುದ್ದೇಬಿಹಾಳ : ವೀರಶೈವ ಲಿಂಗಾಯತರ ಹೆಗಲ ಮೇಲೆ ಬಂದೂಕು ಇಟ್ಟು ಬಸವ ಪರಂಪರೆಯನ್ನು ಹಾಳು

ಎರಡು ದಿನಗಳಲ್ಲಿ ಕಾಲುವೆಗಳಿಗೆ ನೀರು:  ಅಧಿಕಾರಿಗಳೊಂದಿಗೆಶಾಸಕ ನಾಡಗೌಡರ ಸಮಾಲೋಚನೆ

ಎರಡು ದಿನಗಳಲ್ಲಿ ಕಾಲುವೆಗಳಿಗೆ ನೀರು: ಅಧಿಕಾರಿಗಳೊಂದಿಗೆಶಾಸಕ ನಾಡಗೌಡರ ಸಮಾಲೋಚನೆ

ಮುದ್ದೇಬಿಹಾಳ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ರೈತರ ಜಮೀನುಗಳಿಗೆ ನೀರು ಸಿಗದೆ ತೀವ್ರ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕರಾದ ಸಿ.ಎಸ್. ನಾಡಗೌಡ(ಅಪ್ಪಾಜಿ) ಅವರು ಸಚಿವರು ಹಾಗೂ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಮುದ್ದೇಬಿಹಾಳ ತಾಲ್ಲೂಕಿನ ರೈತರು ಕಾಲುವೆಗಳಿಗೆ ನೀರು ಹರಿಸಿದ್ದಲ್ಲಿ ಅಳಿದುಳಿದ ಬೆಳೆಯನ್ನು ತಗೆದುಕೊಳ್ಳಲು ಸಾಧ್ಯವಾಗುತ್ತದೆ.ಈ ಹಿನ್ನೆಲೆಯಲ್ಲಿ ನೀರು ಹರಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದ್ದರು.ಅದರಂತೆ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ

ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿಗೆ ಅದ್ದೂರಿ ಸ್ವಾಗತ

ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿಗೆ ಅದ್ದೂರಿ ಸ್ವಾಗತ

ಮುದ್ದೇಬಿಹಾಳ : ಕಳ್ಳತನವಾಗಿದ್ದ ಬೆಳ್ಳಿ ಮೂರ್ತಿ ಪೊಲೀಸರ ಚುರುಕಾದ ತನಿಖೆಯಿಂದ ಗಟ್ಟಿ ಬೆಳ್ಳಿ ರೂಪದಲ್ಲಿ ಪತ್ತೆಗೊಂಡು ನಾಲ್ಕು ತಿಂಗಳ ಬಳಿಕ ಮರಳಿ ತಮ್ಮೂರಿಗೆ ಆಗಮಿಸಿದ ಪವಾಡ ಬಸವೇಶ್ವರ ದೇವರ ನೂತನ ಮೂರ್ತಿಯನ್ನು ಕಂಡ ಗ್ರಾಮಸ್ಥರು,ಭಕ್ತರು ಆನಂದಪರವಶರಾಗಿ ಜೈಕಾರ ಹಾಕಿದರು. ತಾಲ್ಲೂಕಿನ ಬಸರಕೋಡದ ಪವಾಡ ಬಸವೇಶ್ವರ ಬೆಳ್ಳಿ ಮೂರ್ತಿಯನ್ನು ಶನಿವಾರ ವಿಜಯಪುರದಿಂದ ನಿಡಗುಂದಿ-ಮುದ್ದೇಬಿಹಾಳ ಮಾರ್ಗವಾಗಿ ಬಸರಕೋಡದ ಸರಕಾರಿ ಪಿಯು ಕಾಲೇಜಿಗೆ ಪೊಲೀಸರ ಭದ್ರತೆಯಲ್ಲಿ ಕರೆತಂದಾಗ ಭಕ್ತಾದಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು. ಊರಿನ